ಪರಿಹಾರಕ್ಕೆ ಅಂದಾಜು ಪಟ್ಟಿ ಸಿದ್ಧ
ಹುಣಸೂರು: ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿದು ಪ್ರವಾಹ ಹೆಚ್ಚಾಗಿ ತಿಂಗಳಿನಿಂದ ತಾಲೂಕಿನಲ್ಲಿ 23 ಮನೆ ಹಾಗು 200 ಎಕರೆ ಬೆಳೆ ನಾಶವಾಗಿದೆ ಎಂದು ತಹಸೀಲ್ದಾರ್ ಶಿವಾನಂದಮೂರ್ತಿ ತಿಳಿಸಿದ್ದಾರೆ.
ಕೊಡಗಿನಾದ್ಯಂತ ಬೀಳುತ್ತಿರುವ ಬಾರಿ ಮಳೆಗೆ ಲಕ್ಷ್ಮಣತೀರ್ಥ ನದಿ ಪಾತ್ರದ ಜಮೀನು ಜಲಾವೃತವಾಗಿದ್ದು, ಹನಗೋಡು ಹೋಬಳಿಯಲ್ಲಿ ರೈತರು ಬೆಳೆದ ತಂಬಾಕು, ಮುಸುಕಿನ ಜೋಳ, ದ್ವಿದಳ ಧಾನ್ಯ, ಶುಂಠಿ, ಹತ್ತಿಬೆಳೆ ನೀರಿನಲ್ಲಿ ಕೊಚ್ಚಿ ಹೋಗುವುದರ ಜತೆಗೆ ಶೀತದಿಂದ ಸುಮಾರು 200 ಎಕರೆ ಬೆಳೆ ನಾಶವಾಗಿದೆ ಎಂದರು.
ಕಂದಾಯ ಇಲಾಖೆ ಅಧಿಕಾರಿಗಳು ಜಲಾವೃತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಪಟ್ಟಿ ತಯಾರಿಸುತ್ತಿದ್ದು, ಸರ್ಕಾರಕ್ಕೆ ವರದಿ ನೀಡಲಾಗುವುದು. ಮನೆಗಳು ಸಂಪೂರ್ಣ ನಾಶವಾಗಿದ್ದರೆ ತಲಾ 35 ಸಾವಿರ., ಭಾಗಶಃ ಹಾನಿಯಾಗಿದ್ದರೆ 10 ಸಾವಿರ, ಮೇಲ್ಚಾವಣಿ ಕುಸಿದಿದ್ದರೆ 2,500 ನೀಡಲಾಗುತ್ತಿದೆ ಎಂದರು.
ತಂಬಾಕು ಬ್ಯಾರನ್ಗೆ ಬೆಂಕಿ
ಹುಣಸೂರು: ತಂಬಾಕು ಬ್ಯಾರನ್ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ವಿವಿಧೆಡೆ ನಡೆದಿದೆ. ತಾಲೂಕಿನ ಕಾಮಗೌಡನಹಳ್ಳಿ ನಿವಾಸಿ ಶಂಕರಮ್ಮ, ಕಟ್ಟೆಮಳಲವಾಡಿಯ ಸಣೇಗೌಡ ಮತ್ತು ಮರದೂರು ಗ್ರಾಮದ ಸಮಿ ಉಲ್ಲಾ ಅವರಿಗೆ ಸೇರಿದ ಬ್ಯಾರನ್ನಲ್ಲಿ ತಂಬಾಕು ಹದಮಾಡುತ್ತಿದ್ದಾಗ ಆಕಸ್ಮಿಕ ಬೆಂಕಿ ಬಿದ್ದು ಹೊಗೆಸೊಪ್ಪು ಸಂಪೂರ್ಣ ಸುಟ್ಟು ಹೋಗಿ ಒಟ್ಟು ಅಂದಾಜು 10 ಲಕ್ಷ ನಷ್ಟವಾಗಿದೆ.
ಆಟೋ ಉರುಳಿ ವ್ಯಕ್ತಿ ಸಾವು
ಹುಣಸೂರು: ಆಟೋ ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕುಡಿನೀರು ಮುದ್ದನಹಳ್ಳಿ ಸಮೀಪ ಜರುಗಿದೆ. ಪಟ್ಟಣದ ರಹಮತ್ ಮೊಹಲ್ಲಾ ನಿವಾಸಿ ಮಹಮದ್ ಸಲೀಂ (60) ಮೃತಪಟ್ಟರೆ, ಅಳಿಯ ಸಲೀಂನ ತಲೆ, ಕೈ, ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಪ್ಪಲಿ ವ್ಯಾಪಾರಿಗಳಾದ ಇವರು ಹುಣಸೂರಿನಿಂದ ಹಳ್ಳಿ ಹಳ್ಳಿಗೆ ಆಟೋದಲ್ಲಿ ತೆರಳಿ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಮುಗಿಸಿ ಹುಣಸೂರಿಗೆ ಹಿಂದಿರುಗುತ್ತಿದ್ದಾಗ ಆಟೋ ಪಲ್ಟಿಯಾಗಿದೆ. ಈ ಸಂಬಂಧ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

