ರಾಜಕೀಯದೊಂದಿಗೆ ಧರ್ಮ ಬೆರೆಸಬೇಡಿ
ಕ.ಪ್ರ.ವಾರ್ತೆ ರಾವಂದೂರು ಮೇ 30
ಧರ್ಮ ಎಂದಿಗೂ ರಾಜಕೀಯದೊಂದಿಗೆ ಬೆರೆಯಬಾರದು ಎಲ್ಲಾ ಧರ್ಮದವರಿಗೂ ಒಂದೆ ತೆರೆನಾದ ಕಾಯಿದೆ ಜಾರಿಗೆ ತರಬೇಕು ಎಂದು ಬೆಂಗಳೂರಿನ ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ ತಿಳಿಸಿದರು.
ರಾವಂದೂರು ಮುರುಘಾಮಠದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವ ಮುನ್ನ ಧರ್ಮಗುರುಗಳು ಮತ್ತು ಹಿರಿಯರನ್ನು ಸೇರಿಸಿ ಮಾರ್ಗದರ್ಶನ ಪಡೆದು ಪ್ರಣಾಳಿಕೆ ರಚಿಸಬೇಕು ಹಾಗು ನದಿಗಳ ಜೋಡಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಪಕ್ಷಕ್ಕೆ ಮತಚಲಾಯಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ಬಸವಣ್ಣನ ವಚನಗಳು ಹೇಳುವುದಕ್ಕಿಂತ ಅಳವಡಿಸಿಕೊಳ್ಳಬೇಕು. ಕೇವಲ ಮಾತಿನಿಂದಲ್ಲ, ಆಚರಣೆಯಿಂದಲೂ ಶರಣ ತತ್ವ ಅಳವಡಿಸಿ ಕೊಳ್ಳುವುದರಿಂದ ಹೆಚ್ಚಿನ ಶಾಂತಿಯುತ ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ಡಾ. ಪಿ.ಕೆ. ರಾಜಶೇಖರ್ ಮಾತನಾಡಿದರು. ಪ್ರೊ. ಕೃಷ್ಣಮೂರ್ತಿ, ಡಾ. ಪುನಿತ್, ಸುತ್ತೂರು ಮಹದೇವಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಹೊನ್ನಾರು ಜಾನಪದ ಗಾಯಕರು ಜಾನಪದ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್, ಉಪನ್ಯಾಸಕ ಬೆಸಗರಹಳ್ಳಿ ಎಲೆಗೌಡರು, ಚೂಡಾಮಣಿ, ಮುಖಂಡರಾದ ಆರ್.ಎಸ್. ವಿಶ್ವನಾಥ್, ಆರ್.ಆರ್. ಶಶಿಧರ್, ರಾಜಣ್ಣ, ಪುಟ್ಟಸ್ವಾಮಿ, ಸುಬ್ರಹ್ಮಣ್ಯ, ಆರ್.ಎಸ್. ವಿಜಯ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

