ಸುದ್ದಿ ಸಂಕ್ಷೇಪ
ದಕ್ಷಿಣ ಮೂರ್ತಿಗೆ ಪ್ರಶಸ್ತಿಗೆ ಆಗ್ರಹ
ಮೈಸೂರು: ಸ್ವರ್ಣಶಿಲ್ಪಿ ದಕ್ಷಿಣ ಮೂರ್ತಿ ಅವರಿಗೆ ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡುವಂತೆ ವಿಶ್ವಕರ್ಮ ಚಿನ್ನ, ಬೆಳ್ಳಿ ಕೆಲಸಗಾರರ ಯುವಕರ ಬಳಗ ಆಗ್ರಹಿಸಿದೆ.ಮೈಸೂರು ನಗರದ ಹಿರಿಯ ಕಲಾವಿದರು ಆದ ದಕ್ಷಿಣಮೂರ್ತಿ ಅವರು ಒಬ್ಬ ಅಪರೂಪದ ಶಿಲ್ಪ ಕಲಾವಿದ. ಉಡುಪಿ, ಮಂಗಳೂರು, ಧರ್ಮಸ್ಥಳ, ತಿರುಪತಿ ಮುಂತಾದ ಧಾರ್ಮಿಕ ಕ್ಷೇತ್ರಗಳಲ್ಲಿ ಅವರ ಕೆತ್ತನೆಯ ಮೂರ್ತಿ ಹಾಗೂ ಶಿಲ್ಪಗಳನ್ನು ಕಾಣಬಹುದು. ಲೋಹ ಕೆತ್ತನಲ್ಲಿ ನೈಪುಣ್ಯತೆ ಹೊಂದಿರುವ ಈ ಕಲಾಕಾರನಿಗೆ ಸರ್ಕಾರ ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಬೇಕೆಂದು ಬಳಗದ ಅಧ್ಯಕ್ಷ ಸಿ.ವಿ.ಆರ್. ಜಯಕುಮಾರ್ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ದಂತ ತಪಾಸಣೆ
ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಹಾಗೂ ಚಿನ್ಮಯ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕಣ್ಣಿನ ತಪಾಸಣೆ ಮತ್ತು ದಂತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಗೌರ್ನರ್ ಪ್ರೊ. ಟಿ.ಜೆ. ರಾಮಮೂರ್ತಿ ಮಾತನಾಡಿ, ನೈಜ ಪ್ರಪಂಚಕ್ಕಿಂತ ಆಧುನಿಕ ಪ್ರಪಂಚ ವಿಭಿನ್ನವಾಗಿದೆ. ಇದಕ್ಕೆ ಹೊಂದಿಕೊಳ್ಳುವಂತೆ ನಾವು ಬದಲಾಗಬೇಕಿದೆ. ಅದಕ್ಕೆ ಪೂರಕವಾಗಿ ಶಿಕ್ಷಣ ಮಾರ್ಗದರ್ಶನ ಮಾಡಬಲ್ಲದು ಎಂದು ಅಭಿಪ್ರಾಯಪಟ್ಟರು. ಮಾಜಿ ಗೌರ್ನರ್ ಎಚ್.ಎನ್. ರಾಮತೀರ್ಥ, ಕ್ಲಬ್ನ ಅಧ್ಯಕ್ಷ ಎಂ.ಎಸ್. ಶಾರದಾಪ್ರಸಾದ್, ಚಿನ್ಮಯ ವಿದ್ಯಾಶಾಲೆಯ ಪ್ರಾಂಶುಪಾಲೆ ಕೆ. ಮಂಗಳಾ ಇದ್ದರು.
ನೇಮಕ
ಮೈಸೂರು: ವಿಶ್ವಮಾನವ ಯುವ ವೇದಿಕೆಯ ನಗರದ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಶ್ರೀರಾಂಪುರ ಎರಡನೇ ಹಂತದ ನಿವಾಸಿ ರಾಕೇಶ್ ಸಿ. ಗೌಡ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ನಗರ ಕಾರ್ಯಕಾರಿಣಿ ಸದಸ್ಯರಾಗಿ ಬಿ. ಪುರುಷೋತ್ತಮ್ ಹಾಗೂ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಜನತಾ ನಗರದ ನಿವಾಸಿ ಶಶಿಕುಮಾರ್ಗೌಡ ಅವರನ್ನು ನೇಮಕ ಮಾಡಲಾಗಿದೆ.
ರಫ್ತುದಾರ ಪ್ರಶಸ್ತಿ
ಮೈಸೂರು: ನಗರದ ಸಾಫ್ಟ್ವೇರ್ ಪ್ಯಾರಾಡಿಗ್ಸ್ಮ್ ಇನ್ಫೋಟೆಕ್ ಪ್ರೈ.ಲಿ.(ಎಸ್ಪಿಐ) 2012-13ನೇ ಸಾಲಿನ ಅತಿ ಹೆಚ್ಚು ಐಟಿ ರಫ್ತುದಾರ- ಸೇವೆಗಳು ಪ್ರಶಸ್ತಿಗೆ ಭಾಜನವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹಾಗೂ ಐಟಿ,ಬಿಟಿ ಮತ್ತು ಎಸ್ಟಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಶಿ ತರೂರ್, ಎಸ್ಪಿಐ ಸಂಸ್ಥೆಯ ಸಿಇಒ ಸಿದ್ ಮುಖರ್ಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಟಿ- ಬಿಟಿ ಸಚಿವ ಎಸ್.ಆರ್. ಪಾಟೀಲ್ ಅತಿಥಿಯಾಗಿ ಭಾಗವಹಿಸಿದ್ದರು.
ವಸ್ತು ಪ್ರದರ್ಶನ
ಮೈಸೂರು: ಜಯಲಕ್ಷ್ಮೀಪುರಂನ ಮಹಾಜನ ಪಬ್ಲಿಕ್ ಶಾಲೆಯಲ್ಲಿ 2013ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಮಹಾಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವಮೂರ್ತಿ ಉದ್ಘಾಟಿಸಿದರು. ಗೌರವ ಕಾರ್ಯದರ್ಶಿ ಪ್ರೊ. ಪಿ.ಆರ್. ನಾಗಶ್ರೀನಿವಾಸ್, ಆಡಳಿತ ಮಂಡಳಿ ಸದಸ್ಯೆ ವಿಜಯಲಕ್ಷ್ಮೀ, ಪ್ರಾಂಶುಪಾಲೆ ಸಿ.ಎಚ್. ನಾಗರತ್ನ ಇದ್ದರು. 1ರಿಂದ 10ನೇ ತರಗತಿವರೆಗಿನ ಮಕ್ಕಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ವ್ಯಕ್ತಿ ನಾಪತ್ತೆ
ಮೈಸೂರು: ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ನಂಜುಂಡರಾವ್ ಅ.5ರಿಂದ ಕಾಣೆಯಾಗಿದ್ದಾರೆ. ಚಹರೆ ಇಂತಿದೆ- 42 ವರ್ಷ, 5.4 ಅಡಿ ಎತ್ತರ, ಗುಂಡು ಮುಖ ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಮತ್ತು ಮರಾಠಿ ಮಾತನಾಡುತ್ತಾರೆ. ಎಡ ಭಾಗದ ಕೈಯಲ್ಲಿ ಲಕ್ಷ್ಮೀ ಎಂದು ಹಚ್ಚೆ ಗುರುತಿದೆ. ವಾರಸುದಾರರು ಇದ್ದಲ್ಲಿ ಮಂಡಿ ಪೊಲೀಸ್ ಠಾಣೆ ದೂ. 0821- 2418339, 2418313 ಸಂಪರ್ಕಿಸುವಂತೆ ಎಎಸ್ಐ ಪಟ್ಟಾಭಿರಾಮ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

