ಮಚ್ಚಿನಿಂದ ಕೊಚ್ಚಿ ಬರ್ಬರ ಕೊಲೆ
ಕ.ಪ್ರ.ವಾರ್ತೆ ಟಿ.ನರಸೀಪುರ ಆ. 12
ತಾಯಿಯ ಸಾವಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನೇ ಕಾರಣನಾದನೆಂದು ಭಾವಿಸಿದ ಅಪ್ರಾಪ್ತ ಯುವಕನೋರ್ವ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕುಪ್ಯ ಗ್ರಾಮದಲ್ಲಿ ನಡೆದಿದೆ.
ಕುಪ್ಯ ಗ್ರಾಮದ ಲೇಟ್ ಮರಿಸಿದ್ದಯ್ಯ ಎಂಬುವರ ಪುತ್ರ ಪ್ರಕಾಶ (43) ಉರುಫ್ ಬಕಾಶಿ ಕೊಲೆಯಾದವರು. ಅದೇ ಗ್ರಾಮದ ಕರಿಯಪ್ಪ ಎಂಬುವರ ಪುತ್ರ ಸುರೇಶ (17) ಎಂಬಾತ ತನ್ನ ತಾಯಿ ರಾಜಮಣಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಕಾಶ ಜತೆಗಿನ ಅನೈತಿಕ ಸಂಬಂಧ ಪ್ರಮುಖ ಕಾರಣವೆಂದು ಮಚ್ಚಿನಿಂದ ಆತನನ್ನು ಕಳೆದ ಆ.10ರ ಶನಿವಾರ ರಾತ್ರಿ ಹತ್ಯೆ ಮಾಡಿದ್ದಾನೆ.
ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದಿಂದ ಭಾನುವಾರ ಕುಪ್ಯ ಗ್ರಾಮಕ್ಕೆ ಆಗಮಿಸಿದ ಹೇಮಾವತಿ ಅವರು ಪತಿ ಪ್ರಕಾಶ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಟ ನಡೆಸಿದ್ದಾರೆ. ಗ್ರಾಮದ ತಮ್ಮ ಜಮೀನಿನ ಬಳಿಯಿರುವ ಅಡ್ಡಹಳ್ಳದಲ್ಲಿ ಕೊಲೆಯಾಗಿದ್ದ ಪ್ರಕಾಶನ ಶವ ಸಂಜೆ ದೊರೆತಿದೆ. ತಕ್ಷಣ ಪಟ್ಟಣದ ಪೊಲೀಸರಿಗೆ ತಿಳಿಸಿದ್ದಾರೆ.
ಕಳೆದ 2009ರಲ್ಲಿ ರಾಜಮಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ತಾಯಿಯ ಸಾವಿಗೆ ಅನೈತಿಕ ಸಂಬಂಧವನ್ನಿಂಟುಕೊಂಡಿದ್ದ ಪ್ರಕಾಶನೇ ಕಾರಣವೆಂದು ಭಾವಿಸಿದ್ದ ಸುರೇಶ ಅನೇಕ ಭಾರಿ ಮಚ್ಚನ್ನು ಹಿಡಿದು ಪ್ರಕಾಶನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಜಗಳವಾಡುತ್ತಿದ್ದ. ಅಪ್ರಾಪ್ತನೆಂದು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಈ ಘಟನೆ ಕುಪ್ಯ ಗ್ರಾಮದಲ್ಲಿ ಕಳೆದ ಶನಿವಾರ ನಡೆದುಹೋಗಿದೆ. ಪತ್ನಿ ಹೇಮಾವತಿ ಅವರು ನೀಡಿದ ದೂರನ್ನು ಆಧಾರಿಸಿ ಆರೋಪಿ ಯುವಕನನ್ನು ಬಂಧಿಸಿರುವ ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

