ಜನಸೇವೆಯಲ್ಲಿ ಜಾತಿ ತಾರತಮ್ಯ ಸಲ್ಲ
ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 13
ಒಕ್ಕಲಿಗ ಸಮಾಜದ ಚುನಾಯಿತ ಜನಪ್ರತಿನಿಧಿಗಳು ಅಭಿವೃದ್ಧಿ ಮತ್ತು ಜನಸೇವೆ ಮಾಡಲು ಜಾತಿ ತಾರತಮ್ಯ ಮಾಡಬಾರದು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಹೇಳಿದರು.
ಇಲ್ಲಿನ ಒಕ್ಕಲಿಗರ ಸಂಘದ ಕಟ್ಟಡದಲ್ಲಿ ಶನಿವಾರ ನಡೆದ ಸಮಾಜದ ಶಾಸಕರಿಗೆ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಮ್ಮ 11 ತಿಂಗಳ ಅಧಿಕಾರಾವಧಿಯಲ್ಲಿ ಯಾವುದೆ ಭ್ರಷ್ಟಾಚಾರವಿಲ್ಲದೆ ಸ್ವಚ್ಛ ಆಡಳಿತ ನೀಡಿದ ಕೀರ್ತಿ ಒಕ್ಕಲಿಗ ಸಮಾಜದ ಎಚ್.ಡಿ. ದೇವೇಗೌಡ ಮತ್ತು ಡಿ.ವಿ. ಸದಾನಂದಗೌಡ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿರುವ ಸಾ.ರಾ. ಮಹೇಶ್ ಅವರಂತ ಯುವ ನಾಯಕರಿಗೆ ಒಕ್ಕಲಿಗ ಸಮಾಜ ಸದಾ ಬೆನ್ನೆಲುಬಾಗಿ ನಿಂತಿರಬೇಕು. ಇಂತಹ ನಾಯಕರ ಅಗತ್ಯತೆ ಸಮಾಜಕ್ಕೆ ಇದ್ದು, ಎಲ್ಲರ ಪ್ರೀತಿ- ವಿಶ್ವಾಸ ಗಳಿಸಿರುವ ಶಾಸಕರು ನಿಜವಾದ ಜನನಾಯಕ ಎಂದು ಪ್ರಶಂಸಿಸಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಒಕ್ಕಲಿಗ ಸಮಾಜದ ಘನತೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಕೀರ್ತಿ ಡಾ. ಬಾಲಗಂಗಾಧರನಾಥ ಶ್ರೀಗಳು ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಸಲ್ಲುತ್ತದೆ.
ಸ್ವಾಮೀಗಳು ಜನರಿಗೆ ಶಿಕ್ಷಣ, ಸಂಸ್ಕೃತಿ, ಸಾಹಿತ್ಯ, ಕಲೆ ಬದುಕು ನೀಡಿದರೆ ಮಾಜಿ ಪ್ರಧಾನಿ ಸಮಾಜದ ಅತಿ ಹಿಂದುಳಿದ ವ್ಯಕ್ತಿಗಳಿಗೂ ಅಧಿಕಾರ ಮತ್ತು ಗೌರವ ನೀಡಿದರು ಎಂದು ತಿಳಿಸಿದರು.
ಶಾಸಕ ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತಲ್ಲದೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಮಾಜಿ ಸಚಿವ ಎಸ್. ನಂಜಪ್ಪ ಮಾತನಾಡಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ವೆಂಕಟೇಶ್, ರಮೇಶ್, ತಾಪಂ ಅಧ್ಯಕ್ಷೆ ಕವಿತಾ ರವಿ, ಸಂಘದ ಅಧ್ಯಕ್ಷ ಅಣ್ಣೇಗೌಡ, ಮಾಜಿ ಅಧ್ಯಕ್ಷರಾದ ಎಸ್.ಪಿ. ತಮ್ಮಯ್ಯ, ನಿರ್ದೇಶಕರಾದ ಎಸ್.ಪಿ. ಆನಂದ್, ಕಾಂತರಾಜ್, ಜವರೇಗೌಡ, ಪರಶುರಾಮ್, ನಾಗೇಂದ್ರಪ್ಪ, ಕಗ್ಗುಂಡಿಕುಮಾರ್, ಕಾರ್ಯದರ್ಶಿ ಅಣ್ಣಾಜಿಗೌಡ, ಖಜಾಂಚಿ ಎಚ್.ಪಿ. ಶಿವಣ್ಣ, ಉಪನ್ಯಾಸಕ ರಾಮೇಗೌಡ, ಸಾಲಿಗ್ರಾಮ ಗ್ರಾಪಂ ಮಾಜಿ ಅಧ್ಯಕ್ಷ ನಟರಾಜು, ಚುಂಚನಕಟ್ಟೆ ಸಿ.ಜಿ. ಮಧು ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

