ಬಿಜಾಪುರ ಅಕ್ಷರ ಜಾತ್ರೆಗೆ ಕುಷ್ಟಗಿ ಬೈಕ್ ಸಹಾಸಿಗಳು
ಕುಷ್ಟಗಿ: ತಾಲೂಕಿನ ಯುವ ಸಾಹಸಿಗಳಿಬ್ಬರು ಶುಕ್ರವಾರ ಬೆಳಗ್ಗೆ ಕೈಬಿಟ್ಟು ಬೈಕ್ ಚಲಾಯಿಸುವ ಮೂಲಕ ಬಿಜಾಪುರದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳಿದರು.
ತಾಲೂಕಿನ ಕ್ಯಾದಗುಪ್ಪ ಗ್ರಾಮದ ಗಣೇಶ ಬಡಿಗೇರ ಹಾಗೂ ಬಡರಗಲ್ಲ ನಿವಾಸಿ ಬಸವರಾಜ ಹಡಪದ ಅವರು ಬೈಕ್ ಯಾತ್ರೆ ಹೊರಟ ಸಾಹಸಿಗಳು. ಈಗಾಗಲೇ ಹಲವು ಯಾತ್ರೆಗಳ ಜಾಗೃತಿ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಹೆಸರು ಮಾಡಿರುವ ಗಣೇಶ ಬಡಿಗೇರ, ಹೈದ್ರಾಬಾದ್ ಕರ್ನಾಟಕಕ್ಕೆ ಸಂವಿಧಾನ 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಕುಷ್ಟಗಿಯಿಂದ ದೇಶದ ರಾಜಧಾನಿ ದೆಹಲಿ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೈಬಿಟ್ಟು ಬೈಕ್ ಚಲಾಯಿಸುವ ಮೂಲಕ ಸರ್ಕಾರಗಳ ಗಮನ ಸೆಳೆದಿದ್ದರು. ತಾಲೂಕಿನ ಬಂಡರಗಲ್ಲ ಗ್ರಾಮದ ಬಸವರಾಜ ಹಡಪದ ಕೂಡ ಗಣೇಶ ಜತೆಗೂಡಿ ಅನೇಕ ಯಾತ್ರೆಗಳನ್ನು ಯಶಸ್ವಿಯಾಗಿ ಪೂರೈಸಿದ ಅನುಭವ ಹೊಂದಿದ್ದಾರೆ.
ಸಾಹಸಿಗಳಿಗೆ ಸನ್ಮಾನ: ಈ ಸಾಹಸ ಯಾತ್ರೆಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಚಾಲನೆ ನೀಡಿದರು. ಪಿಎಸ್ಐ ಮಹಾದೇವ ಪಂಚಮುಖಿ ಬೈಕ್ ಯಾತ್ರಿಗಳನ್ನು ಸನ್ಮಾನಿಸಿ, ಶುಭ ಕೋರಿದರು. ಕರವೇ ತಾಲೂಕಾಧ್ಯಕ್ಷ ಅಶೋಕ ಪಾಟೀಲ್, ನಗರ ಘಟಕಾಧ್ಯಕ್ಷ ಚನ್ನಪ್ಪ ನಾಲಗಾರ ಹಾಗೂ ಊರಿನ ಜನತೆ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

