ಗೊಂದಲದಲ್ಲಿ ಜವಾಹರ ನವೋದಯ ವಿದ್ಯಾರ್ಥಿಗಳು
ಕುಕನೂರು: ಸ್ಥಳೀಯ ಜವಾಹರ ನವೋದಯ ವಿದ್ಯಾಲಯದ ಸಿಬ್ಬಂದಿ ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ. 6ರಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ. ಆದರೆ, ಫೆ. 10ರಂದು ಅಖಿಲ ಭಾರತ ಮಟ್ಟದ 6ನೇ ತರಗತಿಯ ಕೇಂದ್ರೀಯ ಪ್ರವೇಶ ಪರೀಕ್ಷೆ ನಡೆಯಲಿವೆ. ಸಿಬ್ಬಂದಿ ಧರಣಿ ಕೈಗೊಂಡಿರುವುದರಿಂದ ಪರೀಕ್ಷೆ ಮುಂದೂಡುವ ಸ್ಪಷ್ಟ ಲಕ್ಷಣಗಳು ಗೋಚರಿಸುತಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.
ಕುಕನೂರಿನ ಪ್ರತಿಷ್ಠಿತ ಮಹಾವಿದ್ಯಾಲಯವೆಂದೇ ಪರಿಗಣಿಸಲ್ಪಟ್ಟಿರುವ ಜವಾಹರ ನವೋದಯ ವಿದ್ಯಾಲಯದ ಪರೀಕ್ಷೆ ಪಾಸಾಗಲು ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿರುತ್ತಾರೆ. ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಆಸಕ್ತಿ ವಹಿಸಿ ಸಾವಿರಾರು ರುಪಾಯಿ ಖರ್ಚು ಮಾಡಿ ನುರಿತ ಅನುಭವಿ ಶಿಕ್ಷಕರಿಂದ ವಿಶೇಷ ಪಾಠ ಮಾಡಿಸಿರುತ್ತಾರೆ. ಪರೀಕ್ಷೆ ಮುಂದೂಡಿದರೆ ಮಕ್ಕಳು ಕಲಿತಿದ್ದೆನ್ನೆಲ್ಲ ಮರೆತು ಬಿಟ್ಟರೆ ಅವರ ಭವಿಷ್ಯವೇನು ಎಂದು ಪಾಲಕರು ಚಿಂತಾಕ್ರಾಂತರಾಗಿದ್ದಾರೆ.
3500 ವಿದ್ಯಾರ್ಥಿಗಳು
ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕುಗಳಿಂದ 3500 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಪ್ರವೇಶ ಬಯಸಿ ಹೆಸರು ದಾಖಲಿಸಿದ್ದಾರೆ.
ನೌಕರರ ಬೇಡಿಕೆಗಳು
972ರ ನಿಯಮದ ಪ್ರಕಾರ ಪಿಂಚಣಿ ಸೌಲಭ್ಯ, ಬೋಧಕೇತರ ಸಿಬ್ಬಂದಿಗೆ ವಿಶೇಷ ಭತ್ಯೆಯ ಮಂಜೂರಾತಿ, ಸದನ ಪಾಲಕರ ಮತ್ತು ಉಪಸದನ ಪಾಲಕರ ಭತ್ಯೆ ಹೆಚ್ಚಿಸುವ ಕುರಿತು, ಪ್ರಾದೇಶಿಕ ಭಾಷಾ (ಕನ್ನಡ) ಶಿಕ್ಷಕರ ಬಡ್ತಿ, ಆರೋಗ್ಯ ವಿಮಾ ಸೌಲಭ್ಯ ಕುರಿತಂತೆ 20ಕ್ಕೂ ಹೆಚ್ಚು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿದ್ಯಾಲಯದ ಮುಂದೆ ಧರಣಿ ನಡೆಸುತಿದ್ದಾರೆ.
ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೇಂದ್ರದ 8 ಅಧೀಕ್ಷಕರು ಹಾಗೂ ಹೆಚ್ಚುವರಿ 8 ಅಧೀಕ್ಷಕರು ಫೆ. 10ರಂದು ನಡೆಸಬೇಕಿರುವ 6ನೇ ತರಗತಿಯ ಪ್ರವೇಶ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಹಾಜರಾಗಿದ್ದರು.
ಸಿಎಲ್ಓ ಹೋದರೆ ಪರೀಕ್ಷೆ
ಸಿಎಲ್ಓ (ಸೆಂಟರ್ ಲೆವೆಲ್ ಆಬ್ಸರ್ವರ್) ಪರೀಕ್ಷಾ ಕೇಂದ್ರದ ತಪಾಸಣಾಧಿಕಾರಿಯಾಗಿ ನವೋದಯ ವಿದ್ಯಾಲಯದ ಸಿಬ್ಬಂದಿ ಹೋದರೆ ಮಾತ್ರ ಪರೀಕ್ಷೆ ನಡೆಯುತ್ತದೆ. ಹಾಗಂತ ಕೇಂದ್ರ ಸರ್ಕಾರದಿಂದ ನವೋದಯ ವಿದ್ಯಾಲಯಕ್ಕೆ ಲಿಖಿತ ರೂಪದ ಆದೇಶವಿದೆ. ಹೀಗಿದ್ದರೂ ಪರ್ಯಾಯವಾಗಿ ಜಿಲ್ಲಾಡಳಿತ ಪರೀಕ್ಷೆ ನಡೆಸುವ ತಯಾರಿ ಮಾಡುತ್ತಿ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವದು ಮಾತ್ರ ಕುತೂಹಲಕಾರಿ.
ನವೋದಯದ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದಿಂದಾಗಿ 500ಕ್ಕೂ ಹೆಚ್ಚು ಪಾಲಕರು ಮುಷ್ಕರಕ್ಕೆ ಬೆಂಬಲ ಸೂಚಿಸಿ, ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
24 ವಿದ್ಯಾರ್ಥಿಗಳಿಗೆ ಸೌಲಭ್ಯ
ಮಧ್ಯ ಪ್ರದೇಶ ಓಶಂಗಾಬಾದ ಜಿಲ್ಲೆಯಿಂದ ಬಂದಿರುವ 24 ವಿದ್ಯಾರ್ಥಿಗಳಿಗೆ ನವೋದಯ ವಿದ್ಯಾಲಯದ ಸಿಬ್ಬಂದಿ ಮಾನವೀಯ ದೃಷ್ಟಿಯಿಂದ ಊಟದ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯವನ್ನು ಒದಗಿಸುತ್ತಿದ್ದಾರೆ.
ಪ್ರವೇಶ ಪರೀಕ್ಷೆ ಬಗ್ಗೆ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯೂ ಸೂಕ್ತ ಉತ್ತರ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿ ಹಾಗೂ ಪಾಲಕರು ಆತಂಕಕ್ಕೀಡಾಗಿದ್ದಾರೆ.
ಪ್ರಾಚಾರ್ಯ ಡಿ. ಶ್ಯಾಂ ಪ್ರಕಾಶ, ಮುಖ್ಯ ಅಧೀಕ್ಷಕ ಮೇಘರಾಜ ಜಿಡಗಿ, ಎಂ.ಬಿ. ಕುಲಕರ್ಣಿ, ರಾಜೇಶ, ಹೇಮಾವತಿ, ಎನ್.ಎಸ್. ಒಂಟ ಮುರಿ, ಎಂ.ಎಸ್. ಶಿವಶಂಕರ, ಹನುಮಂತಪ್ಪ ಕಾರಟಗಿ, ಶಾಂತಪ್ಪ ಶೇಖ ಪ್ಪ ಸೇರಿದಂತೆ 36ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರದಲ್ಲಿ ನಿರತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

