ಮೈಸೂರು

ಮಹನೀಯರ ಜೀವನ ಚರಿತ್ರೆ ಗ್ರಂಥವಾಗಲಿ

Published On :

ಮೈಸೂರು: ಸಮುದಾಯದ ಮಹನೀಯರ ಜೀವನ ಚರಿತ್ರೆ ಗ್ರಂಥವಾಗಿ ಹೊರಬರಲಿ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್. ಎಲ್. ಭೈರಪ್ಪ ಹೇಳಿದರು. ಹೊಯ್ಸಳ ಕರ್ನಾಟಕ ಸಂಘ ಶುಕ್ರವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ಹೊಯ್ಸಳ ಕರ್ನಾಟಕ ಸಂಘಗಳ ರಾಜ್ಯ ಮಟ್ಟದ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿ, ಮೈಸೂರಿನಲ್ಲಿ ಟಿ. ನಾರಾಯಣರಾಯರು ಸೇರಿದಂತೆ ಅನೇಕ ಮಹನೀಯರು ಹಾಗೂ ಪುಣ್ಯಪುರುಷರು ಸಮಾಜಕ್ಕೆ ಕೊಡುಗೆ ನೀಡಿ ಕಣ್ಮರೆಯಾಗಿದ್ದಾರೆ. ಅಂಥ ಮಹನೀಯರ ಸೇವೆ ಸ್ಮರಿಸುವ ಸಲುವಾಗಿ ಜೀವನ ಚರಿತ್ರೆ ಹೊರತರುವ ಅಗತ್ಯವಿದೆ. ಪುಣ್ಯಪುರುಷರ ಇಂಥ ಇತಿಹಾಸದ ಪುಸ್ತಕಗಳು ಮುಂದೆ ಜನಾಂಗದ ಇತಿಹಾಸವಾಗಲಿದೆ ಎಂದರು. ಈ ಹಿಂದಿನ ತಲೆಮಾರಿನ ಮಹನೀಯರ ಬಗ್ಗೆ ತಿಳಿದಿರುವ ವ್ಯಕ್ತಿಗಳ ಸಂಖ್ಯೆ ವಿರಳ ಹಾಗೂ ಇರುವವರಿಗೂ ವಯಸ್ಸಾಗಿದೆ. ಆದ ಕಾರಣ ಆದಷ್ಟು ಬೇಗ ಮಾಹಿತಿ ಕಲೆಹಾಕಿ ಜೀವನ ಚರಿತ್ರೆ ಬರೆಯುವ ಕೆಲಸವಾಗಬೇಕು. ಈಗಾಗಲೇ ಬೆಂಗಳೂರಿನಲ್ಲಿ ಜಿ. ವೆಂಕಟಸುಬ್ಬಯ್ಯ ಅವರ ನೇತೃತ್ವದಲ್ಲಿ ಹೊಯ್ಸಳ ಗ್ರಂಥಮಾಲೆ ಪ್ರಕಟಣಾ ಕಾರ್ಯ ನಡೆಸುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.