5615 ಅಡಿ ಎತ್ತರದ ಪರ್ವತ ಏರಿದ ಪೋರ
ಮೈಸೂರು: ಇಲ್ಲಿನ ಮಹರ್ಷಿ ಶಾಲೆಯ ಎಲ್ಕೆಜಿ ವಿದ್ಯಾರ್ಥಿ ಮಾಸ್ಟರ್ ಎಂ.ಬಿ. ಬೆನಕ ತನ್ನ ನಾಲ್ಕೂವರೆ ವಯಸ್ಸಿನಲ್ಲಿಯೇ 1,712 ಮೀಟರ್ (5,615 ಅಡಿ) ಎತ್ತರದ ಪುಷ್ಪಗಿರಿ ಪರ್ವತವನ್ನು ಚಾರಣದಲ್ಲಿ ಮೊದಲ ಬಾರಿಗೆ ಏರಿದ್ದಾನೆ. ಈತನ ಸಾಧನೆಗೆ ಪುಷ್ಪಗಿರಿ ಬೆಟ್ಟದ ಅರಣ್ಯಾಧಿಕಾರಿ ಶಂಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ಈತ ಜೆ.ಪಿ ನಗರದ 13ನೇ ಕ್ರಾಸ್ ಎ ಬ್ಲಾಕ್ನ ಎರಡನೇ ಮುಖ್ಯರಸ್ತೆ ಎಸ್. ಬೈರಪ್ಪ ಅವರ ಪುತ್ರ.
ಆದಿಜಾಂಬವರಿಗೆ ಟಿಕೆಟ್ ನೀಡಲು ಒತ್ತಾಯ
ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ವಿಭಾಗದ ಏಳು ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಆದಿಜಾಂಬವ ಜನಾಂಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಪಕ್ಷವನ್ನು ಬೆಂಬಲಿಸುವುದಾಗಿ ರಾಜ್ಯ ಆದಿಜಾಂಬವ ಸಂಘ ಘೋಷಿಸಿದೆ. ರಾಜ್ಯದ 36 ವಿಧಾನಸಭಾ ಮೀಸಲು ಕ್ಷೇತ್ರಗಳ ಪೈಕಿ ಕನಿಷ್ಠ ಶೇ. 50 ರಷ್ಟು ಅಂದರೆ 18 ಸೀಟುಗಳನ್ನು ಆದಿಜಾಂಬವರಿಗೆ ನೀಡಬೇಕು. ಇದುವರೆಗೂ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದ ಪಕ್ಷಗಳು ವೋಟು ಪಡೆದುಕೊಂಡು ದ್ರೋಹ ಬಗೆದವು. ಆದ್ದರಿಂದ ಈ ಬಾರಿ ಅದಕ್ಕೆ ಆಸ್ಪದ ನೀಡದೆ ನಮಗೂ ನ್ಯಾಯ ಒದಗಿಸಬೇಕು. ಸಾಮಾಜಿಕ ನ್ಯಾಯ ನೀಡುವ ದೃಷ್ಟಿಯಿಂದ ಎಲ್ಲಾ ಪಕ್ಷಗಳೂ ಈ ಬಗ್ಗೆ ಆಲೋಚಿಸಬೇಕು ಎಂದು ಸಂಘದ ಅಧ್ಯಕ್ಷ ಡಿ. ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೆಜೆಪಿಯಲ್ಲಿ ನಮ್ಮ ಜನಾಂಗದ ಹಿರಿಯ ಮುಖಂಡ ಡಾ.ಡಿ. ತಿಮ್ಮಯ್ಯ ಅವರಿಗೆ ನಂಜನಗೂಡು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕೆಜೆಪಿ ಬೆಂಬಲಿಸುತ್ತೇವೆ ಎಂದರು. ಸಂಘದ ನಗರಾಧ್ಯಕ್ಷ ನಾಗಣ್ಣ, ಬೆಳ್ತೂರು ಮಹದೇವ ಇದ್ದರು.
ಆಕಾಂಕ್ಷಿಗಳಿಗೆ ಸೂಚನೆ
ಮೈಸೂರು: ನಗರಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಸಯ್ಯಾಜಿರಾವ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ಸಾಮಾನ್ಯ ವರ್ಗದವರು 2000, ಪ.ಜಾತಿ, ಪಂಗಡ ಮತ್ತು ಮಹಿಳೆಯರು 1000 ಸಲ್ಲಿಸಬೇಕು ಎಂದು ನಗರಾಧ್ಯಕ್ಷ ರಾಜಣ್ಣ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

