ರಾಜಕಾರಣಿಗಳ ಓಲೈಕೆ ಸಲ್ಲ: ಎಂ.ಬಿ. ಸಿಂಗ್
ಕ.ಪ್ರ.ವಾರ್ತೆ ಮೈಸೂರು ಆ. 13
ಕಲಾವಿದರು ರಾಜಕಾರಣಿಗಳನ್ನು ಓಲೈಸುವುದು ಸರಿಯಲ್ಲ ಎಂದು ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯನಿರ್ವಹಕ ಟ್ರಸ್ಟಿ ಎಂ.ಬಿ. ಸಿಂಗ್ ಹೇಳಿದರು.
ನಗರದ ಕಾವಾದಲ್ಲಿ ಪ್ರೊ. ಎಂ.ಎಸ್. ನಂಜುಂಡರಾವ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಎಂ.ಎಸ್. ನಂಜುಂಡರಾಯರ ಜೀವನ ಚರಿತ್ರೆಯನ್ನು ಒಳಗೊಂಡ ಅನನ್ಯ ಕಲಾಸಾರಥಿ ನಂಜುಂಡರಾವ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಎಂ.ಬಿ. ಸಿಂಗ್ ಅವರ ಲಿಖಿತ ಭಾಷಣವನ್ನು ಅವರ ಅನಾರೋಗ್ಯ ನಿಮಿತ್ತ, ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ. ಸಿಂಗ್ ವಾಚಿಸಿದರು.
ನಂಜುಂಡರಾವ್ ಅವರಿಗೆ ಅನೇಕ ರಾಜಕೀಯ ಸ್ನೇಹಿತರು ಇದ್ದರು. ಆದರೆ ಎಂದಿಗೂ ಅವರನ್ನು ಓಲೈಸಲಿಲ್ಲ. ಅವರ ನೆರವನ್ನೂ ಪಡೆಯಲಿಲ್ಲ. ಕಲೆಗೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದೆ ತಿಳಿದಿದ್ದ ಅವರು, ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ಸ್ಥಾಪನೆಯಾಗಲು ಕಾರಣರಾದರು ಎಂದರು.
ಒಕೃತಿಯ ಲೇಖಕಿ ಎನ್. ನಾಗಲಕ್ಷ್ಮಿ, ಕಾವಾ ಡೀನ್ ದೇಶಪಾಂಡೆ, ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಲಕ್ಷ್ಮೀಶ ಮತ್ತು ಕಾರ್ಯದರ್ಶಿ ಎಸ್.ಎನ್. ರವಿಶಂಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

