ಮಹಿಳೆಯರ ರಥೋತ್ಸವ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 7
ಜಾತ್ರೆಯಲ್ಲಿ ಪುರುಷರೇ ಸಾಮಾನ್ಯವಾಗಿ ತೇರು ಎಳೆಯುವುದನ್ನು ನಾವು ಕಾಣುತ್ತೇವೆ. ಆದರೆ, ಗಂಗಾವತಿ ತಾಲೂಕಿನ ಕನಕಗಿರಿ ಸಮೀಪದ ಪಡಿವಡಕಿ ಗ್ರಾಮದ ಮಹಾಲಕ್ಷ್ಮೀ ಜಾತ್ರೆಯ ತೇರನ್ನು ಮಹಿಳಾ ಮಣಿಗಳೆ ಎಳೆದು ಭಕ್ತಿ ಭಾವ ಸಮರ್ಪಣೆ ಮಾಡುವುದು ಈ ಭಾಗದ ವಿಶೇಷ.
ಗುರುವಾರ ಸುತ್ತಲಿನ ಹತ್ತಾರು ಗ್ರಾಮದ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಮಹಾಲಕ್ಷ್ಮೀ ರಥ ಎಳೆದರು. ಮಹಿಳಾ ದಿನಾಚರಣೆಯ ಮುನ್ನಾ ದಿನವೇ ಇದು ನಡೆದಿದ್ದು ವಿಶೇಷ.
ಉತ್ತರ ಕರ್ನಾಟಕ ಭಾಗದಲ್ಲಿ ವಿವಿಧ ಜಾತ್ರೆಗಳು ನಡೆಯುತ್ತವೆ. ಅದರಲ್ಲಿಯೇ ಪಡಿವಡಕಿಯ ಈ ಜಾತ್ರೆ ವಿಶೇಷ, ವಿಭಿನ್ನವಾಗಿದೆ. 5 ದಶಕದದಿಂದ ಮಹಿಳೆಯರೇ ತೇರು ಎಳೆಯುವುದು ರೂಢಿಯಲ್ಲಿದೆ.
ಮಹಾಲಕ್ಷ್ಮೀ ಜಾತ್ರೆಯ ದಿನ ಸುತ್ತಲಿನ ಹತ್ತಾರು ಗ್ರಾಮದ ಮಹಿಳೆಯರು ಜಾತ್ರೆಗೆ ಆಗಮಿಸಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಮಹಾಲಕ್ಷ್ಮೀ ತೇರು ಎಳೆಯುತ್ತಾರೆ. ಮಹಿಳೆಯರೇ ತೇರು ಎಳೆಯುವ ಹಿಂದೆ ದೊಡ್ಡ ಇತಿಹಾಸವೇ ಇದೆ. 1970ರಲ್ಲಿ ಅಂದಿನ ಹಿರಿಯರಾದ ಬುಡ್ಡಪ್ಪಯ್ಯ ಹಾಗೂ ಯಮನಗೌಡ ತಾತನವರು ಮಹಿಳೆಯರಿಗೆ ಪುರುಷ ಸಮಾನ ಸ್ಥಾನಮಾನ ನೀಡುವ ಉದ್ದೇಶದಿಂದ ಜಾತ್ರೆಯಲ್ಲಿ ಮಹಿಳೆಯರೇ ತೇರು ಎಳೆಯುವ ಸಂಪ್ರದಾಯವನ್ನು ಆರಂಭಿಸಿದರು.
ಆಗಿನ ಹೈದ್ರಾಬಾದ್ ನಿಜಾಮರ ಕಾಲದಲ್ಲಿ ಮಹಿಳೆಯರಿಗೆ ಸೂಕ್ತಸ್ಥಾನ ಮಾನ ದೊರೆಯದ ಕಾರಣ ಅಸಮಾಧಾನದಿಂದಾಗಿ ಇಂತಹ ಸಂಪ್ರದಾಯವನ್ನು ಜಾರಿ ಮಾಡಲಾಗಿದೆ. ಇದರಿಂದ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಹಾಗೂ ಸಮಾಜದಲ್ಲಿ ಮಹಿಳೆಯರು ಪುರುಷನ ಸ್ಥಾನದಲ್ಲಿಯೇ ಮುನ್ನಡೆಯಬೇಕು ಎನ್ನುವ ಉದ್ದೇಶ ಅವರದ್ದಾಗಿತ್ತು. ಆಗಿನ ಸಂಪ್ರದಾಯವನ್ನೂ ಈಗಲೂ ಮುಂದುವರೆಸಲಾಗುತ್ತಿದೆ.
ಭರತ ಹುಣ್ಣಿಮೆಯ 9ನೇ ದಿನ ಪುರುಷರು ತೇರು ಎಳೆದರೆ, 10ನೇ ದಿನಕ್ಕೆ ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮದ ಮಹಿಳೆಯರು ತೇರು ಎಳೆದು ಸಂಭ್ರಮಿಸುತ್ತಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

