ಮೈಸೂರು

ವಸ್ತುಗಿಂತ ಮನುಷ್ಯತ್ವ ಮುಖ್ಯ: ಜಯದೇವ

Published On :

ಕ.ಪ್ರ.ವಾರ್ತೆ , ಮೈಸೂರು , ಆ. 21
ಪ್ರಪಂಚದಲ್ಲಿ ವಸ್ತುಗಳಿಗಿಂತ ಮನುಷ್ಯತ್ವವೇ ಮುಖ್ಯ. ಇದನ್ನು ತಿಳಿಸಿಕೊಡುವ ಜವಾಬ್ದಾರಿ ಶಿಕ್ಷಣದ ಮೇಲಿದೆ ಎಂದು ಚಾಮರಾಜನಗರದ ದೀನಬಂಧು ಟ್ರಸ್ಟ್‌ನ ಸಂಸ್ಥಾಪಕ ಡಾ.ಜಿ.ಎಸ್. ಜಯದೇವ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಮನುಷ್ಯನಿಗಿಂತ ವಸ್ತುಗಳೇ ಮುಖ್ಯ ಎಂದು ಹೇಳಿಕೊಡುತ್ತಿವೆ. ಇದು ಬದಲಾಗಬೇಕು. ಮನುಷ್ಯತ್ವದ ಪ್ರಾಮುಖ್ಯತೆಯನ್ನು ತಿಳಿಸಿಕೊಡಬೇಕು ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಧಾರ್ಮಿಕ ಸಂಸ್ಥೆಗಳು ಮನುಷ್ಯನ ಹೆಸರೇಳಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿವೆ. ಯಾರಿಗಾಗಿ ಶಿಕ್ಷಣ ನೀಡುತ್ತಿದ್ದೇವೋ ಎಂಬುದನ್ನು ಮರೆತಿವೆ. ಸರಳ ಬದುಕಿನ ಛಾಯೆ ಇರುವ ಗ್ರಾಮೀಣ ಬದುಕನ್ನು ಉಳಿಸಬೇಕು. ಗ್ರಾಮೀಣ ಬದುಕಿನಲ್ಲಿ ನಂಬಿಕೆ ಇಲ್ಲದಂತಾಗಿದೆ. ಅಲ್ಲಿನವರು ನಗರಕ್ಕೆ ಗುಳೆ ಬರುತ್ತಿದ್ದಾರೆ. ಅವರು ಅಲ್ಲೆ ನೆಲೆಸಿ ಬದುಕನ್ನು ಹಸನು ಮಾಡಿಕೊಳ್ಳುವಂತೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈಗ ನಮ್ಮನ್ನು ಆಳುತ್ತಿರುವ ಸರ್ಕಾರ ಇಂಡಿಯಾ ಶೈನಿಂಗ್ (ಭಾರತ ಪ್ರಕಾಶಿಸುತ್ತಿದೆ) ಎಂದು ಹೇಳುತ್ತಿದೆ. ಆದರೆ, ಈ ದೇಶದಲ್ಲಿ ಶೇ. 80 ರಷ್ಟು ಜನಕ್ಕೆ ಹೊಟ್ಟೆ ತುಂಬ ಪೌಷ್ಟಿಕ ಆಹಾರವೇ ದೊರಕುತ್ತಿಲ್ಲ. ಯಾರಿಗೆ ಧ್ವನಿ ಇಲ್ಲವೋ ಅವರನ್ನು ಮುಗಿಸುವ ಕೆಲಸಕ್ಕೆ ಮುಂದಾಗುತ್ತಿದ್ದೇವೆ ಎಂದು ವಿಷಾದಿಸಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷತೆ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಶಿವರಾಂ ಕಾಡನಕುಪ್ಪೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಘದ ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮೀನಾರಾಯಣ, ಅಧ್ಯಾಪಕರಾದ ಎನ್. ಗೀತಾ, ಎಚ್.ಜೆ. ವನಜಾಕ್ಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.