ರಾಯರ ಮಠದಲ್ಲಿ ಪಂಚರಾತ್ರೋತ್ಸವ
ಕ.ಪ್ರ.ವಾರ್ತೆ , ಹುಣಸೂರು , ಆ. 25
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಕಲ್ಕುಣಿಕೆಯ ರಾಘವೇಂದ್ರ ಮೃತ್ತಿಕಾ ಬೃಂದಾವನ ಮತ್ತು ಬ್ರಾಹ್ಮಣರ ಬೀದಿಯಲ್ಲಿರುವ ರಾಘವೇಂದ್ರ ರಾಯರ ಮಠಗಳಲ್ಲಿ 342ನೇ ಆರಾಧನಾ ಮಹೋತ್ಸವ ಹಾಗೂ ಪಂಚರಾತ್ರೋತ್ಸವವು ವಿಜೃಂಭಣೆಯಿಂದ ನಡೆಯಿತು.
ಮೊದಲ ದಿನ ಶ್ರೀಮಠದಲ್ಲಿ ಸತ್ಯನಾರಾಯಣ ಪೂಜೆ, ರಾಯರಿಗೆ ಅಭಿಷೇಕ, ಪಂಚಾಮೃತ, ಕ್ಷೀರಾಭಿಷೇಕ, ವಿಶೇಷ ಪೂಜೆ, ಪ್ರಸಾದ ವಿನಿಯೋಗ ನೆರವೇರಿತು. ಎರಡನೇ ದಿನ ರಾಯರಿಗೆ ವಿಶೇಷ ಹೂವಿನ ಅಲಂಕಾರ ಮತ್ತು ಪೂಜೆ, ಅದೇ ದಿನ ಹುಣಸೂರಿನ ಹುಣ್ಣಿಮೆ ಭಜನಾ ಸಂಘ ಹಾಗೂ ಕುಶಾಲನಗರದ ಭಜನಾ ಮಂಡಳಿ ವತಿಯಿಂದ ಭಜನೆ ಮತ್ತು ಮೈಸೂರು ರಂಗಸ್ವಾಮಿ ಅವರಿಂದ ಭಕ್ತಿಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮೂರನೇ ದಿನ ವಿಶೇಷ ಪೂಜೆ, ತೀರ್ಥಪ್ರಸಾದ ವಿನಿಯೋಗ ಹಾಗೂ ಅಂದೇ ಹುಣಸೂರಿನ ಶ್ರೀನಿವಾಸ ತಂಡದವರಿಂದ ಭಕ್ತಿಗೀತೆ ಏರ್ಪಡಿಸಲಾಗಿತ್ತು. ನಾಲ್ಕನೇ ದಿನ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ನಟರಾಜ ಸ್ವಾಮೀಜಿ ಸಾನಿಧ್ಯದಲ್ಲಿ ಶ್ರೀಪಾದಂಗಳವರ ಆಪ್ತ ಕಾರ್ಯದರ್ಶಿ ರಾಜಾ ಎಸ್. ಗೋಪಾಲಚಾರ್ಯ ನೇತೃತ್ವದಲ್ಲಿ ಎಲ್ಲಾ ರಾಯರ ಪೂಜಾ ಸೇವೆ ನಡೆಯಿತು.
ಶಾಸಕ ಎಚ್.ಪಿ. ಮಂಜುನಾಥ್ ವಿಜೇತರಿಗೆ ಬಹುಮಾನ ವಿತರಿಸಿದರು. ಉಪವಿಭಾಗಾಧಿಕಾರಿ ವಿನೂತಾಪ್ರಿಯಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮೆರವಣಿಗೆ: ಇದೇ ಪ್ರಥಮ ಬಾರಿಗೆ ವಾಹನದಲ್ಲಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವಿಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳಾ ಭಜನಾ ತಂಡ ಮೆರವಣಿಗೆಯುದ್ದಕ್ಕೂ ರಾಯರ ಕುರಿತ ಭಜನೆ, ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಆರಾಧನಾ ಮಹೋತ್ಸವದ ಸಂಪೂರ್ಣ ಜವಬ್ದಾರಿಯನ್ನು ಟ್ರಸ್ಟ್‌ನ ಅಧ್ಯಕ್ಷ ಕೆ.ಪಿ. ಕೃಷ್ಣಚಾರ್, ಕಾರ್ಯದರ್ಶಿ ಸೋಮಶೇಖರಾಚಾರ್, ಮಹೋತ್ಸವ ಸಮಿತಿ ಅಧ್ಯಕ್ಷ ಸಹದೇವ, ಶ್ರೀಮಠದ ಗುರುರಾಜಾಚಾರ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

