ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಟೆಂಡರ್ ಕರೆಯಲು ಆಗ್ರಹ
ಮೈಸೂರು: ಕುಕ್ಕರಹಳ್ಳಿ ಅಭಿವೃದ್ಧಿಯ ಪುನರುಜ್ಜೀವನಕ್ಕೆ ಕೂಡಲೇ ಟೆಂಡರ್ ಕರೆಯುವಂತೆ ಕುಕ್ಕರಹಳ್ಳಿ ಕೆರೆ ಸಂರಕ್ಷಣಾ ಸಮಿತಿ ಸಂಚಾಲಕ ಕೆ.ಎಂ. ಜಯರಾಮಯ್ಯ ಒತ್ತಾಯಿಸಿದ್ದಾರೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ನ (ಎಡಿಬಿ) ನೆರವಿನ ಹಣದಲ್ಲಿ ಪಡುವಾರಹಳ್ಳಿ ಕಡೆಯಿಂದ ಕುಕ್ಕರಹಳ್ಳಿ ಕೆರೆಗೆ ಹರಿಯುತ್ತಿದ್ದ ಸುಮಾರು ಭಾಗದ ಒಳಚರಂಡಿ ನೀರನ್ನು 2002ರಲ್ಲಿ ಶುದ್ದೀಕರಣ ಕೇಂದ್ರಕ್ಕೆ ತಿರುಗಿಸಲಾಯಿತು. ಈಗ ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಸಹ ಬೇರೆ ಕಡೆಗೆ ತಿರುಗಿಸಲು ಮೂರು ಬಾರಿ ಪಾಲಿಕೆಯು 2 ಕೋಟಿಯ ಟೆಂಡರ್ ಕರೆದಿದ್ದು, ಕ್ರಮ ಪಾಲಿಸದ ಕಾರಣ ಸರ್ಕಾರ ಇದನ್ನು ವಾಪಸ್ ಮಾಡಿದ್ದು, ಈ ಸಂಬಂಧ ಬೇಗ ಕರೆಯುವಂತೆ ಕೋರಿದ್ದಾರೆ.
ವ್ಯಕ್ತಿ ಸಾವು
ಮೈಸೂರು: ಲಷ್ಕರ್ ಮೊಹಲ್ಲಾ 2ನೇ ಕ್ರಾಸ್ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಸಂಪಿಗೆ ಬಿದ್ದು ಅಪರಿಚಿತ ವ್ಯಕ್ತಿಮೃತಪಟ್ಟಿದ್ದಾರೆ. ಚಹರೆ- 35 ವರ್ಷ, ಕ್ರೀಂ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418307 ಸಂಪರ್ಕಿಸಲು ಲಷ್ಕರ್ ಠಾಣೆ ಎಸ್ಐ ಓಂಕಾರಪ್ಪ ಕೋರಿದ್ದಾರೆ.
ಮಹಿಳೆ ನಾಪತ್ತೆ
ಮೈಸೂರು: ಮಗ ಮೃತಪಟ್ಟಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಹದೇವಮ್ಮ (60) ಎಂಬವರು ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು. ಮಾಹಿತಿ ಸಿಕ್ಕಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ತಾಯಿ, ಮಗಳು ನಾಪತ್ತೆ
ಮೈಸೂರು: ಉದಯಗಿರಿ ಠಾಣೆ ವ್ಯಾಪ್ತಿಯ ನಿವಾಸಿ ಕೃಷ್ಣ ಎಂಬವರ ಪತ್ನಿ ಮಂಜುಳಾ (26), ಪುತ್ರಿ ಪಲ್ಲವಿ (4) ನಾಪತ್ತೆಯಾಗಿದ್ದಾರೆ. ಮನೆಯಿಂದ ಹಾಲು ತರಲು ಹೋಗಿದ್ದರು. ಮಂಜುಳಾ ಚಹರೆ- 5.6 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು. ಪಲ್ಲವಿ ಚಹರೆ- 2 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು. ಇಬ್ಬರು ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 241309 ಸಂಪರ್ಕಿಸಲು ಉದಯಗಿರಿ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

