ಶಿಲಾನ್ಯಾಸ ಕಾರ್ಯಕ್ರಮ
ಮೈಸೂರು: ಕುವೆಂಪುನಗರದಲ್ಲಿರುವ ಜ್ಞಾನಭಾರತಿ ಸಂಸ್ಥೆಯ ರಮಾಬಾಯಿ ಗೋವಿಂದರಾವ್ ಬಯಲುರಂಗಮಂದಿರದ ಶಿಲಾನ್ಯಾಸ ಕಾರ್ಯಕ್ರಮವನ್ನು ಆ. 11ರ ಸಂಜೆ 7.15ಕ್ಕೆ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಡಾ.ಟಿ.ಪಿ. ಕೃಷ್ಣಕಾಂತ ತಿಳಿಸಿದ್ದಾರೆ.
ಸಸಿ ನೆಡುವ
ಕಾರ್ಯಕ್ರಮ
ಕುವೆಂಪುನಗರದಲ್ಲಿರುವ ಮೈಸೂರು ಸ್ಪೋರ್ಟ್ಸ್ ಕ್ಲಬ್ನಲ್ಲಿ ಆ. 11ರ ಬೆಳಗ್ಗೆ 11ಕ್ಕೆ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸಮವಸ್ತ್ರ ವಿತರಿಸುವರು. ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ಜಿ.ಟಿ. ದೇವೇಗೌಡ, ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಭಾಗವಹಿಸುವರು.
ವಧು- ವರರ
ಸಮಾವೇಶ ನಾಳೆ
ಸಯ್ಯಾಜಿರಾವ್ ರಸ್ತೆಯಲ್ಲಿರುವ ಕಂಕಣಭಾಗ್ಯ ಸರ್ವಜನಾಂಗೀಯ ವಧು- ವರರ ಮಾಹಿತಿ ಕೇಂದ್ರದಲ್ಲಿ ಆ. 11ರ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಧು- ವರರ ಸಮಾವೇಶ ಏರ್ಪಡಿಸಲಾಗಿದ್ದು, ಮೊ. 96863 98520 ಸಂಪರ್ಕಿಸಬಹುದು.
ಆರ್ಟಿಐ ತಿದ್ದುಪಡಿ
ವಿರೋಧಿಸಿ ಪ್ರತಿಭಟನೆ
ಕೇಂದ್ರ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಆ. 10ರ ಬೆಳಗ್ಗೆ 10ಕ್ಕೆ ನಗರದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸುವರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳಿ ಮನವಿ ಸಲ್ಲಿಸುವರು.
ಐಎಂಎ ಪೂರ್ವ
ಶಾಖೆ ಉದ್ಘಾಟನೆ
ಭಾರತೀಯ ವೈದ್ಯಕೀಯ ಸಂಘದ ಮೈಸೂರು ಪೂರ್ವ ಶಾಖೆಯ ಉದ್ಘಾಟನಾ ಸಮಾರಂಭ ಆ. 11ರ ಬೆಳಗ್ಗೆ 11ಕ್ಕೆ ಸಯ್ಯಾಜಿರಾವ್ ರಸ್ತೆಯ ಐಎಂಎ ಸಭಾಂಗಣದಲ್ಲಿ ನಡೆಯಲಿದೆ. ಐಎಂಎ ರಾಷ್ಟ್ರೀಯ ಮಾಜಿ ಅಧ್ಯಕ್ಷ ಡಾ.ಜಿ.ಕೆ. ರಾಮಚಂದ್ರ ಈ ಶಾಖೆ ಉದ್ಘಾಟಿಸಲಿದ್ದು, ರಾಜ್ಯ ಘಟಕದ ಅಧ್ಯಕ್ಷ ಡಾ.ವೈ.ಎಂ. ಸುಧಾಕರ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ವಹಿಸಿಕೊಡುವರು.
ಡೆಮೊ ತರಗತಿ
ಸರಸ್ವತಿಪುರಂನಲ್ಲಿರುವ ಶಿಕ್ಷಾ ಭಾರತಿಯಲ್ಲಿ ಆ. 11 ರಂದು ಮಧ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಸಿಇಟಿ ಡೆಮೊ ತರಗತಿ ನಡೆಯಲಿದ್ದು, ಮೊ. 87478 49060 ಸಂಪರ್ಕಿಸಬಹುದು.
ವಿಶೇಷ ತರಬೇತಿ
ಬೆಳವಾಡಿಯಲ್ಲಿರುವ ಜಿಐಎಂಡಿಎಸ್ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಆಗಸ್ಟ್ನಿಂದ ಏಪ್ರಿಲ್ವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿ ನಡೆಸಲಿದ್ದು, ಆಸಕ್ತರು 100 ರು. ಶುಲ್ಕ ಪಾವತಿಸಿ ಹೆಸರು ನೋಂದಾಯಿಸಬಹುದು. ಮೊ. 94498 47569 ಸಂಪರ್ಕಿಸಬಹುದು.
ಸಂಗೀತ ಕಚೇರಿ
ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆ. 11, 15 ಮತ್ತು 18 ರಂದು ವಿವಿಧೆಡೆ ಸಂಗೀತ ಕಚೇರಿ ಏರ್ಪಡಿಸಲಾಗಿದೆ. ಆ.11 ಸಂಜೆ 6.30ಕ್ಕೆ ಜಯನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಗೌತಮ್ ಅವರು ಗಾಯನ, ಆ. 15ರ ಸಂಜೆ 6.30ಕ್ಕೆ ವಿದ್ಯಾರಣ್ಯಪುರಂನಲ್ಲಿರುವ ಆವನೀ ಶಂಕರ ಮಠದಲ್ಲಿ ರಘುನಂದನ, ಗೋದಾಮಣಿ ಅವರು ಗಾಯನ ಹಾಗೂ ಆ. 18ರ ಸಂಜೆ 6.30ಕ್ಕೆ ಜಯನಗರದ ಶ್ರೀರಾಂಪುರದಲ್ಲಿ ಅರ್ಚನ ಬೆಣ್ಣೂರು ಅವರು ಗಾಯನ ಪ್ರಸ್ತುತಪಡಿಸುವರು.
ಪುಣ್ಯಾರಾಧನೆ ಸಭೆ
ಅಪಘಾತದಲ್ಲಿ ನಿಧನರಾದ ಗೋಸಾಯಿ ಮಠದ ಸುರೇಶ್ವಾರಾನಂದ ಭಾರತೀ ಸ್ವಾಮಿಗಳಿಗೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನಿಂದ ಆ. 11 ರಂದು ಬೆಂಗಳೂರಿನ ಗೋಸಾಯಿ ಮಠದಲ್ಲಿ ಪುಣ್ಯಾರಾಧನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಎಸ್. ಕೇಶವನಾಥರಾವ್ ಜಾಧವ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

