ಕೋಲಾರ

ಮೋದಿ ಪ್ರಧಾನಿ: ಸಂಭ್ರಮ ಇಮ್ಮಡಿ

Published On :

ಬಂಗಾರಪೇಟೆ: ನರೇಂದ್ರ ಮೋದಿ ಪ್ರಧಾನಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂತಸದ ಹಿನ್ನೆಲೆಯಲ್ಲಿ ತಾಲೂಕಿನ ಕಣಿಂಬೆಲೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.  ಸೋಮವಾರ ಬೆಳೆಗ್ಗೆಯಿಂದಲೇ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ನರೇಂದ್ರ ಮೋದಿ ಭಾವ ಚಿತ್ರಕ್ಕೆ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ ನಂತರ ಭರ್ಜರಿ ಪಟಾಕಿಗಳನ್ನು ಸಿಡಿಸಿ, ಇಡೀ ಗ್ರಾಮಕ್ಕೆ ಸಿಹಿ ಹಂಚಿದರು. ಮೋದಿ ಭಾವ ಚಿತ್ರಕ್ಕೆ ರಂಗು ರಂಗಿನ ದೀಪಾಲಂಕಾರ ಮಾಡಿದರು. ಇದೇ ರೀತಿಯಲ್ಲಿ ಕಾರಹಳ್ಳಿ ಗ್ರಾಮದಲ್ಲಿಯೂ ಮೋದಿ ಭಾವಚಿತ್ರಕ್ಕೆ ಮೇಸ್ತ್ರೀ ಸೀನಪ್ಪ ನೇತೃತ್ವದಲ್ಲಿ ಹಾಲಿನ ಅಭಿಷೇಕ ಮಾಡಲಾಯಿತು. ಚಿನ್ನಪ್ಪ, ಕೇಶವ, ಚಲಪತಿ, ಶೇಖರ್, ಶಂಕರ್, ಮನು, ನಂದೀಶ್, ಆಂಜಿ, ನಾಗರಾಜ್ ಸೇರಿ ಅನೇಕರಿದ್ದರು.
ವಿಜಯೋತ್ಸವ ಆಚರಣೆ
ಶಿಡ್ಲಘಟ್ಟ: ನರೇಂದ್ರಮೋದಿ ಭಾರತ ದೇಶದ 14 ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚಿಕೆ ಮಾಡಿ ವಿಜಯೋತ್ಸವ ಆಚರಣೆ ಮಾಡಿದರು. ಪಟ್ಟಣದ ಕೋಟೆ, ಮಯೂರ ವೃತ್ತ, ಬಸ್ ನಿಲ್ದಾಣ, ಓ.ತಿಮ್ಮಯ್ಯ ವೃತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ಪಟಾಕಿ ಸಿಡಿಸಲಾಯಿತು. ಪಟ್ಟಣದ ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಉಚಿತವಾಗಿ ಉಪಹಾರವನ್ನು ವಿತರಣೆ ಮಾಡಲಾಯಿತು.
ಕಂಬದಹಳ್ಳಿ ಸುರೇಂದ್ರಗೌಡ, ಡಿ.ಆರ್.ಶಿವಕುಮಾರಗೌಡ, ದಾಮೋದರ್, ಲೋಕೇಶ್‌ಗೌಡ, ಸುಜಾತಮ್ಮ, ಮಂಜುಳಮ್ಮ, ಮುನಿರತ್ನಮ್ಮ, ಟಿ.ರತ್ನಮ್ಮ, ಮುಸ್ತಾಕ್ ಅಹ್ಮದ್, ಮುತ್ತೂರು ಶಿವಮ್ಮ, ಎ.ಎಂ.ತ್ಯಾಗರಾಜ್, ಮುಂತಾದವರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.