ಮೈಸೂರು

ಅತ್ತರ್‌ಮತಿನ್ ತಾಪಂ ಪ್ರಭಾರ ಅಧ್ಯಕ್ಷ

Published On :

ಕ.ಪ್ರ.ವಾರ್ತೆ , ಪಿರಿಯಾಪಟ್ಟಣ , ಆ. 30
ಇಲ್ಲಿನ ತಾಪಂ ಪ್ರಭಾರ ಅಧ್ಯಕ್ಷರಾಗಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅತ್ತರ್‌ಮತಿನ್ ಅಧಿಕಾರ ವಹಿಸಿಕೊಂಡರು. ಈ ಹಿಂದೆ ತಾಪಂ ಅಧ್ಯಕ್ಷರಾಗಿದ್ದ ರವಿನಾಯಕ ಹಾಗೂ ಉಪಾಧ್ಯಕ್ಷರಾಗಿದ್ದ ಯೋಗೇಶ್ ಅವರು ಜೆಡಿಎಸ್ ಪಕ್ಷದ ಆಂತರಿಕ ಒಪ್ಪಂದದಂತೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅದರಂತೆ ತಾಪಂ ವ್ಯವಸ್ಥಾಪಕ ಶಂಕರಪ್ಪಾಚ್ಚಾರ್. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅತ್ತರ್‌ಮತಿನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮಾಜಿ ಅಧ್ಯಕ್ಷ ಆರ್.ಎಸ್. ಮಹದೇವ್, ಮಾಜಿ ಉಪಾಧ್ಯಕ್ಷ ಯೋಗೇಶ್, ಸದಸ್ಯರಾದ ಪ್ರಕಾಶ್, ರಘುನಾಥ್, ಮುಖಂಡರಾದ ಹೇಮಂತ್‌ಕುಮಾರ್, ರವಿ ಇದ್ದರು.
ಹಡಪದ ಅಪ್ಪಣ್ಣ ಜಯಂತಿ
ಕ.ಪ್ರ.ವಾರ್ತೆ , ಸುತ್ತೂರು , ಆ. 30
ವರುಣ ಕ್ಷೇತ್ರದ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್. ಹೊಸಕೋಟೆಯಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಮಹೋತ್ಸವವನ್ನು ಅಖಿಲ ಕರ್ನಾಟಕ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಎನ್.ವಿ. ನರಸಿಂಹಯ್ಯ ಉದ್ಘಾಟಿಸಿದರು. ಜಿಪಂ ಸದಸ್ಯರಾದ ಎಲ್.ಮಾದಪ್ಪ, ಎಂ.ಬಿ. ಸಿದ್ದೇಗೌಡ, ಕಾಂಗ್ರೆಸ್ ಮುಖಂಡ ರಾಜಶೇಖರ್, ಮೆಣಸೆಗೌಡ, ಪುಟ್ಟಣ್ಣ, ಕೃಷ್ಣನಾಯಕ, ಸರ್ವೆಶ್, ಗ್ರಾಪಂ ಅಧ್ಯಕ್ಷ ಗೌರಮ್ಮ, ಜವರಯ್ಯ, ಉಪಾಧ್ಯಕ್ಷ ಮಾದಶೆಟ್ಟಿ, ಶಿವಣ್ಣ, ತಾಪಂ ಸದಸ್ಯ ಮಹದೇವಸ್ವಾಮಿ, ಸವಿತಾ ಸಮಾಜದ ಸಂಘದ ಅಧ್ಯಕ್ಷ ಮಹದೇವು, ಗೋವಿಂದಯ್ಯ, ಮಂಚಯ್ಯ, ಶಿವು, ನಾಗರಾಜು ಎಲ್ಲ ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
ಹಸೀನಾತಾಜ್‌ಗೆ ಮೇಯರ್ ಸ್ಥಾನ ನೀಡುವಂತೆ ಆಗ್ರಹ
ಕೆ.ಆರ್. ನಗರ: ನಗರಪಾಲಿಕೆಯ ಮೇಯರ್ ಸ್ಥಾನವನ್ನು ವಾರ್ಡ್ ನಂ.46 ರಿಂದ ಚುನಾಯಿತರಾಗಿರುವ ಜೆಡಿಎಸ್ ಪಕ್ಷದ ಸದಸ್ಯೆ ಹಸೀನಾತಾಜ್ ಅವರಿಗೆ ನೀಡಬೇಕೆಂದು ತಾಲೂಕು ಶಹೀದ್ ಟಿಪ್ಪು ಸುಲ್ತಾನ್ ಸಮಿತಿಯ ಅಧ್ಯಕ್ಷ ಜಾಬೀರ್ ಮತ್ತು ಉಪಾಧ್ಯಕ್ಷ ವಸೀಂ ಉಲ್ಲಾಖಾನ್ ಒತ್ತಾಯಿಸಿದ್ದಾರೆ. ಈವರೆಗೆ ಪಾಲಿಕೆಯ ಮೇಯರ್ ಸ್ಥಾನವನ್ನು ಮುಸ್ಲಿಂ ಮಹಿಳೆಗೆ ನೀಡಿಲ್ಲ. ಆದ್ದರಿಂದ ಮೀಸಲಾತಿ ಅನ್ವಯ ಜೆಡಿಎಸ್‌ನವರು ಇವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.  
ವಿದ್ಯಾರ್ಥಿ ವೇತನ
ಕೆ.ಆರ್. ನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಿದೆ. 2013-14ನೇ ಸಾಲಿಗೆ ತಾಲೂಕಿನ ಸರ್ಕಾರಿ, ಅರೆ ಸರ್ಕಾರಿ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ 5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವೇತನಕ್ಕಾಗಿ ಅರ್ಜಿ ಸಲ್ಲಿಸುವುದು. ವಿದ್ಯಾರ್ಥಿ ವೇತನ ಮಂಜೂರಾತಿ ಬಯಸುವ ಆಸಕ್ತ ವಿದ್ಯಾರ್ಥಿಗಳು ಸೆ.25ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಇಲ್ಲಿನ ಬಿಸಿಎಂ ಕಚೇರಿಗೆ ಸಲ್ಲಿಸಬೇಕು.
ಶಿಕ್ಷಕರಿಗೆ ಸ್ಪರ್ಧೆ
ಕೆ.ಆರ್. ನಗರ: ಸೆ.5 ರಂದು ನಡೆಯುವ ಶಿಕ್ಷಕರ ದಿನಾಚರಣೆಯ ಅಂಗವಾಗಿ ತಾಲೂಕಿನ ಶಿಕ್ಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸೆ.2ರ ಬೆಳಗ್ಗೆ 11.30ಕ್ಕೆ ಇಲ್ಲಿನ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದೆ. ಆಸಕ್ತ ಶಿಕ್ಷಕರು ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.
ಸಂದರ್ಶನ
ಟಿ. ನರಸೀಪುರ: ಉದ್ಯೋಗಿನಿ ಯೋಜನೆಯಲ್ಲಿ ಸಾಲ ಸೌಲಭ್ಯ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿರುವ ಮಹಿಳಾ ಅಭ್ಯರ್ಥಿಗಳಿಗೆ ಸೆ.2ರ ಬೆಳಿಗ್ಗೆ 11ಕ್ಕೆ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸಂದರ್ಶನ ಏರ್ಪಡಿಸಿದೆ. ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಯೋಜನಾಧಿಕಾರಿ ತಿಳಿಸಿದ್ದಾರೆ.
ಶನೈಶ್ಚರಸ್ವಾಮಿ ಪೂಜಾ
ಬಿಳಿಕೆರೆ: ಹುಣಸೂರು ತಾಲೂಕಿನ ಬಿಳಿಕೆರೆಯ ಶ್ರೀ ಶನೈಶ್ಚರಸ್ವಾಮಿ ಭಕ್ತ ಮಂಡಳಿಯಿಂದ ಆ.31 ರಂದು 48ನೇ ವಾರ್ಷಿಕ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ. ಶನಿವಾರ ಬೆಳಗ್ಗೆ ಶನೈಶ್ಚರಸ್ವಾಮಿಯ ಸರ್ವಾಲಂಕೃತ ಹೂವಿನ ಪಲ್ಲಕ್ಕಿ ಉತ್ಸವವು ಮಂಗಳ ವಾದ್ಯದೊಂದಿಗೆ ಬಿಳಿಕೆರೆಯ ಮುಖ್ಯ ಬೀದಿಗಳಲ್ಲಿ ಸಂಚರಿಸಲಿದೆ. ರಾತ್ರಿ 9ಕ್ಕೆ ದೊಡ್ಡಮ್ಮತಾಯಿ ಕೃಪಾಪೋಷಿತ ನಾಟಕ ಮಂಡಳಿಯವರು ರಾಜಾವಿಕ್ರಂ ಅಥವಾ ಶನಿಪ್ರಭಾವ ನಾಟಕ ಪ್ರದರ್ಶಿಸುವರು ಎಂದು ಗಣೇಶಸ್ವಾಮಿ ತಿಳಿಸಿದ್ದಾರೆ.
ಪ್ರದರ್ಶನ
ಮೈಸೂರು: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಸೆ.1 ರಂದು ಸರಸ್ವತಿಪುರಂನ ತೆಂಗಿನ ತೋಪಿನಲ್ಲಿ ಸೋಮವಾರಪೇಟೆ ತಾಲೂಕಿನ ಜಲಪಾತಗಳ ವೈಭವ ಹಾಗೂ ನವೀಕರಿಸಬಹುದಾದ ಮೂಲಗಳಿಂದ ಕುಗ್ರಾಮಗಳಿಗೆ ವಿದ್ಯುತ್ ಕುರಿತ ಪ್ರದರ್ಶನ ಏರ್ಪಡಿಸಲಾಗಿದೆ. ಎಸ್. ಶ್ಯಾಮ್‌ಸುಂದರ್, ಆರ್.ಜಿ. ನಾಗರಾಜ್ ಭಾಗವಹಿಸುವರು.
ಮಹಾಸಭೆ
ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರ ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ 2012-13ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸೆ.1ರ ಬೆಳಗ್ಗೆ 11ಕ್ಕೆ ತ್ಯಾಗರಾಜ ರಸ್ತೆಯಲ್ಲಿರುವ ಬ್ರಾಹ್ಮಣ ಧರ್ಮ ಮಹಾಸಭಾದಲ್ಲಿ ಏರ್ಪಡಿಸಲಾಗಿದೆ. ಗುರುಮಲ್ಲೇಶ್ವರ ಪದವೀಧರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸೆ.1ರ ಬೆಳಗ್ಗೆ 11ಕ್ಕೆ ಹೊಸಮಠದ ನಟರಾಜ ಸಭಾಭವನದಲ್ಲಿ ಏರ್ಪಡಿಸಿದ್ದು, ಅಧ್ಯಕ್ಷ ಅಶ್ವಿನ್ ಆರ್. ಪಾಳೇಗಾರ್ ಅಧ್ಯಕ್ಷತೆ ವಹಿಸುವರು. ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಫೌಂಡೇಷನ್‌ನ ವಾರ್ಷಿಕ ಸಭೆಯನ್ನು ಸೆ. 1ರ ಬೆಳಗ್ಗೆ 11ಕ್ಕೆ ಜೆ.ಪಿ. ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
ಮನವಿ
ಕರ್ನಾಟಕ ರಾಜ್ಯ ಶಿವಾರ್ಚಕ ಸಂಘವು ಆಡಳಿತ ಮಂಡಳಿ ಗಮನಕ್ಕೆ ತಾರದೆ ಸೆ.1 ರಂದು ಸಭೆ ಕರೆದಿದ್ದು, ಶಿವಾರ್ಚಕರು ಭಾಗವಹಿಸದಂತೆ ಅಧ್ಯಕ್ಷ ಹಂಪಾಪುರ ರಾಜು ಕೋರಿದ್ದಾರೆ.
ಪ್ರತಿಭಾ ಪುರಸ್ಕಾರ
ಪ್ರಗತಿ ಸೇವಾ ಟ್ರಸ್ಟ್‌ನಿಂದ ಸೆ.1ರ ಸಂಜೆ 4.30ಕ್ಕೆ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ಪೌರಕಾರ್ಮಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದ್ದು, ನಾರಾಯಣ್, ಎಚ್. ವಿಶ್ವನಾಥ್, ದೇವನೂರು ಮಹಾದೇವ ಭಾಗವಹಿಸುವರು.
ಶಂಕುಸ್ಥಾಪನೆ
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಕೆಕೆಎಂಪಿ ಭವನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಸೆ.1ರ ಬೆಳಗ್ಗೆ 10.30ಕ್ಕೆ ಗಾಯತ್ರಿಪುರಂನ ಉತ್ತರದ 1ನೇ ಹಂತದ ಸಿಎ-2ನಲ್ಲಿ ಏರ್ಪಡಿಸಿದ್ದು, ಸಂಸದ ಎಚ್. ವಿಶ್ವನಾಥ್ ನೆರವೇರಿಸುವರು.
ವಧು- ವರರ ಸಮಾವೇಶ
ಬ್ರಾಹ್ಮಣ ವಧು- ವರರ ಮಾಹಿತಿ ಕೇಂದ್ರದಿಂದ ಉತ್ತರಾದಿ ಮಠದಲ್ಲಿ ಸೆ.1ರ ಬೆಳಗ್ಗೆ ಬೆಳಗ್ಗೆ 10ಕ್ಕೆ ತ್ರಿಮತಸ್ಥ ಬ್ರಾಹ್ಮಣ ವಧು- ವರರ ಸಮಾವೇಶ ಏರ್ಪಡಿಸಿದ್ದು, ಮೊ. 99456 13810 ಸಂಪರ್ಕಿಸಬಹುದು. ಜೆ.ಪಿ. ನಗರದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸೆ. 1ರ ಬೆಳಗ್ಗೆ 10ಕ್ಕೆ ಸಮಾವೇಶ ಏರ್ಪಡಿಸಿದ್ದು, ಮೊ. 98453 49221 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.