ಮೈಸೂರು

ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ

Published On :

ಹುಣಸೂರು: ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವವು ಇಲ್ಲಿನ ಲಕ್ಷ್ಮಣತೀರ್ಥ ನದಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಪಿರಿಯಾಪಟ್ಟಣದ ತಾಲೂಕಿನ ಬೆಕ್ಯಾ ಗ್ರಾಮದ ರೈತ ಬೊಮ್ಮರಾಯಿಗೌಡ (50) ಎಂದು ಗುರುತಿಸಲಾಗಿದೆ, ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿ ಗೇಟ್ ಬಳಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ ಮೃತ ಬೊಮ್ಮರಾಯಿಗೌಡ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿ, ನದಿಗೆ ಎಸೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಶನಿವಾರ ಸಂಜೆ ಎದುರು ಮನೆಯ ಲಕ್ಷ್ಮೇಗೌಡನ ಪುತ್ರ ಮಂಜುವಿನ ಬೈಕ್ ಪಡೆದು ಗೇಟ್‌ವೆರೆಗೆ ಹೋಗಿ ಬರುವುದಾಗಿ ಹೊರ ಹೋದ ಬೊಮ್ಮರಾಯಿಗೌಡ ಭಾನುವಾರ ಸಂಜೆಯತನಕ ಬರಲಿಲ್ಲ. ಈ ನಡುವೆ ಲಕ್ಷ್ಮಣತೀರ್ಥ ನದಿಯಲ್ಲಿ ಶವ ತೇಲುತ್ತಿದೆ ಎಂಬ ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಎಸ್‌ಐ ಅರುಣ್ ಶವವನ್ನು ಮೇಲಕ್ಕೆತ್ತಿ, ಆತನ ಜೇಬಿನಲ್ಲಿದ್ದ ಮೊಬೈಲ್ ಸಿಮ್‌ನಿಂದ ವಿಳಾಸವನ್ನು ಪತ್ತೆ ಹಚ್ಚಿ ವಾರಸುದಾರರಿಗೆ ವಿಷಯ ತಿಳಿಸಿದರು.
ಆತನ ಸಂಬಂಧಿಕರು ಮತ್ತು ಪುತ್ರ ಅನು ಶವವನ್ನು ಗುರುತಿಸಿದರು. ಸ್ಥಳದಲ್ಲೆ ಶವ ಪರೀಕ್ಷೆ ನಡೆಸಲಾಯಿತು. ಕೊಲೆಗೆ ಕಾರಣವೆನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು. ಈತ ಬಳಸಿದ್ದ ಬೈಕ್ ಸಹ ನಾಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ  ಮುದ್ದುಮಹದೇವಯ್ಯ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.