ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಿವೃತ್ತ ಕಂದಾಯಾಧಿಕಾರಿ ಚಲುವೇಗೌಡ ಜಮೀನಿನ ರಸ್ತೆ ವಿಚಾರವಾಗಿ ರೈತ ಸಂಘದ ಕಾರ್ಯಕರ್ತರಾದ ಸಿ.ಎಸ್.ವಿಶ್ವನಾಥ್ ,ಕಾಂತರಾಜ್, ಕುಮಾರ, ಚಲುವೇಗೌಡ ಎಂಬುವರು ಮಹಿಳೆಯರ ಮೇಲೆ ಮರಣಾಂತಿಕ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಚಿನಕುರಳಿ ಪೊಲೀಸ್ ಠಾಣೆ ಎದುರು ಸ್ವಸಹಾಯ ಸಂಘದ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಂತರ ಮಾತನಾಡಿದ ಪ್ರತಿಭಟನಕಾರರು, ಮಹಿಳೆಯರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ರೈತ ಸಂಘದ ಕಾರ್ಯಕರ್ತರಾದ ಸಿ.ಎಸ್. ವಿಶ್ವನಾಥ್, ಕಾಂತರಾಜ್, ಕುಮಾರ, ಚಲುವೇಗೌಡ ಇವರ ವಿರುದ್ಧ ದೂರು ದಾಖಲಿಸಿದರು. ಪಾಂಡವಪುರ ಪೊಲೀಸರು ಆರೋಪಿಗಳನ್ನು ಇದುವರೆವಿಗೂ ಬಂಧಿಸಿಲ್ಲ. ತಕ್ಷಣ ಅರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾಂಡವಪುರ ಪೊಲೀಸ್ ಠಾಣೆಗೆ ಸಾವಿರಾರು ಮಹಿಳಾ ಸದಸ್ಯರೊಡನೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಗ್ರಾ.ಪಂ.ಅಧ್ಯಕ್ಷ ಜಯರಾಮೇಗೌಡ, ವಿ.ಎಸ್.ಎಸ್ ಎನ್. ಬಿ. ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ ,ತಾ.ಪಂ.ಮಾಜಿ ಸದಸ್ಯ ಸಿ.ಡಿ. ಗಂಗಾಧರ್ ಸೇರಿಂತೆ ಹಲವಾರು ಮಹಿಳೆಯರು ಪ್ರತಿಭಟನೆ ನೇತೃತ್ವವಹಿಸಿದ್ದರು.