ಹಾರನ್ ಹಾಕಿ ನಿದ್ದೆಗೆಡಿಸಿದ್ದಕ್ಕೆ ಬಸ್ ತಡೆದರು ಎಸಿಪಿ ಸಾಹೇಬ್ರು!
ಮೈಸೂರು: ತಮ್ಮ ಮನೆ ಮುಂದೆ ಹಾರನ್ ಮಾಡಿದ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ನಗರ ಸಾರಿಗೆ ಬಸ್ ತಡೆದು, ಚಾಲಕ ಮತ್ತು ನಿರ್ವಾಹಕರನ್ನು ನಿಂದಿಸಿ, ಪ್ರಯಾಣಿಕರಿಗೆ ತೊಂದರೆ ನೀಡಿದ ಘಟನೆ ಶುಕ್ರವಾರ ನಡೆದಿದೆ.
ನಗರ ಬಸ್ ನಿಲ್ದಾಣದಿಂದ ಕಲ್ಯಾಣಗಿರಿ ಕಡೆ ತೆರಳುತ್ತಿದ್ದ ಮಾರ್ಗ ಸಂಖ್ಯೆ 161ರ ನಗರ ಸಾರಿಗೆ ಬಸ್ ಜಲಪುರಿಯಲ್ಲಿನ ಸಿಎಆರ್ ಎಸಿಪಿ ಮಲ್ಲಿಕಾರ್ಜುನಪ್ಪ ಅವರ ಮನೆ ಮುಂದೆ ಹೋಗುವಾಗ ಮತ್ತೊಂದು ವಾಹನದ ಚಾಲಕನನ್ನು ಜಾಗೃತಗೊಳಿಸಲು ಬಸ್ ಚಾಲಕ ಸೈಯದ್ ಇರ್ಫಾನ್ ಒಂದೆರಡು ಬಾರಿ ಹಾರನ್ ಮಾಡಿದರು.
ಈ ವೇಳೆ ಮನೆಯಲ್ಲಿ ಮಲಗಿದ್ದ ಮಲ್ಲಿಕಾರ್ಜುನಪ್ಪ ಅವರಿಗೆ ನಿದ್ರಾಭಂಗವಾದ್ದರಿಂದ ಸಿಟ್ಚಿಗೆದ್ದು ತಮ್ಮ ವಾಹನದಲ್ಲಿ ಬಸ್ ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಬಸ್ ಚಾಲಕ, ನಿರ್ವಾಹಕನನ್ನು ನಿಂದಿಸಿ, ಠಾಣೆಗೆ ಕರೆ ತಂದಿದ್ದಾರೆ.
ಆ ಬಸ್ನಲ್ಲಿದ್ದ ಪ್ರಯಾಣಿಕರು ಇಳಿದು, ಬೇರೆ ಬಸ್ಗಳಲ್ಲಿ ಅಥವಾ ನಡೆದು ಹೋಗುವ ಪರಿಸ್ಥಿತಿ ಉಂಟಾಯಿತು. ಎಸಿಪಿ ವಿರುದ್ಧ ಚಾಲಕ ಹಾಗೂ ನಿರ್ವಾಹಕ ದೂರು ನೀಡಿದ್ದಾರೆ. ಪ್ರತಿದಿನ ಇದೇ ರೀತಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂಬುದು ಎಸಿಪಿ ಆರೋಪವಾಗಿದೆ. ನಜರ್ಬಾದ್ ಠಾಣೆಯ ಪೊಲೀಸರು ದೂರು ಸ್ವೀಕರಿಸಿದ್ದು, ಎಸಿಪಿ ವಿರುದ್ಧದ ಆರೋಪದ ಬಗ್ಗೆ ಇಲಾಖಾ ವಿಚಾರಣಾ ನಡೆಸಿ, ವರದಿ ನೀಡುವಂತೆ ಪೊಲೀಸ್ ಆಯುಕ್ತ ಕೆ.ಎಸ್. ಸುಧೀರ್ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

