ಕೊಪ್ಪಳ

ಅಸ್ತಿತ್ವ ಕಳಕೊಂಡವರ ನಿರ್ಗಮನ

Published On :

ಗಂಗಾವತಿ: ನಗರಸಭೆಗೆ ಚುನಾಯಿತರಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ತಮ್ಮ ಅಸ್ತಿತ್ವ ಕಳೆದುಕೊಂಡ ಬೆರಳೆಣಿಕೆ ಸದಸ್ಯರು ಜೆಡಿಎಸ್‌ನಿಂದ ನಿರ್ಗಮಿಸುತ್ತಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್‌ನ ಹೈದರಾಬಾದ್-ಕರ್ನಾಟಕ ಪ್ರದೇಶದ ಉಸ್ತುವಾರಿ ಇಕ್ಬಾಲ್ ಅನ್ಸಾರಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳಿಂದ ಜೆಡಿಎಸ್‌ನಲ್ಲಿದ್ದು, ತಮ್ಮ ಬೆಂಬಲಿಗರೆಂಬ ಕಾರಣಕ್ಕೆ ಸದಸ್ಯರಿಗೆ ಎಲ್ಲ ಅವಕಾಶ ನೀಡಲಾಗಿತ್ತು. ಆದರೆ, ಈಗ ಪಕ್ಷ ತ್ಯಜಿಸುವ ಮಾತನಾಡುತ್ತಿರುವುದನ್ನು ನೋಡಿದರೆ ಅವರು ಅವಕಾಶವಾದಿಗಳು ಎನಿಸುತ್ತದೆ ಎಂದರು.
ನಗರಸಭೆ ಸದಸ್ಯರಾಗಿದ್ದ ಬಸಪ್ಪನಾಯಕ ಅವರ ತಾಯಿ ನಿಧನರಾಗಿದ್ದ ವೇಳೆ ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದೆವು. ಆದರೆ, ತಾಯಿ ನಿಧನದ ಸಂದರ್ಭದಲ್ಲೂ ಅವರು ಅಧ್ಯಕ್ಷಗಿರಿ ಪಡೆದರು. ಅವರಿಗೆ ತಾಯಿಗಿಂತಲೂ ಅಧಿಕಾರ ಮುಖ್ಯವಾಗಿತ್ತೇ ಎಂದು ಪ್ರಶ್ನಿಸಿದರು.
ತಾವು ನಗರಸಭೆಯಲ್ಲಿ ಎಲ್ಲ ಸಮಾಜಗಳಿಗೆ ಆದ್ಯತೆ ನೀಡುವ ಮೂಲಕ ಸಮಾನತೆ ಕಂಡವರು. ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ದೇವಪ್ಪ ಕಾಮದೊಡ್ಡಿ ಅವರಿಗೆ ಎಷ್ಟು ಸಹಕಾರ ನೀಡಿದ್ದೇವೆ ಎಂಬುದಕ್ಕೆ ಅವರು ಬೆಳೆದಿದ್ದೇ ಸಾಕ್ಷಿ. ಎಲ್ಲೋ ಮೂಲೆಯಲ್ಲಿದ್ದ ದೇವಪ್ಪ ಅವರನ್ನು ಸದಸ್ಯರನ್ನಾಗಿ ಮಾಡಿ, ಪರಿಶಿಷ್ಟ ಜಾತಿ ಬಡಾವಣೆ ಎಂಬ ಕಾರಣಕ್ಕೆ ಹೆಚ್ಚು ಅನುದಾನ ನೀಡಿದರೂ ಅದನ್ನು ದುರ್ಬಳಕೆ ಮಾಡಿಕೊಂಡರು ಎಂದು ಅನ್ಸಾರಿ  ಆರೋಪಿಸಿದರು. ನಗರಸಭೆ ಸದಸ್ಯ ಕಣ್ಣನ್, ಉಸ್ಮಾನ್ ಸೇರಿದಂತೆ ಪಕ್ಷಕ್ಕೆ ಯಾರೇ ರಾಜಿನಾಮೆ ನೀಡಿದರೂ ಹಾನಿ ಇಲ್ಲ ಎಂದರು.
ಪಾಪಣ್ಣ ನಾಯಕ, ಎಸ್.ಬಿ. ಖಾದ್ರಿ, ಆರತಿ ತಿಪ್ಪಣ್ಣ, ಯಮನಪ್ಪ ವಿಠಲಾಪುರ, ಶ್ಯಾಮೀದ ಮನಿಯಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.