ಕೊಪ್ಪಳ

ಕಾರಟಗಿಯಲ್ಲಿ ಕಳ್ಳತನ: 6 ಜನರ ಬಂಧನ

Published On :

ಗಂಗಾವತಿ: ತಾಲೂಕಿನ ಕಾರಟಗಿಯಲ್ಲಿ ಮನೆ ಕಳ್ಳತನ ಮಾಡಿದ 6 ಜನರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು  ಡಿವೈಎಸ್‌ಪಿ ಡಿ.ಎಲ್. ಹಣಗಿ ತಿಳಿಸಿದ್ದಾರೆ.
ಕಾರಟಗಿಯ ಗುಂಡಪ್ಪ ಹುಲ್ಲೂರು ಎಂಬುವರ ಮನೆಗೆ ಜ. 23ರಂದು ರಾತ್ರಿ ನುಗ್ಗಿದ ಕಳ್ಳರು ರು. 2.53 ಲಕ್ಷ ಮೌಲ್ಯದ ಚಿನ್ನ -ಬೆಳ್ಳಿ ಸಾಮಗ್ರಿಗಳು ಮತ್ತು 1.70 ಲಕ್ಷ ನಗದು ದೋಚಿದ್ದರು. ಎಸ್ಪಿ ಮಂಜುನಾಥ ಅಣ್ಣಿಗೇರಿ ಅವರ ಸೂಚನೆ ಮೇರೆಗೆ, ತಮ್ಮ ಮಾರ್ಗದರ್ಶನದಲ್ಲಿ ಸಿಪಿಐ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ತಂಡ ರಚಿಸಿ, 6 ಕಳ್ಳರನ್ನು ಸೆರೆಹಿಡಿಯಲಾಗಿದೆ ಎಂದರು.
ಹನುಮಂತ ಹನುಮಾಳ ಅನುಮಾನಾಸ್ಪದವಾಗಿ ಸೆರೆಯಾಗಿದ್ದು, ಆತನನ್ನು ವಿಚಾರಿಸಿದಾಗ, ಕಳ್ಳತನದಲ್ಲಿ ಸಹಕರಿಸಿದ್ದ ದೇವರಾಜ ನರೇರ್, ಕಾರಟಗಿ, ಮೌನೇಶ ಬಡಿಗೇರ, ಕಾರಟಗಿ, ಯಮನೂರ ಜಿರಾಳ, ಲಕ್ಷ್ಮಣ ಬಿಲ್ಗಾರ್, ರಂಗಪ್ಪ ಬಸರಿಗಿಡ, ಸಿರಗುಪ್ಪ ಎಂಬುವರೂ ಸೆರೆ ಸಿಕ್ಕಿದ್ದಾರೆ. ಇವರು ಕಾರಟಗಿಯಲ್ಲಿ ಕಳ್ಳತನ ಮಾಡಿದ ಬಳಿಕ ಹಿರೇಜಂತಗಲ್‌ನ ಮನೆಯೊಂದರಲ್ಲಿ ವಾಸ್ತವ್ಯ ಮಾಡಿದ್ದರು. ಅಲ್ಲದೆ ಕಳ್ಳತನ ಮಾಡಿದ ವಸ್ತುಗಳನ್ನು ಇತ್ತೀಚೆಗೆ ನಡೆದ ಶ್ರೀ ಚೆನ್ನಬಸವಸ್ವಾಮಿ ಜಾತ್ರೆಯಲ್ಲಿ ಹಂಚಿಕೊಂಡಿದ್ದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ತಿಳಿಸಿದರು.
ಆರೋಪಿಗಳಿಂದ 4 ತೊಲೆ ಚಿನ್ನ, 5 ತೊಲೆ ಬೆಳ್ಳಿ ಆಭರಣಗಳು ಹಾಗೂ ರು. 92,500 ನಗದು ವಶಪಡಿಸಿಕೊಳ್ಳಲಾಗಿದೆ. ಕಳ್ಳರ ಪತ್ತೆ ತಂಡದಲ್ಲಿದ್ದ ಸಿಪಿಐ ಆರ್.ಎಸ್. ಉಜ್ಜನಕೊಪ್ಪ, ಕಾರಟಗಿ ಪಿಎಸ್‌ಐ ಶರಣಪ್ಪಗೌಡ, ಸಿಬ್ಬಂದಿ ಮಹೇಶ, ವಸಂತ, ಶಂಕರಗೌಡ, ಶರಣಪ್ಪ, ವೆಂಕರೆಡ್ಡಿ, ಚಂದ್ರಶೇಖರ ಗೌಡ,  ದುರ್ಗಾ ಪ್ರಸಾದ, ಶಿವಕುಮಾರ, ಈರಪ್ಪ ಅವರನ್ನು ಡಿವೈಎಸ್ಪಿ ಡಿ.ಎಲ್. ಹಣಗಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.