ಮೈಸೂರು

ಶ್ರೇಯಲ್ ತೆಲಂಗ್ಗೆ ಜಯ

Published On :

ಕ.ಪ್ರ.ವಾರ್ತೆ   ಮೈಸೂರು   ಜೂ. 23
ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಶ್ರೇಯಲ್ ಕೆ. ತೆಲಂಗ್ ಜಯ ಗಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಕೊಪ್ಪ ಬಳಿಯ ನಳಂದ ಗುರುಕುಲದಲ್ಲಿ ಮೈಸೂರು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಆಯೋಜಿಸಿರುವ ರಾಜ್ಯ ಮಟ್ಟದ ನಳಂದ ಗುರುಕುಲ ಕಪ್ನಲ್ಲಿ ಶ್ರೇಯಲ್ ಅವರು ಸಿ.ಕೆ. ಯತೀಶ್ ಅವರನ್ನು 13-11, 12-14, 11- 6, 15- 13, 11- 5 ಅಂತರದಲ್ಲಿ ಸೋಲಿಸಿದರು. ವೆಟರನ್ಸ್ ಪುರುಷರ ಸಿಂಗಲ್ಸ್ನಲ್ಲಿ ಪಿ.ಎಲ್. ಮಂಜುನಾಥ್ ಅವರು ಎಸ್.ಎಸ್. ಸಂದೀಪ್ ಅವರನ್ನು 10- 12, 11- 4, 11- 4, 11- 6 ಅಂತರದಲ್ಲಿ ಮಣಿಸಿದರು. ಮಹಿಳೆಯರ ವಿಭಾಗದಲ್ಲಿ ಮಮತ ಅವರನ್ನು ಲಲಿತಕುಮಾರ್ ಅವರು 11- 7, 11-5, 11- 7 ಅಂತರದಲ್ಲಿ ಸೋಲಿಸಿದರು.
ಯೂತ್ ಬಾಯ್ಸ್ ವಿಭಾಗದ ಅಂತಿಮ ಪಂದ್ಯದಲ್ಲಿ ಮೈಸೂರಿನ ವೇದಾಂತ ಎಂ. ಅರಸ್ ಮತ್ತೊಮ್ಮೆ ಎಡವಿದ್ದಾರೆ. ಶ್ರೇಯಲ್ ಕೆ. ತೆಲಂಗ್ ಅವರನ್ನು ಎದುರಿಸುವಲ್ಲಿ ವಿಫಲರಾದ ವೇದಾಂತ್ 11- 6, 9-11, 11-9, 11-7, 11-9 ಅಂತರದಲ್ಲಿ ಸೋತರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.