ಮೈಸೂರು

ಸುದ್ದಿ ಸಂಕ್ಷೇಪ

Published On :

ಡಿ.ಬಿ. ಕುಪ್ಪೆಯಲ್ಲಿ ಕನ್ನಡ ರಾಜ್ಯೋತ್ಸವ
ಎಚ್.ಡಿ. ಕೋಟೆ: ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕು ಗಡಿ ಭಾಗವಾದ ಡಿ.ಬಿ. ಕುಪ್ಪೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿ ಆಚರಿಸಿತು. ಕಳೆದ ನಾಲ್ಕು ವರ್ಷಗಳಿಂದಲೂ ಡಿ.ಬಿ. ಕುಪ್ಪೆ ಗ್ರಾಮದಲ್ಲಿ ರಕ್ಷಣಾ ವೇದಿಕೆಯವರು ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಈ ಬಾರಿ ಅಂತರಸಂತೆ ಔಟ್ ಪೊಲೀಸ್ ಠಾಣೆಯ ಮುಖ್ಯಪೇದೆ ಗೋವಿಂದ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು. ತಾ. ಅಧ್ಯಕ್ಷ ನಟರಾಜ್, ಮಹಿಳಾ ಅಧ್ಯಕ್ಷೆ ಸುಧಾ, ತಾಲೂಕು ಕಾರ್ಯಾಧ್ಯಕ್ಷ ಚೆಲುವರಾಜು, ಸಂಚಾಲಕ ಕೆಂಡಗಣ್ಣಸ್ವಾಮಿ, ಮಹೇಶ್, ರಾಜಾಚಾರಿ, ಕೃಷ್ಣನಾಯ್ಕ, ಇಸ್ಮಾಯಿಲ್ ಪಾಷ, ಸೋಮಶೇಖರಗೌಡ, ಪ್ರಸನ್ನ, ಕೃಷ್ಣ, ಸ್ವಾಮಿ, ಪುಟ್ಟರಾಜು, ಮಲ್ಲೇಶ್, ದಾಸಪ್ಪ, ವಿನೋದ್, ಸಂತೋಷ್, ವನ ರಕ್ಷಕ ಪ್ರದೀಪ್‌ಕುಮಾರ್ ಭಾಗವಹಿಸಿದ್ದರು.
ಎಸ್‌ಎಫ್‌ಐಗೆ ಆಯ್ಕೆ
ಹುಣಸೂರು: ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ತಾಲೂಕು ಸಮಿತಿಗೆ ಅಧ್ಯಕ್ಷರಾಗಿ ಎನ್. ರಂಜಿತ, ಕಾರ್ಯದರ್ಶಿಯಾಗಿ ವಿನೋದ್, ಉಪಾಧ್ಯಕ್ಷರಾಗಿ ಸಂದೀಪ್ ಸುಪ್ರಿಯಾ ವಿನೋದ್, ಸಹ ಕಾರ್ಯದರ್ಶಿಗಳಾಗಿ ಅಂಜುಶ್ರೀ, ಸುರೇಖಾ, ಅಭಿಷೇಕ್, ಲೋಕೇಶ್, ಹಾಗೂ 19 ಮಂದಿ ಸದಸ್ಯರು ನೇಮಕವಾಗಿದ್ದಾರೆ ಎಂದು ಕಾರ್ಯದರ್ಶಿ ವಿನೋದ್ ತಿಳಿಸಿದ್ದಾರೆ.
ಸ್ಕ್ಯಾನಿಂಗ್ ಶಿಬಿರ
ಕೆ.ಆರ್. ನಗರ: ಮಮತ-ಗಂಗಾ ಮೆಟರ್ನಿಟಿ ಸೆಂಟರ್‌ನಲ್ಲಿ ನ.10ರಂದು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಶಿಬಿರವನ್ನು ಉಚಿತವಾಗಿ ಏರ್ಪಡಿಸಿದೆ ಎಂದು ಸೆಂಟರ್‌ನ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞ ಡಾ. ಶಂಕರ ಸೋಮಯಾಜಿ ತಿಳಿಸಿದ್ದಾರೆ.  ನ.8ರೊಳಗಾಗಿ ಹೆಸರು ನೋಂದಾಯಿಸಿದ ಗರ್ಭಿಣಿಯರಿಗೆ ಮಾತ್ರ ಉಚಿತ ಸ್ಕ್ಯಾನಿಂಗ್ ಮಾಡಲಾಗುವುದು. ವಿವರಕ್ಕೆ 08223- 262809 ಸಂಪರ್ಕಿಸುವಂತೆ ಆಡಲಿತಾಧಿಕಾರಿ ಎಂ. ಶುಭ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.