ಮೈಸೂರು

ರಂಗಾಯಣದಲ್ಲಿ ಹವ್ಯಾಸಿ ನಾಟಕೋತ್ಸವ ಆರಂಭ

Published On :

ಮೈಸೂರು: ರಂಗಭೂಮಿಯನ್ನು ಪುನರುತ್ಥಾನಗೊಳಿಸಿದ ಕೀರ್ತಿ ಹವ್ಯಾಸಿ ಕಲಾವಿದರಿಗೆ ಸಲ್ಲುತ್ತದೆ ಎಂದು ಜಾನಪದ ತಜ್ಞ ಡಾ.ಪಿ.ಕೆ. ರಾಜಶೇಖರ ಅಭಿಪ್ರಾಯಪಟ್ಟರು. ರಂಗಾಯಣವು ಭಾನುವಾರ ಭೂಮಿಗೀತದಲ್ಲಿ ಆಯೋಜಿಸಿದ್ದ ಹವ್ಯಾಸಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಾಟಕ ಕುರುಹು ಪಂಪ ಭಾರತದಲ್ಲಿ ಕಾಣುತ್ತದೆ. ಅಲ್ಲಿಯ ಸಂಭಾಷಣೆ ಓದಿದವರಿಗೆಲ್ಲ ಆಹ್ಲಾದಕರ ಉಂಟು ಮಾಡುತ್ತಿತ್ತು. ನಂತರ ಹಳಗನ್ನಡ ಕಾಲದಲ್ಲಿ ಅದು ಮುಂದುವರಿಯಿತು. 20ನೇ ಶತಮಾನದ ಆದಿ ಭಾಗದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ನಾಟಕಗಳು ಜನರಿಗೆ ಮುದ ನೀಡುತ್ತಿದ್ದವು ಎಂದರು. ಗುಬ್ಬಿ ಕಂಪನಿಯಿಂದ ಹಲವಾರು ನಾಟಕಗಳು ಹೊರ ಬಂದವು. ಆದರೆ, ಕಾಲಕ್ರಮೇಣ ಕಂಪನಿ ನಾಟಕಗಳು ಪ್ರಚಾರಕ್ಕಾಗಿ ಕೀಳುಮಟ್ಟದ ಸಂಭಾಷಣೆ ನಡೆಸುತ್ತಿದ್ದದ್ದು, ಜನರಿಗೆ ಬೇಸರ ತರಿಸಿತ್ತು. ಈ ಸಂದರ್ಭದಲ್ಲಿ ರಂಗಭೂಮಿ ಅಧಃಪತನ ತಲುಪುತ್ತಿದೆಯೋ ಎಂದುಕೊಳ್ಳುತ್ತಿದ್ದಾಗ ಹವ್ಯಾಸಿ ಕಲಾತಂಡಗಳು ಹುಟ್ಟಿಕೊಂಡವು. ಈ ತಂಡಗಳ ಸದಭಿರುಚಿಯ ನಾಟಕಗಳನ್ನು ಅಭಿನಯಿಸುವ ಮೂಲಕ ರಂಗಭೂಮಿಯ ಪುನರುತ್ಥಾನಕ್ಕೆ ನಾಂದಿ ಹಾಡಿದವು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಸಂಚಾಲಕ ಕೆ. ಅಂಜುಸಿಂಗ್ ಇದ್ದರು. ನಂತರ ರಾಜಪ್ಪ ದಳವಾಯಿ ರಚಿತ, ಪ್ರಶಾಂತ್ ಮೈಸೂರು ನಿರ್ದೇಶನದ ಒಂದು ಬೊಗಸೆಯ ನೀರು ನಾಟಕವನ್ನು ಇಂಟಿಮೇಟ್ ಥಿಯೇಟರ್ ಕಲಾವಿದರು ಅಭಿನಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.