ಮೈಸೂರು

ಕಲಿಕಾ ತಂತ್ರ ಅಗತ್ಯ: ಡಾ. ಗೋಸ್ವಾಮಿ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಜು. 2
ಕಲಿಕೆಯಲ್ಲಿನ ಅಸಮರ್ಥತೆ ನಿವಾರಿಸಲು ಕಲಿಕಾ ತಂತ್ರ ಮತ್ತು ಸಾಮಾಜಿಕ ಜೀವನ ಕೌಶಲ್ಯಗಳನ್ನು ಕಲಿಸಬೇಕು ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಸ್.ಪಿ. ಗೋಸ್ವಾಮಿ ಹೇಳಿದರು.
ಶಾರದಾ ವಿಲಾಸ ಔಷಧ ವಿಜ್ಞಾನ ಕಾಲೇಜು ಆಯೋಜಿಸಿರುವ ಕಲಿಕೆಯ ಅಸಮರ್ಥತೆ ಮತ್ತು ಅರಿವಿನ ದೌರ್ಬಲ್ಯಗಳ ಚಿಕಿತ್ಸೆ ಮತ್ತು ನಿರ್ವಹಣೆಯಲ್ಲಿನ ಪ್ರಸ್ತುತ ವಿಧಾನಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಕಲಿಕೆಯ ಅಸಮರ್ಥತೆ ಸ್ಥೂಲ ಸಮೀಕ್ಷೆ ವಿಷಯ ಕುರಿತು ವಿಚಾರ ಮಂಡಿಸಿದ ಅವರು, ಕಲಿಕೆ ನ್ಯೂನತೆ ನಿವಾರಣೆಗೆ ಅಗತ್ಯವಾದ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಾರದಾ ವಿಲಾಸ ಔಷಧ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಹನುಮಂತಾಚಾರ್ ಜೋಷಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕೆಯ ಅಸರ್ಥತೆ ಸರಿಪಡಿಸಲು ವಿಶೇಷ ಶಿಕ್ಷಣ ಅಗತ್ಯ. ಕೆಲವು ಔಷಧಗಳು ಮಗುವಿನ ಕಲಿಕೆಯ ಸಾಮರ್ಥ್ಯ ಮೇಲೆ ಪ್ರಭಾವ ಬೀರಿ ಮಗುವಿನ ಗಮಶೀಲತೆ ಹೆಚ್ಚಿಸಲು ಮತ್ತು ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಆಯುರ್ವೇದ ಮತ್ತು ಇತರೆ ಭಾರತೀಯ ವೈದ್ಯ ಪದ್ಧತಿಗಳು ನ್ಯೂನತೆ ಸರಿಪಡಿಸಲು ಸಹಕಾರಿ ಎಂದು ಅವರು ಹೇಳಿದರು.
ಆಟಿಸಮ್ ಮತ್ತು ಬೌದ್ಧಿಕ ಅಂಗವಿಕಲತೆ ಚಿಕಿತ್ಸೆಯಲ್ಲಿನ ಇತ್ತೀಚಿನ ಪ್ರವೃತ್ತಿಗಳ ಕುರಿತು ಮೈಸೂರು ವೈದ್ಯಕೀಯ ಕಾಲೇಜು ಮನೋರೋಗ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎನ್. ರವೀಶ್, ಮಿದುಳಿನ ಹಾನಿಯ ನಿರ್ವಹಣೆಯಲ್ಲಿ ಗಿಡಮೂಲಿಕೆಗಳ ಉತ್ಪನ್ನಗಳ ಪಾತ್ರ ಕುರಿತು ತುಮಕೂರಿನ ಸಿದ್ಧಗಂಗಾ ಫಾರ್ಮಸಿ ಕಾಲೇಜು ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ, ಸ್ವರ್ಣಪ್ರಾಶದ ಮಹತ್ವ ಕುರಿತು ಧಾರವಾಡದ ಎಂಐಎಎಂಎಸ್‌ನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ್ ಎಂ. ಕಟ್ಟಿ, ವೃದ್ಧಾಪ್ಯದಲ್ಲಿ ಅರಿವಿನ ಅಸ್ವಸ್ಥತೆಗಳು ಕುರಿತು ಡಾ. ಮುರಳಿ ಕಿಶನ್ ವಿಚಾರ ಮಂಡಿಸಿದರು.
ದಯಾನಂದ ಸಾಗರ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ. ಮುರುಗನ್ ಇದ್ದರು. ದೇಶದ ವಿವಿಧೆಡೆಯಿಂದ 200 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.