ಸುದ್ದಿ ಸಂಕ್ಷೇಪ
ಪಾಣತ್ತಲೆಗೆ ಪದಕ
ಮೈಸೂರು: ಇತ್ತೀಚೆಗೆ ರಾಜಸ್ಥಾನದ ಜೋಧ್‌ಪುರರದ ಜೋಧಾನ ಫೋಟೋ ಜರ್ನಲಿಸ್ಟ್ ಸೊಸೈಟಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆಗೆ ಪದಕ ಲಭಿಸಿದೆ. ಈ ಹಿಂದೆ ಸೆರೆಹಿಡಿದಿದ್ದ ಲೆಫರ್ಡ್ ಅಟ್ಯಾಕ್ ಚಿತ್ರಕ್ಕೆ ಈ ಪದಕ ಲಭಿಸಿದೆ. ಈ ಸ್ಪರ್ಧೆಯಲ್ಲಿ ಜಗತ್ತಿನ 50 ದೇಶಗಳ 8164 ಛಾಯಾಗ್ರಾಹಕರು ಭಾಗವಹಿಸಿದ್ದರು.
ಅಕ್ಷಯ ತೃತೀಯ: ರಿಯಾಯಿತಿ
ಅಕ್ಷಯ ತೃತೀಯ ಅಂಗವಾಗಿ ಇಲ್ಲಿನ ಡಿ. ದೇವರಾಜ ಅರಸು ರಸ್ತೆಯಲ್ಲಿರುವ ತಾನಿಷ್ಕ್ ಆಭರಣ ಮಳಿಗೆಯಲ್ಲಿ ಖರೀದಿಸುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ಪ್ರಕಟಿಸಿದೆ. ಪ್ರತಿ ಖರೀದಿಗೆ ಒಂದು ಚಿನ್ನದ ನಾಣ್ಯ ಹಾಗೂ ಲಕ್ಷ ರು. ಮತ್ತು ಅದರ ಮೇಲಿನ ವಜ್ರಾಭರಣ ಖರೀದಿಗೆ ಶೇ.15 ರಷ್ಟು ರಿಯಾಯಿತಿ ಕಲ್ಪಿಸಲಾಗಿದೆ ಎಂದು ತಾನಿಷ್ಕ್ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ತಿಳಿಸಿದ್ದಾರೆ. ಭಾರತದಲ್ಲಿ ಅಕ್ಷಯ ತೃತೀಯ ದಿನ ಆಭರಣ ಖರೀದಿ ಯಶಸ್ಸಿನ ಸಂಕೇತವಾಗಿದ್ದು, ಆ ನಿಟ್ಟಿನಲ್ಲಿ ಗ್ರಾಹಕರಿಗೆ ನಾನಾ ಯೋಜನೆಯನ್ನು ಘೋಷಿಸಿದೆ. ಮೇ 9 ರಿಂದ 13 ರವರೆಗೆ ಈ ರಿಯಾಯಿತಿ ಲಭ್ಯವಿದೆ ಎಂದಿದ್ದಾರೆ.
ವಸಂತ ಕವಿಗೋಷ್ಠಿ ಬಹುಮಾನ
ವೆಂಕಟಗಿರಿ ಪ್ರಕಾಶನ, ಆಚಾರ್ಯ ಪುರೋಷತ್ತಮ ವಿದ್ಯಾಪೀಠ, ಹಿರಣ್ಮಯಿ ಪ್ರತಿಷ್ಠಾನ, ವೈಷ್ಣವಿ ಸಂಗೀತ ಸಭಾ ಇದರ ಸಂಯುಕ್ತಾಶ್ರಯದಲ್ಲಿ ವಸಂತ ಕವಿಗೋಷ್ಠಿ ಮತ್ತು ಬಹುಮಾನ ಪ್ರದಾನ ಕಾರ್ಯಕ್ರಮವನ್ನು ಮೇ 17 ರಂದು ಏರ್ಪಡಿಸಿದೆ. ಅಂದು ಬೆಳಗ್ಗೆ 10.30 ಕ್ಕೆ ಕೃಷ್ಣಮೂರ್ತಿಪುರಂ ನಮನ ಕಲಾಮಂಟಪದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಜಿಲ್ಲಾಧ್ಯಕ್ಷ ಡಾ.ಪಿ. ರಂಗಸ್ವಾಮಿ ಉದ್ಘಾಟಿಸುವರು. ಯುಗಾದಿ ಕವನ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ಹೊಟೇಲ್ ಉದ್ಯಮಿ ಟಿ.ಆರ್. ಚಂದ್ರಶೇಖರ್ ವಿತರಿಸುವರು. ಸಂಸ್ಕೃತಿ ಪೋಷಕ ಕೆ, ರಘುರಾಂ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್. ಅಣ್ಣೇಗೌಡ ಅತಿಥಿಯಾಗಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

