ಸೂಕ್ತ ಸೌಲಭ್ಯಗಳಿಲ್ಲದೇ ನರಳುತ್ತಿರುವ ಸಂಗೀತ ವಿವಿ: ಡಾ. ಹನುಮಣ್ಣ ವಿಷಾದ
ಕ.ಪ್ರ.ವಾರ್ತೆ ಮೈಸೂರು ಜೂ. 23
ಮೂಲ ಸೌಲಭ್ಯದ ಕೊರತೆ ಮತ್ತು ನಿರ್ದಿಷ್ಟ ನೆಲೆ ಇಲ್ಲದೆ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನರಳುತ್ತಿದೆ ಎಂದು ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ವಿಷಾದಿಸಿದ್ದಾರೆ.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಂಗೀತ ವಿವಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಚ್ಚಿದ ಸರ್ಕಾರಿ ಶಾಲೆಯಲ್ಲಿ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುವುದು ಕಷ್ಟದ ಕೆಲಸ. ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ತರಗತಿಗಳೇ ಇಲ್ಲ. ಹೀಗಾಗಿ ಗಾನಭಾರತಿಯಲ್ಲಿ ಸ್ಥಳಾವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ. ಇಷ್ಟೆಲ್ಲಾ ಸಮಸ್ಯೆ ಇರುವುದರಿಂದ ಸರ್ಕಾರ ಕೂಡಲೇ ವಿವಿಗೆ ಸಂಬಂಧಿಸಿದ ಭೂಮಿಯ ವಿವಾದವನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಆನ್ಲೈನ್ ಶಿಕ್ಷಣಕ್ಕೆ ಚಿಂತನೆ: ವಿಶ್ವವಿದ್ಯಾಲಯದಲ್ಲಿ ಆನ್ಲೈನ್ ಮೂಲಕ ಸಂಗೀತ ಶಿಕ್ಷಣ ನೀಡಲು ಚಿಂತಿಸಲಾಗಿದೆ. ಸಂಗೀತದಲ್ಲಿ ತಾರತಮ್ಯ ಮಾಡಬಾರದು. ಹಿಂದೂಸ್ತಾನಿ, ಕರ್ನಾಟಕ ಹಾಗೂ ಪಾಶ್ಚಿಮಾತ್ಯ ಸಂಗೀತ ಎಂಬ ಭಿನ್ನತೆ ಇರಬಾರದು. ಎಲ್ಲಾ ಸಂಗೀತವೂ ಮನಸ್ಸಿನ ಕ್ಲೇಷ ತೊಡೆಯುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್ ಮಾತನಾಡಿ, ಪೊಲೀಸ್ ವಾದ್ಯ ವೃಂದ ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದರೆ ಇತರ ಕಲಾ ತಂಡಗಳಿಗೆ ದೊರಕುವ ಮಾನ್ಯತೆ ಅದಕ್ಕೆ ದೊರಕುತ್ತಿಲ್ಲ. ಸಂಗೀತ ವಿವಿ ಪೊಲೀಸ್ ವಾದ್ಯ ತಂಡಕ್ಕೆ ಉತ್ತಮ ವೇದಿಕೆ ಕಲ್ಪಿಸಬೇಕು ಎಂದು ಹೇಳಿದರು.
ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪಂಡಿತ್ ಇಂಧೂದರ ನಿರೋಡಿ, ಕರ್ನಾಟಕ ಸಂಗೀತ ವಿದುಷಿ ಡಾ. ಗೌರಿ ಕುಪ್ಪಸ್ವಾಮಿ, ಭರತನಾಟ್ಯ ಕಲಾವಿದೆ ಉಮಾರಾವ್, ಪಾಶ್ಚಿಮಾತ್ಯ ಸಂಗೀತ ಕಲಾವಿದ ಫೆಲಿಕ್ಸ್ ಎಂ. ಜೋಸೆಫ್ ಅವರನ್ನು ಸನ್ಮಾನಿಸಲಾಯಿತು.
ಕುಲಸಚಿವ ಡಾ. ಎಂ. ಬಸವಣ್ಣ, ಉಪನ್ಯಾಸಕ ಆರ್.ಎಸ್. ನಂದಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

