ಸುದ್ದಿ ಸಂಕ್ಷೇಪ
ಇಂದು ಪ್ರತಿಭಟನೆ
ಮೈಸೂರು: ರಾಜ್ಯ ಸರ್ಕಾರದ ಹೊಸ ಮದ್ಯದಂಗಡಿ ತೆರೆಯುವ ತೀರ್ಮಾನ ಖಂಡಿಸಿ ಎಐಡಿವೈಒ ಸಂಘಟನೆ ಪದಾಧಿಕಾರಿಗಳು ಜೂ. 20ರ ಬೆಳಗ್ಗೆ 11ಕ್ಕೆ ಗಾಂಧಿ ಚೌಕದಲ್ಲಿ ಪ್ರತಿಭಟಿಸುವರು. ರಾಜ್ಯ ಸರ್ಕಾರ 1 ಸಾವಿರ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ. ಆದ್ದರಿಂದ ಸರ್ಕಾರದ ಈ ತೀರ್ಮಾನ ವಿರೋಧಿಸಿ ಪ್ರತಿಭಟಿಸುವುದಾಗಿ ಎಐಡಿವೈಒನ ಟಿ.ಆರ್. ಸುನಿಲ್ ತಿಳಿಸಿದ್ದಾರೆ.
ಶಿಕ್ಷಕರಿಗೆ ತರಬೇತಿ
ಮೈಸೂರು: ವೈಜಯಂತಿ ಚಿತ್ರಕಲಾ ಮಹಾವಿದ್ಯಾಲಯವು ಚಿತ್ರಕಲಾ ಶಿಕ್ಷಕರ ತರಬೇತಿಗೆ ಪ್ರವೇಶಾತಿ ಆರಂಭಿಸಿದೆ. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ.ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿ ಉಚಿತ ಪ್ರವೇಶವಿದೆ ಮತ್ತು ವಿದ್ಯಾರ್ಥಿ ವೇತನದ ವ್ಯವಸ್ಥೆ ಇದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮತ್ತು ರೈಲು ಪಾಸ್ ಸೌಲಭ್ಯ ಇದೆ. ಮಾಹಿತಿಗೆ ಮೊ. 9945613828 ಸಂಪರ್ಕಿಸಿ.
ಹೇಮಾವತಿ ನೇಮಕ
ಮೈಸೂರು: ನಗರ ಕಾಂಗ್ರೆಸ್ ಸಮಿತಿಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಿರಿಯ ವಕೀಲೆ ಹಾಗೂ ನಗರಪಾಲಿಕೆ ಮಾಜಿ ಸದಸ್ಯೆ ಟಿ. ಹೇಮಾವತಿ ಅವರನ್ನು ನೇಮಿಸಲಾಗಿದೆ.
ಹೃದ್ರೋಗ ತಪಾಸಣೆ
ಮೈಸೂರು: ನಗರದ ಗುರು ರೆಸಿಡೆನ್ಸಿ ಹೊಟೇಲ್ನಲ್ಲಿ ಜೂ. 23ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಆಯುರ್ವೇದ ಹೃದಯ ತಜ್ಞ ಡಾ. ವಿ. ಅಶೋಕ್ಕುಮಾರ್ ಹೃದಯ ತಪಾಸಣೆ ಮತ್ತು ಸಲಹೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಮೊ. 9035212128 ಸಂಪರ್ಕಿಸಿ.
ಯೋಗ ಶಿಬಿರ
ಮೈಸೂರು: ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆಯು ಡಯಾಬಿಟಿಸ್ ಮತ್ತು ಓಬೆಸಿಟಿ ತೊಂದರೆಗೆ ವಿಶೇಷ ಯೋಗ ಶಿಬಿರವನ್ನು ಜುಲೈ 1 ರಿಂದ 30ರವರೆಗೆ ಏರ್ಪಡಿಸಿದೆ. ಯೋಗಾಸನ, ಪ್ರಾಣಾಯಾಮ, ಧ್ಯಾನ ಮತ್ತು ಕ್ರಿಯೆಗಳ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 9448600581 ಸಂಪರ್ಕಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ರೇಖಾ ತಿಳಿಸಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಖಂಡಿಸಿ ನಾಳೆ ಜಾಥಾ
ಮೈಸೂರು: ಇತ್ತೀಚೆಗಿನ ವೈದ್ಯರ ಮೇಲೆ ಹಲ್ಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದಿಂದ ಜೂ. 21ರ ಬೆಳಗ್ಗೆ 9ಕ್ಕೆ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಭವನದಿಂದ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ.ಸಿ. ಶರತ್ಕುಮಾರ್ ಹೇಳಿದರು. ಜಾಥಾದಲ್ಲಿ ವೈದ್ಯಕೀಯ ಸಂಘದ ಪದಾಧಿಕಾರಿಗಳು, ಕಿರಿಯ ವೈದ್ಯರ ಸಂಘದ ಪದಾಧಿಕಾರಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಶಸ್ತ್ರಚಿಕಿತ್ಸಾ ಸಂಘದ ಪದಾಧಿಕಾರಿಗಳು, ಪಿಜಿಷಿಯನ್ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪದಾಧಿಕಾರಿಗಳಾದ ಡಾ. ಜಗನ್ನಾಥ ಬಾಬು, ಡಾ. ಶಿವಶಂಕರ, ಡಾ. ಶಿವಸ್ವಾಮಿ, ಡಾ. ಪ್ರಸನ್ನಶೆಟ್ಟಿ, ಡಾ. ಹರೀಶ್, ಡಾ. ಸುರೇಶ್ಬಾಬು ಇದ್ದರು.
ಮಾನವ ಸಂಪನ್ಮೂಲ ಅಧಿವೇಶನ ನಾಳೆ
ಮೈಸೂರು: ಭಾರತೀಯ ಕೈಗಾರಿಕೆಗಳ ಒಕ್ಕೂಟದ ಮೈಸೂರು ಘಟಕವು ಜೂ. 21 ರಂದು ಹೊಟೇಲ್ ಪೈವಿಸ್ತಾದಲ್ಲಿ ಉದ್ಯಮದ ಯಶಸ್ಸಿಗಾಗಿ ಮಾನವ ಸಂಪನ್ಮೂಲ ಕುರಿತ ಅಧಿವೇಶನ ಏರ್ಪಡಿಸಿದೆ.
ಇತ್ತೀಚಿನ ಜಾಗತಿಕ ಆರ್ಥಿಕ ಹಿಂಜರಿತವು ಮಾನವ ಸಂಪನ್ಮೂಲದ ಸವಾಲಾಗಿದ್ದು, ಉದ್ಯೋಗ ಕಡಿತ, ಹಣಕಾಸು ಕಡಿತ, ಉದ್ಯೋಗ ಸಮಸ್ಯೆ, ತಿಕ್ಕಾಟ ಮತ್ತು ವಜಾಗಳು ಸೇರಿದಂತೆ ಇತ್ಯಾದಿ ಸಮಸ್ಯೆಗಳು ಉಲ್ಬಣಿಸುತ್ತಿವೆ. ಈ ನಡುವೆ ನೇಮಕಾತಿ, ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಮತ್ತೊಂದು ಸವಾಲಾಗಿದೆ. ಈ ಎಲ್ಲಾ ಅಂಶಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ.
ಮಾಂಸದಂಗಡಿ ತೆರೆವಿಗೆ ಒತ್ತಾಯ
ಮೈಸೂರು' ಹೆಬ್ಬಾಳು ಬಡಾವಣೆಯ ಮಂಚೇಗೌಡನ ಕೊಪ್ಪಲಿಗೆ ಹೋಗುವ ಮಾರ್ಗದಲ್ಲಿನ ಅಶುಚಿತ್ವದ ಮಾಂಸದ ಅಂಗಡಿಯನ್ನು ತೆರವುಗೊಳಿಸುವಂತೆ ನವಭಾರತ ನಿರ್ಮಾಣ ಸೇವಾ ಟ್ರಸ್ಟ್ ಒತ್ತಾಯಿಸಿದೆ. ಕಾನೂನು ಪ್ರಕಾರ ನಗರ ಪಾಲಿಕೆಯ ವಧಗಾರದಲ್ಲಿ ವಧೆ ಮಾಡಿದ ನಂತರ ಅದನ್ನು ತಂದು ವ್ಯಾಪಾರ ವಹಿವಾಟು ನಡೆಸಬೇಕು. ಆದರೆ ಇಲ್ಲಿನ ಚಾಮುಂಡೇಶ್ವರಿ ಮಟನ್ ಸ್ಟಾಲ್ ಎಂಬ ಹೆಸರಿನ ಈ ಅಂಗಡಿಯ ಮುಂದೆಯೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ವಿ. ಶ್ರೀಧರ ಆರೋಪಿಸಿದ್ದಾರೆ. ಇದರಿಂದಾಗಿ ಸಮೀಪದ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ದೂರಿದ್ದರೂ ಅಂಗಡಿ ಮಾಲೀಕರು ದೌರ್ಜನ್ಯ ನಡೆಸುತ್ತಿದ್ದಾರೆ. ಆದ್ದರಿಂದ ಪಾಲಿಕೆ ಆಯುಕ್ತರು ಮಧ್ಯ ಪ್ರವೇಶಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

