'ಜಾಗತಿಕ ತಾಪಮಾನಕ್ಕೆ ಎಲ್ಲರೂ ಹೊಣೆ'
ಕ.ಪ್ರ.ವಾರ್ತೆ ಮೈಸೂರು ಜೂ. 6
ಜಾಗತಿಕ ತಾಪಮಾನಕ್ಕೆ ನಾವೆಲ್ಲರೂ ಹೊಣೆ ಎಂದು ಮೈಸೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಎಂ. ರುದ್ರಯ್ಯ ಹೇಳಿದರು.
ಜಿಐಎಂಡಿಎಸ್ ಪದವಿಪೂರ್ವ ಮತ್ತು ಪದವಿ ಕಾಲೇಜು ವತಿಯಿಂದ ಹೂಟಗಳ್ಳಿಯ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ನೆಲ, ಜಲ, ಗಾಳಿ ಇವುಗಳೇ ನಮಗೆ ನಿಜವಾದ ಜೀವನಾಡಿಗಳು. ಮಕ್ಕಳು ಉತ್ತಮವಾದ ಪರಿಸರದಲ್ಲಿ ಬೆಳೆದರೆ ಉತ್ತಮ ಪ್ರಜೆಗಳಾಗುತ್ತಾರೆ. ನಾವುಗಳು ಪರಿಸರ ಕುರಿತು ಅರಿವು ಮೂಡಿಸಬೇಕು.
ಇಂದಿನ ತಾಪಮಾನಕ್ಕೆ ನಾವೇ ಕಾರಣರಾಗಿದ್ದು, ಭೂಮಿ ನನ್ನ ತಾಯಿ ಎಂದರೇ ಸಾಲದು ಅದರ ಸಂರಕ್ಷಣೆ ನಮಗಿರಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಶಾರದಾ ವಿಲಾಸ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ರಾಜೇಂದ್ರ ಪ್ರಸಾದ್, ವಿಶ್ವ ಪರಿಸರ ದಿನಚರಣೆಯ ಮೂರು ಮುಖ್ಯ ಷೋಷಣೆಗಳಾದ ಯೋಚಿಸು- ಸೇವಿಸು- ಉಳಿಸು ಎಂಬ ವಾಕ್ಯದ ಮಹತ್ವ ವಿವರಿಸಿದರು.
ರೋಟರಿ ಸಂಸ್ಥೆಯ ಅಮೀರಾ ವಾಘ, ರಾಜೀವ್, ಸಂಸ್ಥೆ ಕಾರ್ಯದರ್ಶಿ ಕೋದಂಡರಾಜು ಹಾಗೂ ಪ್ರಾಂಶುಪಾಲ ಎ.ಎಸ್. ಮಹೇಶ್ ಇದ್ದರು.
ಅರಣ್ಯ ಇಲಾಖೆಯಿಂದ ಪರಿಸರ ದಿನ
ಅರಣ್ಯ ಇಲಾಖೆಯ ಮೈಸೂರು ವಿಭಾಗದ ವತಿಯಿಂದ ಇಲ್ಲಿನ ಅರಣ್ಯ ಭವನದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಿಲೀಪ್ಕುಮಾರ್ದಾಸ್ ಆವರಣದಲ್ಲಿ ಸಸಿ ನಡುವ ಮೂಲಕ ಕಾರ್ಯಕ್ರಮ ಚಾಲನೆಗೊಳಿಸಿ ಮಾತನಾಡಿ, ಪರಿಸರ ಉಳಿವಿಗೆ ಪ್ರತಿಯೊಬ್ಬ ಪ್ರಜೆಯು ಪಣತೊಡಬೇಕು ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ದೇವರಾಜು, ವಲಯ ಅರಣ್ಯಾಧಿಕಾರಿ ಸೋಮಪ್ಪ, ವಿಭಾಗದ ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಚಂದ್ರೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

