ಮೈಸೂರು

ಮತದಾರರಿಗೆ ನೀಡಿದ್ದ ವಾಗ್ದಾನ ಈಡೇರಿಸಲು ಬದ್ಧ

Published On :

ಕ.ಪ್ರ.ವಾರ್ತೆ , ರಾವಂದೂರು , ಜು. 7
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ನೀಡಿರುವ ವಾಗ್ದಾನ ನೆರವೇರಿಸಿಲು ಬದ್ಧವಾಗಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ಮಾನಸ ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ 37 ಸಾವಿರ ಸಹಕಾರ ಸಂಘಗಳಿದ್ದು, 2.18 ಕೋಟಿ ಷೇರುದಾರರನ್ನು ಹೊಂದಿದೆ. ಪ್ರತಿವರ್ಷ 6 ಸಾವಿರ ಕೋಟಿ ಹಣವನ್ನು ರೈತರಿಗೆ ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 10 ಸಾವಿರ ಕೋಟಿ ಸಾಲ ನೀಡಲು ಯೋಜನೆ ರೂಪಿಸಿದ್ದು, ರೈತರಿಗೆ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲಾ ಪಡೆಯುವುದರಿಂದ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ ಎಂದರು.
ರೈತರು ವಾಣಿಜ್ಯ ಬ್ಯಾಂಕುಗಳಿಗೆ ಮಾರುಹೋಗುತ್ತಿದ್ದು ಕಡಿಮೆ ಬಡ್ಡಿ ದರದಲ್ಲಿ ಸಹಕಾರ ಸಂಘದಲ್ಲಿ ಸಾಲ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಯಾವುದೆ ಅಭಿನಂದನೆ ಮಾಡಿಸಿಕೊಂಡವನಿಗೆ ಜವಾಬ್ದಾರಿಯು ಹೆಚ್ಚಿಸುತ್ತದೆ. ತಮ್ಮನ್ನು ಆಯ್ಕೆ ಮಾಡಿ ಅಭಿನಂದಿಸುತ್ತಿರುವುದಕ್ಕೆ ಕೃತಜ್ಞರಾಗಿರುವುದಾಗಿ ತಿಳಿಸಿದರು.
ಅಭಿನಂದನೆ ಸ್ವೀಕರಿಸಿದ ಶಾಸಕ ಕೆ. ವೆಂಕಟೇಶ್ ಮಾತನಾಡಿ, ತಮ್ಮ ರಾಜಕೀಯ ಜೀವನದಲ್ಲಿ ಎಂದು ಯಾರಿಗೂ ನೋವು ಉಂಟು ಮಾಡಿಲ್ಲ. ಕ್ಷೇತ್ರದ ಜನತೆ ಎಂತಹ ಸಂದರ್ಭದಲ್ಲೂ ಒಳ್ಳೆಯ ತೀರ್ಮಾನ ಕೊಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ವಿರೋಧ ಪಕ್ಷದಲ್ಲಿದ್ದು ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಜನರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು. ರಾವಂದೂರಿನ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಕಡಿಮೆಯಾಗುತ್ತಿದ್ದು, ಮಾನವೀಯತೆ, ವಿಶ್ವಾಸ ಮತ್ತು ಪ್ರೀತಿ ಪದಗಳು ಅರ್ಥ ಕಳೆದುಕೊಳ್ಳುತ್ತಿವೆ. ರಾವಂದೂರಿನ ಮಾನಸ ಸಾಂಸ್ಕೃತಿಕ ಸಂಘ ಇದಕ್ಕೆ ವ್ಯತಿರಿಕ್ತವಾಗಿ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು. ಇತ್ತಿಚೆಗೆ ಸುಂಡವಾಳು ಗ್ರಾಮದ ಪರಮೇಶ್, ರವಿ ಎಂಬ ಮೃತ ರೈತ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆಯಡಿ ತಲಾ 50 ಸಾವಿರ ಚೆಕ್ ನೀಡಲಾಯಿತು.
ಮಾಜಿ ಶಾಸಕ ಎಚ್.ಸಿ. ಬಸವರಾಜು, ಜಿಪಂ ಸದಸ್ಯೆ ಮಂಜುಳರಾಜ್, ಮಾನಸ ಸಾಂಸ್ಕೃತಿಕ ಸೇವಾ ಸಂಸ್ಥೆ ಅಧ್ಯಕ್ಷ ಆರ್.ಎಸ್. ಚಿಕ್ಕವೀರಪ್ಪ, ಎಪಿಎಂಸಿ ಅಧ್ಯಕ್ಷ ಹೊಲದಪ್ಪ, ಗ್ರಾಪಂ ಅಧ್ಯಕ್ಷ ಸ್ವಾಮಿಗೌಡ, ತಾಪಂ ಸದಸ್ಯರಾದ ಬಿ.ವಿ. ಅನಿತಾ, ಆರ್.ಸಿ. ಚಂದ್ರು, ವಾಣಿಜ್ಯೋದ್ಯಮಿಗಳಾದ ಆರ್.ವಿ. ಶಿವಮೂರ್ತಿ, ಆರ್.ವಿ. ವಿಶ್ವನಾಥ್, ಆರ್.ಎಂ. ದಯಾನಂದ್, ಆರ್.ಎಸ್. ಕುಮಾರವಿಜಯ್, ಆರ್.ಎಸ್. ವಿಜಯ್‌ಕುಮಾರ್, ಆರ್.ಡಿ. ಸತೀಶ್, ಆರ್.ಎಲ್. ಮಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.