ಸುದ್ದಿ ಸಂಕ್ಷೇಪ
ನಿವೃತ್ತ ನೌಕರರಿಗೆ ಸೂಚನೆ
ಮೈಸೂರು: 2011ರ ನ.1ರಿಂದ 2012ರ ಮಾ.31 ಅವಧಿಯಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಸರ್ಕಾರಿ ನೌಕರರು, ಅಧಿಕಾರಿಗಳು, ಉಪಾಧ್ಯಾಯರು ಇತ್ಯಾದಿ ವರ್ಗದವರು 6ನೇ ವೇತನ ಆಯೋಗದ ಸೌಲಭ್ಯಗಳನ್ನು ಪಡೆಯದೆ ವಂಚಿತರಾಗಿದ್ದಾರೆ. ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ಬಗ್ಗೆ ಚರ್ಚಿಸಿ, ಮುಂದಿನ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಮೊ. 99807 26089 ಅಥವಾ ದೂ. 0821- 2540220 ಸಂಪರ್ಕಿಸುವಂತೆ ಎನ್.ಎಸ್. ಚಂದ್ರಶೇಖರ್ ಕೋರಿದ್ದಾರೆ.
ಡಾ. ಇಂದಿರಾಗೆ ಪ್ರಶಸ್ತಿ
ಮೈಸೂರು: ಮೈಸೂರು ವಿವಿಯ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಎಂ. ಇಂದಿರಾ ಅವರಿಗೆ 2013ನೇ ಸಾಲಿನ ನ್ಯಾಷನಲ್ ಎಜುಕೇಷನ್ ಲೀಡರ್ಷಿಪ್ ಆವಾರ್ಡ್ ಲಭಿಸಿದೆ. ಮುಂಬಯಿನ ತಾಜ್ಲಾಂಡ್ಸ್ ಎಂಡ್ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಅರ್ಥಶಾಸ್ತ್ರ ವಿಷಯದಲ್ಲಿನ ಸಂಶೋಧನೆ ಹಾಗೂ ಶಿಕ್ಷಣ ಪ್ರಾವಿಣ್ಯತೆಯನ್ನು ಗುರುತಿಸಿ ಇಂದಿರ ಅವರಿಗೆ ಈ ಪ್ರಶಸ್ತಿಯನ್ನು ಸ್ಟಾರ್ಸ್ ಆಫ್ ದಿ ಇಂಡಸ್ಟ್ರಿ ಮ್ತು ದೈನಿಕ್ ಬಾಸ್ಕರ್ ಜೊತೆಗೂಡಿ ಪ್ರಶಸ್ತಿ ನೀಡಿ ಗೌರವಿಸಿದೆ.
ಮಂಜುನಾಥ್ಗೆ ಪ್ರಶಸ್ತಿ
ಆಧುನಿಕ ಬೈಂಡಿಗ್ ತಂತ್ರಜ್ಞಾನ ಮತ್ತು ತರಬೇತಿಯ ಸೇವೆಗಾಗಿ ಮೈಸೂರಿನ ಎಚ್.ಎಸ್. ಮಂಜುನಾಥ್ ಶೆಟ್ಟಿ ಅವರನ್ನು ದೆಹಲಿಯ ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿಯು ಭಾರತ್ ಜ್ಯೋತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಡಿ.23ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸುವರು.
ಸಂಗೀತೋತ್ಸವ
ಮೈಸೂರು: ಜಯಚಾಮರಾಜೇಂದ್ರ ಒಡೆಯರ್ ಸ್ಮರಣಾರ್ಥ ಶ್ರೀವಿದ್ಯಾ ಸಂಗೀತೋತ್ಸವ ನ.8 ಮತ್ತು 9ರಂದು ಮೈಸೂರು ವಿವಿಯ ಲಲಿತ ಕಲೆಗಳ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಮಳವಳ್ಳಿ ನಾರಾಯಣಸ್ವಾಮಿ ಮತ್ತು ಇಂದಿರಮ್ಮ ಕುಟುಂಬದ ದತ್ತಿಯಡಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು 8ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು. ದತ್ತಿಯ ಸಂಸ್ಥಾಪಕರಾದ ಮಳವಳ್ಳಿ ಎಸ್. ನಾರಾಯಣಸ್ವಾಮಿ, ಇಂದಿರಮ್ಮ ನಾರಾಯಣಸ್ವಾಮಿ, ಮಳವಳ್ಳಿ ಪರಿಷತ್ತಿನ ಟ್ರಸ್ಟಿ ಪ್ರೊ. ಶಿವರಾಂ ಮಳವಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

