ಮೈಸೂರು

ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ: ವಾಸು

Published On :

ಕ.ಪ್ರ.ವಾರ್ತೆ  ಮೈಸೂರು  ಜೂ. 2
ಸರ್ಕಾರಿ ಶಾಲೆ ಎಂದರೆ ಸಾಕಷ್ಟು ಮಂದಿ ಪೋಷಕರು ಮೂಗು ಮುರಿಯುತ್ತಾರೆ. ಇದು ತಪ್ಪು ಕಲ್ಪನೆ. ಸರ್ಕಾರಿ ಶಾಲೆಗೆ ಮೆರಿಟ್ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸುವುದರಿಂದ ಅಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತದೆ ಎಂಬುದು ಪೋಷಕರಿಗೆ ಗೊತ್ತೆ ಇರುವುದಿಲ್ಲ ಎಂದು ಶಾಸಕ ವಾಸು ಹೇಳಿದರು.
ರೋಟರಿ ಪಶ್ಚಿಮ ಸಂಸ್ಥೆಯು ಕನಕದಾಸನಗರದಲ್ಲಿ ನಿರ್ಮಿಸಿರುವ ರೋಟರಿ ಪಶ್ಚಿಮ ಸುಶೀಲಾ ಸತೀಶ್ಚಂದ್ರ ಪದವಿಪೂರ್ವ ಕಾಲೇಜನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೇನೂ ಕೊರತೆ ಇಲ್ಲ. ಆದರೆ, ಮೂಲಭೂತ ಸೌಕರ್ಯಗಳ ಕೊರತೆ ಇದೆ. ಸರ್ಕಾರಿ ಶಾಲೆಯಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಒಳ್ಳೆಯವರ ಸಂಖ್ಯೆ ಕಡಿಮೆಯಾಗುತ್ತಿದ್ದು, ದುಷ್ಟ ಜನರ ಚಾಳಿಯಿಂದ ಒಳ್ಳೆಯ ಕೆಲಸಗಳು ಮರೆಯಾಗುತ್ತಿವೆ.
ಈ ಬಗ್ಗೆ ಗಮನ ಹರಿಸಿರುವ ಉನ್ನತ ಶಿಕ್ಷಣ ಸಚಿವರಾದ ಆರ್.ವಿ. ದೇಶಪಾಂಡೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಉತ್ಸಾಹ ತೋರಿದ್ದಾರೆ. ಇದಕ್ಕೆ ಪೋಷಕರು ಪ್ರೋತ್ಸಾಹ ನೀಡಿದರೆ ಸುಧಾರಣೆ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಹೊಸದಾಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಬೇಕಾದರೆ ಖಂಡಿತಾ ಸಿಎ ನಿವೇಶನಗಳನ್ನು ಖರೀದಿಸಬೇಡಿ. ನೀವು ನಿವೇಶನ ತೆಗೆದುಕೊಂಡು 30 ವರ್ಷದ ಒಪ್ಪಂದ ಮಾಡಿಕೊಂಡರೆ, ಮುಂದೆ ಬರುವ ಅಧಿಕಾರಿಗಳು ವಿನಾಕಾರಣ ಕಿರಿಕಿರಿ ಉಂಟು ಮಾಡುತ್ತಾರೆ. ಬಾಡಿಗೆಯನ್ನು ಹೆಚ್ಚಾಗಿ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಿ ಆದಷ್ಟು ಸ್ವಂತ ಜಾಗದಲ್ಲಿ ಸಂಸ್ಥೆಗಳನ್ನು ಕಟ್ಟಿ ಸೇವೆ ಮಾಡುವುದು ಒಳಿತು ಎಂದರು.
ಅಭಿನಂದನೆ: ಇದೇ ವೇಳೆ ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರನ್ನು ಅಭಿನಂದಿಸಲಾಯಿತು. ಶಿಕ್ಷಣ ಸಂಸ್ಥೆಯ ಮಾಲೀಕರಾದ ಸುಶೀಲ ಸತೀಶ್ಚಂದ್ರ, ಸತೀಶ್ ಪಿ. ಚಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬಿ.ಎಂ. ಚಂಗಪ್ಪ, ರೋಟರಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಸುನೀಲ್ ಎಲ್. ಬಾಳಿಗ, ಮೈಸೂರು ಪಶ್ಚಿಮ ರೋಟರಿ ಸಂಘದ ಅಧ್ಯಕ್ಷ ವಿ.ಎನ್. ಪ್ರಸಾದ್, ಕಾರ್ಯದರ್ಶಿ ಡಾ.ಎಂ.ಕೆ. ಸಚ್ಚಿದಾನಂದ, ಖಜಾಂಚಿ ಬಿ.ಜಿ. ನಾಗರಾಜು, ಕಾಲೇಜು ಪ್ರಾಂಶುಪಾಲ ಕೆ.ಎಲ್. ರಾಮಚಂದ್ರಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.