ಕೆಲವು ಶಿಕ್ಷಣ ಸಂಸ್ಥೆಗಳಿಂದ ಸುಲಿಗೆ: ಮಹದೇವಪ್ರಸಾದ್
ಕ.ಪ್ರ.ವಾರ್ತೆ , ಮೈಸೂರು , ಜು.7
ಮೈಸೂರು ವೀರಶೈವ ಸಜ್ಜನ ಸಂಘವು ವಿಶ್ವೇಶ್ವರನಗರ ಇಂಡಸ್ಟ್ರಿಯಲ್ ಸಬರ್ಬ್ನಲ್ಲಿ ನಿರ್ಮಿಸಿರುವ ನವೀಕೃತ ಸಜ್ಜನ ಶಾಲೆಯನ್ನು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಭಾನುವಾರ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿ, ಸುಮಾರು 30 ವರ್ಷಗಳಷ್ಟು ಇತಿಹಾಸವಿರುವ ವೀರಶೈವ ಸಜ್ಜನ ಸಂಘವು ಉತ್ತಮ ಕಾರ್ಯ ಮಾಡುತ್ತಾ ಬಂದಿದೆ. ಅದರಲ್ಲೂ ನಿರ್ಗತಿಕ, ನಿರಾಶ್ರಿತರ ಮಕ್ಕಳಿಗೆ ಶಿಕ್ಷಣ ನೀಡಲು ಸ್ಥಾಪಿಸಿರುವ ಈ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಿರುವುದು ಸಂತೋಷದ ವಿಚಾರ. ಯಾವುದೇ ಸಂಘ ಸಂಸ್ಥೆಗಳು ವಾರ್ಷಿಕ ಸಭೆ, ಕೂಟಕ್ಕೆ ಸೀಮಿತವಾಗಬಾರದು. ಪ್ರತಿ ಬಾರಿ ತಮ್ಮ ಇರುವಿಕೆಯನ್ನು ತೋರಿಸುವುದಕ್ಕೆ ಸಭೆ ನಡೆಸುವುದರಲ್ಲೇ ಕಾಲ ಕಳೆಯದೆ ಸಮಾಜಮುಖಿ ಚಿಂತನೆ ಕಾರ್ಯರೂಪಕ್ಕೆ ತರಲು ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ದುಬಾರಿಯಾಗುತ್ತಿದ್ದು ಮಕ್ಕಳಿಗೆ ಶಿಕ್ಷಣ ನೀಡುವ ನೆಪದಲ್ಲಿ ಕೆಲವು ಸಂಸ್ಥೆಗಳು ಪೋಷಕರನ್ನು ಸುಲಿಗೆ ಮಾಡುತ್ತಿವೆ. ಎಷ್ಟು ದುಡಿದರೂ ವಿದ್ಯಾಭ್ಯಾಸ ಕೊಡಿಸುವುದಕ್ಕೆ ವ್ಯಯ ಮಾಡುವಂತಾಗಿದೆ ಎಂದು ಅವರು ವಿಷಾದಿಸಿದರು.
ಕೈಲಾದವರಿಗೆ ಸವಲತ್ತು ಒದಗಿಸಿಕೊಡುತ್ತಿರುವ ವೀರಶೈವ ಸಜ್ಜನ ಸಂಘ ಕ್ರಾಂತಿಕಾರಿ ಬಸವಣ್ಣನವರ ತತ್ವಾದರ್ಶ ಪಾಲಿಸುತ್ತಿದೆ. ಸಮಾಜದ ಎಲ್ಲರಿಗೂ ಸಮಾನ ಶಿಕ್ಷಣ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಈ ಶಾಲೆಯು ಹಳೆಯದಾಗಿತ್ತು. ಇದೀಗ ನವೀಕರಣ ಮಾಡಿ ಸಮರ್ಪಕ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಮುತುವರ್ಜಿ ವಹಿಸಿ ಶಿಕ್ಷಕರೊಂದಿಗೆ ಸಮನ್ವಯತೆ ಕಾಯ್ದುಕೊಂಡು ಶಿಕ್ಷಣ ಸಂಸ್ಥೆ ಬೆಳೆಸಬೇಕು.
ತಮ್ಮ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಸಂಘ ಸ್ಥಾಪನೆಯ ಉದ್ದೇಶ ಈಡೇರಿದಂತಾಗುತ್ತದೆ ಎಂದು ಸಚಿವರು ಸಲಹೆ ನೀಡಿದರು.
ಇದೇ ವೇಳೆ ಮೈಸೂರು ವಿವಿಯಿಂದ ಪಿಎಚ್ಡಿ ಪಡೆದ ಡಾ. ಗೀತಾ ಮಹದೇವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಸಜ್ಜನ ಶಾಲೆಯ ಅಧ್ಯಕ್ಷ ಎಂ.ಸಿ. ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವೀರಶೈವ ಸಜ್ಜನ ಸಂಘದ ಅಧ್ಯಕ್ಷ ಎಂ.ಎನ್. ಬಸವರಾಜ್, ಉಪಾಧ್ಯಕ್ಷ ಎಂ. ಮಹದೇವ್, ಎಂ.ಬಿ. ನಾಗಕುಮಾರ್, ಗೌರವ ಕಾರ್ಯದರ್ಶಿ ಸಾಗರ್ಕುಮಾರ್, ಜಿ. ರಿಷಬ್ದೇವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

