ಮೈಸೂರು

ವರ್ಗಾವಣೆಗೊಂಡ ಶಿಕ್ಷಕಿ ಶಾಂತಮ್ಮಗೆ ಬೀಳ್ಕೊಡುಗೆ

Published On :

ಕ.ಪ್ರ.ವಾರ್ತೆ ,  ನಂಜನಗೂಡು ,  ಆ. 25
ಪಟ್ಟಣದ ಅಶೋಕಪುರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕಿ ಆರ್. ಶಾಂತಮ್ಮ ಅವರು ಟಿ. ನರಸೀಪುರ ಶಾಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶುಕ್ರವಾರ ಸನ್ಮಾನಿಸಿ ನೆನಪಿನ ಕಾಣಿಕೆ  ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಶಾಂತಮ್ಮ, ಈ ಶಾಲೆಗೆ ಶಿಕ್ಷಕಿಯಾಗಿ ಬಂದ ಮೇಲೆ ಗ್ರಾಮದ ಜನತೆ, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಪ್ರೀತಿ- ವಾತ್ಸಲ್ಯದಿಂದ ನೋಡಿಕೊಂಡರು. ಅವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಹದೇವು, ಪುರಸಭಾ ಸದಸ್ಯ ಸುಂದರರಾಜ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮುದ್ದು ಮಾದೇಗೌಡ, ನಿರ್ದೇಶಕ ಧರ್ಮ ರತ್ನಾಕರ, ನಿವೃತ್ತ ಶಿಕ್ಷಕ ಪಿ. ಸಿದ್ದು, ಮುಖಂಡರಾದ ಎಸ್. ಸ್ವಾಮಿ, ಶ್ರೀನಿವಾಸ್, ಮಂಜುನಾಥ್, ಕುಮಾರ್, ಚಂದ್ರಶೇಖರ್, ಮಂಚಯ್ಯ, ಚಿಕ್ಕತಾಯಮ್ಮ, ಯಜಮಾನರಾದ ಕೃಷ್ಣಪ್ಪ, ಚನ್ನಕೇಶವಯ್ಯ, ಸಣ್ಣಪ್ಪ, ಚೆನ್ನಪ್ಪಾಜಿ, ಶಿಕ್ಷಕರಾದ ಆರೋಗ್ಯ ಮೇರಿ, ಮೀನಾ, ಸುಮತಿ, ಭಾರತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.