ಮೈಸೂರು

ಬೆಳಕು ಬಳಕು ಛಾಯಾಚಿತ್ರ ಪ್ರದರ್ಶನಾರಂಭ

Published On :

ಮೈಸೂರು: ರಂಗಕರ್ಮಿ ಹಾಗೂ ಕಲಾವಿಮರ್ಶಕ ಶ್ರೀಕಂಠ ಗುಂಡಪ್ಪ ಅವರು ಕ್ಯಾಮರಾ ಕಣ್ಣಿನಿಂದ ಸೆರೆ ಹಿಡಿದಿರುವ ಬೆಳಕು ಬಳಕು ಛಾಯಾಚಿತ್ರ ಪ್ರದರ್ಶನ ಶುಕ್ರವಾರ ಆರಂಭವಾಯಿತು.
ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ ಮೂರು ದಿನಗಳ ಪ್ರದರ್ಶನವನ್ನು ಪತ್ರಿಕಾ ಛಾಯಾಚಿತ್ರಗ್ರಾಹಕ ನೇತ್ರರಾಜು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಲಾವಿದೆ ಹಾಗೂ ಜ್ಯೋತಿಷಿ ಡಾ. ಜಮುನಾರಾಣಿ ವಿ. ಮಿರ್ಲೆ, ಮನುಷ್ಯನ ಬದುಕಿನಲ್ಲಿ ಬೆಳಕು ಹಾಗೂ ಬಣ್ಣಗಳು ಹಾಸುಹೊಕ್ಕಿವೆ. ತಮ್ಮ ಭಾವನೆಯ ಮೂಲಕ ಬೆಳಕು ಹಾಗೂ ಬಣ್ಣವನ್ನು ಸೆರೆ ಹಿಡಿಯುವ ಮೂಲಕ ಶ್ರೀಕಂಠ ಗುಂಡಪ್ಪ ಅವರು ಅದ್ಭುತ ಲೋಕವನ್ನು ಸೃಷ್ಟಿಸಿದ್ದಾರೆ ಎಂದರು.
ಹಿರಿಯ ಚಿತ್ರ ಕಲಾವಿದ ಬಸವಣ್ಣಚಾರ್ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಶ್ರೀಕಂಠ ಗುಂಡಪ್ಪ ಸ್ವಾಗತಿಸಿದರು. ಆರ್ಟ್ ಗ್ಯಾಲರಿಯ ಅಧ್ಯಕ್ಷ ಎನ್. ಶಿವಲಿಂಗಪ್ಪ ವಂದಿಸಿದರು. ರಂಗಕರ್ಮಿಗಳಾದ ಪ್ರೊ. ಎಚ್.ಎಸ್. ಉಮೇಶ್, ರಾಜಶೇಖರ ಕದಂಬ, ಕರ್ನಾಟಕ ರಂಗಸಂಗೀತ ಪರಿಷತ್ ಅಧ್ಯಕ್ಷ ಎಚ್.ಎಸ್. ಗೋವಿಂದೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್, ಕಾರ್ಯಕ್ರಮ ಸಂಯೋಜಕರಾದ ಎನ್.ಬಿ. ಕಾವೇರಪ್ಪ ಹಾಗೂ ಕೊ.ಸು. ನರಸಿಂಹಮೂರ್ತಿ ಇದ್ದರು. ಸಿರಿಯಲ್ ಸೆಟ್, ಟ್ಯೂಬ್ ಲೈಟ್, ಕ್ಯಾಂಡಲ್ ಲೈಟ್ ಹಾಗೂ ಹೋಮಕುಂಡದ ಬೆಳಕನ್ನು ಕ್ಯಾಮರ ಮೂಲಕ ಸೆರೆ ಹಿಡಿದಿರುವ ಸುಮಾರು 40 ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಆ. 11 ರವರೆಗೆ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಪ್ರದರ್ಶನ ವೀಕ್ಷಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.