ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಎಸ್ಸಾರ್: ಗೋನಾಳ
ಹನುಮಸಾಗರ: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಟ್ಟಿದ ಹೈ-ಕದ ಏಕೈಕ ಪ್ರಾದೇಶಿಕ ಪಕ್ಷ ಎಂದರೆ ಬಿಎಸ್‌ಆರ್ ಕಾಂಗ್ರೆಸ್ ಎಂದು ಮುಖಂಡ ನಾಗರಾಜಗೌಡ ಗೋನಾಳ ಹೇಳಿದರು.
ರಾಯಚೂರಿನಲ್ಲಿ ಫೆ. 13ರಂದು ನಡೆಯುವ ಎಸ್‌ಸಿ, ಎಸ್‌ಟಿ ಬೃಹತ್ ಸಮಾವೇಶದ ಅಂಗವಾಗಿ ಇಲ್ಲಿಯ ಶಾದಿಮಹಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಹಿಂದಿನ ಸರ್ಕಾರಗಳಿಂದ ಹಿಂದುಳಿದ ವರ್ಗಗಳ ಶೋಷಣೆಯಾಗುತ್ತಿದೆ. ಜನಪ್ರತಿನಿಧಿಗಳು ಡಾ. ಬಿ.ಆರ್. ಅಂಬೇಡ್ಕರ್ ಕಂಡ ಕನಸು ನನಸು ಮಾಡಬೇಕು ಎಂದು ಬರೀ ಮಾತನಾಡುತ್ತಾರೆ. ಆದರೆ, ನಮ್ಮ ಸ್ವಾಭಿಮಾನಿ ಪಕ್ಷದ ಹರಿಕಾರ ಶ್ರೀರಾಮುಲು ಈ ಬಾರಿ ಬೃಹತ್ ಸಮಾವೇಶಕ್ಕೆ ಅಂಬೇಡ್ಕರ್ ಅವರ ಸಂಬಂಧಿ ಆನಂದ ಅಂಬೇಡ್ಕರ್ ಅವರನ್ನು ಕರೆಸಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಬಿಎಸ್‌ಆರ್ ಕಾಂಗ್ರೆಸ್ ತಾಲೂಕಾಧ್ಯಕ್ಷ ನಾಗಪ್ಪ ಸೂಡಿ, ಹಿರಿಯ ಮುಖಂಡ ಚಂದಪ್ಪ ತಳವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಗ್ಗೆ ಮತ್ತು ರಾಯಚೂರಿನಲ್ಲಿ ನಡೆಯುವ ಐತಿಹಾಸಿಕ ಸಮಾವೇಶದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹನುಮಸಾಗರ ಮೋಚಿ ಸಮಾಜದ ಯಮನೂರಪ್ಪ ಬಡಿಗೇರ, ಅನ್ನಪ್ಪ ಕಬ್ಬರಗಿ, ಶೇಖಪ್ಪ ಹುಲ್ಲೂರು, ರಾಮಣ್ಣ ಕಬ್ಬರಗಿ, ಕುಮಾರ ಹಾದಿಮನಿ ಹಾಗೂ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಹನುಮಂತ ನಾಯಕ, ಬಿಜೆಪಿಯ ತಾಲೂಕು ಎಸ್‌ಟಿ ಉಪಾಧ್ಯಕ್ಷ ನಾಗಪ್ಪ ಹುಂಡಿ ಸೇರಿದಂತೆ ಹಲವರು ಬಿಎಸ್‌ಆರ್ ಕಾಂಗ್ರೆಸ್ ಸೇರಿದರು.
ಮೋಚಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಬೀಳಗಿಯ ಬಸನಗೌಡ ಪಾಟೀಲ್, ನಾಗನಗೌಡ ಮೂಗನೂರು, ವೀರನಗೌಡ ಬೀಳಗಿ, ಬಸವರಾಜ ಕಟ್ಟಿಮನಿ, ಮಂಗಳಪ್ಪ, ಹನುಮಂತಪ್ಪ ಗಡಾದ, ಠಾಕಪ್ಪ ಗೌಡ್ರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

