ಮಾನಸಿಕ ಆರೋಗ್ಯಕ್ಕೆ ಮಹತ್ವ ನೀಡಿ: ನ್ಯಾ. ಎನ್. ಕುಮಾರ್
ಕೊಪ್ಪಳ: ಸಮಾಜದಲ್ಲಿ ಎಲ್ಲರೂ ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ವಾಸ್ಥ್ಯ ಸಮಾಜಕ್ಕಾಗಿ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾ. ಎನ್. ಕುಮಾರ್ ಹೇಳಿದರು.
ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಆಸ್ಪತ್ರೆ ಆಶ್ರಯದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂದಿಗೂ ಮಾನಸಿಕ ಕಾಯಿಲೆಗಳ ಬಗ್ಗೆ ಜನತೆಗೆ ಸರಿಯಾದ ಅರಿವು ಇಲ್ಲ. ಜಗತ್ತಿನಲ್ಲಿ ಶೇ. 10 ಜನರು ಮಾನಸಿಕ ಅಸ್ವಸ್ಥ್ಯರಿದ್ದಾರೆ. ಅದರಲ್ಲಿ ಶೇ. 1 ತೀವ್ರತರನದ್ದಾಗಿದ್ದರೆ, ಶೇ. 9 ಜನರಿಗೆ ತಮಗೆ ಮಾನಸಿಕ ತೊಂದರೆ ಇರುವುದೇ ಅರಿವಿಗೆ ಬಂದಿಲ್ಲ ಎಂದರು.
ದೇಶದಲ್ಲಿ 1987ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಜಾರಿಗೆ ಬಂದಿದ್ದು, ಈ ಕಾನೂನು ಅನುಷ್ಠಾನಕ್ಕೆ ಪ್ರತಿ ರಾಜ್ಯಗಳ ಉಚ್ಚ ನ್ಯಾಯಾಲಯಗಳ ಒಬ್ಬರು ನ್ಯಾಯಮೂರ್ತಿಯನ್ನು ನೇಮಿಸಲಾಗಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾನಸಿಕ ವಿಭಾಗ ತೆರೆಯಬೇಕು, ಒಬ್ಬರು ಮನೋವೈದ್ಯರನ್ನು ನೇಮಿಸಲು ಸೂಚನೆ ನೀಡಿದೆ ಎಂದರು.
ಕಾರ್ಯಪಡೆ ಅಧ್ಯಕ್ಷ ಡಾ. ಕೆ.ಎ. ಅಶೋಕ್ ಪೈ ವಿಶೇಷ ಉಪನ್ಯಾಸ ನೀಡಿ, ಜಾಗತೀಕರಣ, ಔದ್ಯೋಗಿಕರಣ, ಸ್ಪರ್ಧಾತ್ಮಕ ಯುಗದ ಜೀವನ ಶೈಲಿ ಹೊಂದಿಕೊಳ್ಳಲಾರದೆ ಜನರು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಈ ಒತ್ತಡದ ಜೀವನ ಅನೇಕ ಬಗೆಯ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಒತ್ತಡದ ಜೀವನ ನಿರ್ವಹಣೆ ಕಲಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದೆಲ್ಲವನ್ನು ಮನಗಂಡಿರುವ ಸರ್ಕಾರ, ಮಾನಸಿಕ ಆರೋಗ್ಯ ಕಾರ್ಯಪಡೆಯನ್ನು ಪ್ರಥಮ ಬಾರಿಗೆ ರಚಿಸಿದ್ದು, ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ ಮಾತ್ರ ಇಂತಹ ಕಾರ್ಯಪಡೆ ರಚಿಸಿರುವುದು ಶ್ಲಾಘನೀಯ. ಕರ್ನಾಟಕವನ್ನು ಮಾನಸಿಕ ಸ್ವಾಸ್ಥ್ಯ ರಾಜ್ಯವನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ವಿ. ಕಣವಿ, ಡಾ. ಬಿ.ವಿ. ಕರೂರ್, ತುಳಸಿ ಮದ್ದಿನೇನಿ, ಎಚ್. ಚಂದ್ರಶೇಖರ್, ಮಂಜುನಾಥ ಅಣ್ಣಿಗೇರಿ, ಡಾ. ಲೋಕೇಶ್, ಡಾ. ಮಹಾದೇವ, ಡಾ. ನಾಗರಾಜ್, ಡಾ. ಶಿವಶಂಕರ ಪೋಳ್, ಡಾ. ಗುಂಡೇರಾವ್, ಶ್ರೀಕಾಂತ ಬಬಲಾದಿ ಇತರರು ಇದ್ದರು.
ಲೈಂಗಿಕತೆ, ವಿವಾಹ, ವಿಚ್ಛೇದನ ಕುರಿತು ಪ್ರಾಧ್ಯಾಪಕ ಡಾ. ಟಿ.ಎಸ್. ಸತ್ಯನಾರಾಯಣರಾವ್, ದುಶ್ಚಟಗಳು, ಪರಿಣಾಮ ಹಾಗೂ ಚಿಕಿತ್ಸೆ ಕುರಿತು ಡಾ. ಸೋಮಶೇಖರ ಬಿಜ್ಜಳ್ ವಿಶೇಷ ಉಪನ್ಯಾಸ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

