ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ನೀಡಿ
ಕೊಪ್ಪಳ: ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಉದ್ಯೋಗದಲ್ಲಿ ಮೀಸಲಾತಿ ನಿಗದಿಪಡಿಸಬೇಕೆಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಜಿ.ಎಂ. ಸುರೇಶ್ ಅವರಿಗೆ ಕೊಪ್ಪಳ ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರು ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಯುವ ಕ್ರೀಡಾ ನೀತಿ ರಚನೆ ಕುರಿತಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಕ್ರೀಡಾಪಟುಗಳು, ಕ್ರೀಡಾಸಕ್ತರು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಕರ ಸಂಘದ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ತಿಳಿಸಿದರು. ರಾಜ್ಯ ಯುವ ಕ್ರೀಡಾ ನೀತಿ ರಚನಾ ಸಮಿತಿ ಸದಸ್ಯ ಜಿ.ಎಂ. ಸುರೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ. ಮರುಳಯ್ಯ, ಪ್ರಾಚಾರ್ಯರು ಸಂಘದ ಅಧ್ಯಕ್ಷ ಡಾ. ವಿ.ಬಿ. ರಡ್ಡೇರ, ಸುದರ್ಶನ, ಎಂ.ಆರ್. ಹವಳದ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು. ಕೊಪ್ಪಳ ಜಿಲ್ಲೆಯ ಹಲವಾರು ಕ್ರೀಡಾಪಟುಗಳು, ಮಹಾವಿದ್ಯಾಲಯಗಳ ಪ್ರಾಚಾರ್ಯರು, ಕ್ರೀಡಾಸಕ್ತರು, ದೈಹಿಕ ಶಿಕ್ಷಕರ ಸಂಘದ ಪ್ರತಿನಿಧಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಕುಟಗನಹಳ್ಳಿ ಎಸ್ಡಿಎಂಸಿ: ಅಧ್ಯಕ್ಷರಾಗಿ ನಿಂಗಪ್ಪ ಆಯ್ಕೆ
ಕೊಪ್ಪಳ: ತಾಲೂಕಿನ ಕುಟಗನಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚಿಗೆ ನೂತನ ಎಸ್ಡಿಎಂಸಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ನಿಂಗಪ್ಪ ಮಜ್ಜಗಿ, ಉಪಾಧ್ಯಕ್ಷರಾಗಿ ಉಮಾದೇವಿ ಕೊಟ್ರಪ್ಪ ದೇಸಾಯಿ ಹಾಗೂ ಸದಸ್ಯರಾಗಿ ಮಲ್ಲನಗೌಡ ಪೊಲೀಸ್ ಪಾಟೀಲ್, ವೀರನಗೌಡ ಗೊಂಡಬಾಳ, ಶಿವಾನಂದಪ್ಪ ನರೇಗಲ್, ಮಲ್ಲಿಕಾರ್ಜುನ ಗೊಂಡಬಾಳ, ನಾಗಪ್ಪ ವಾಲ್ಮೀಕಿ, ಶರಣಪ್ಪ ಕರ್ಕಿಹಳ್ಳಿ, ದ್ರಾಕ್ಷಾಯಣಿ ಪೊಲೀಸ್ ಪಾಟೀಲ್, ಶಕುಂತಲಾ ಹಿರೇಮಠ, ಹುಲಿಗೆಮ್ಮ ಪೂಜಾರ್, ಚಾಂದಾಬಿ ಗೊಂಡಬಾಳ, ಹುಲಿಗೆವ್ವ ಹರಿಜನ ಹಾಗೂ ಪದನಿಮತ್ತ ಸದಸ್ಯರಾಗಿ ಚಂದ್ರಶೇಖರ, ಶ್ರೀದೇವಿ, ರಾಧಾಬಾಯಿ ಆಯ್ಕೆಯಾದರು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

