ಬಾಡಿಗೆ ಕೇಳಿದ್ದಕ್ಕೆ ಥಳಿತ
ಕೋಲಾರ: ಅಂಗಡಿ ಬಾಡಿಗೆ ಕೇಳಿದ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಮೇಲೆ ಹಲ್ಲೆ ರಮಣ ಎಂಬುವರು ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದ್ದು ಈ ಸಂಬಂಧ ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಹಲ್ಲೆಗೆ ಒಳಗಾಗಿದ್ದ ಸಂಘದ ಅಧ್ಯಕ್ಷ ಎಂ. ಮಾರುತಿ ಕುಮಾರ್ ಗಾಯಗೊಂಡಿದ್ದು ನಗರದ ಎಸ್.ಎನ್.ಆರ್ . ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾ ಸರ್ಕಾರ ವಾಹನ ಚಾಲಕರ ಸಂಘದ ಕಚೇರಿಯು ಇಲ್ಲಿನ ನ್ಯಾಯಾಲಯದ ವೃತ್ತದಲ್ಲಿದ್ದು ಇದಕ್ಕೆ ಹೊಂದಿಕೊಂಡಿರುವ ಕಟ್ಟಡದ 2 ಕೊಠಡಿಗಳನ್ನು ಬಾಡಿಗೆಗೆ ಪಡೆದಿರುವ ರಮಣ ಎರಡು ವರ್ಷಗಳಿಂದ ಬಾಡಿಗೆ ನೀಡಿರಲಿಲ್ಲವೆನ್ನಲಾಗಿದೆ. ಅಂಗಡಿ ಬಾಡಿಗೆ ಕೇಳಿದ್ದರಿಂದ ಕುಪಿತರಾದ ಆರೋಪಿ ಅವಾಚ್ಯ ಪದಗಳಿಂದ ನಿಂದಿಸಿ, ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಜೊತೆಯಲ್ಲಿದ್ದರೆಂದು ಗಾಯಾಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

