ದಸರಾದಲ್ಲಿ ಸ್ವಚ್ಛತೆಗೆ ಆದ್ಯತೆ
ಕ.ಪ್ರ.ವಾರ್ತೆ ಮೈಸೂರು ಅ. 1
ನಾಡಹಬ್ಬ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಸಂದರ್ಭದಲ್ಲಿ ನಗರದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ದಸರಾ ಸ್ವಚ್ಛತೆ ಉಪ ಸಮಿತಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ಹೇಳಿದರು.
ಈ ಬಾರಿಯ ದಸರಾದಲ್ಲಿ ಸಂಪೂರ್ಣವಾಗಿ ಶುಚಿತ್ವ ಕಾಪಾಡುವುದಕ್ಕಾಗಿ ಸಹಾಯವಾಣಿ(0821- 241880, 2418816, ಮೊ. 94498 41196) ಆಂಭಿಸಲಾಗಿದೆ. ನಗರದ ಯಾವುದೇ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕಸ ಇದ್ದಲ್ಲಿ ತಕ್ಷಣ ಕರೆ ಮಾಡಿ ವಿಷಯ ತಿಳಿಸಬಹುದು. ನಗರದೆಲ್ಲಡೆ ಶುಚಿತ್ವ ಕಾಪಾಡುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಸಂಚಾರಿ ವಾಹನ ಗಸ್ತು ತಿರುಗಲಿದೆ. ಹಾಗೆ ರೇಡಿಯೋ, ಎಫ್ಎಂ, ಸ್ಥಳೀಯ ದೂರದರ್ಶನ ಮಾಧ್ಯಮಗಳ ಮೂಲಕ ಸಂದೇಶ ನೀಡಲಾಗುವುದು. ದಸರಾ ಮುಗಿದ ಮಾರನೇ ದಿನ ಉತ್ತಮವಾಗಿ ಸ್ವಚ್ಛತೆ ಸೇವೆ ಸಲ್ಲಿಸಿದ ಹತ್ತು ಮಂದಿ ಪೌರಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಚ್ಛತೆಗೆ ಏನೇನು ಕಾರ್ಯಕ್ರಮ: ಅ.3ರ ಬೆಳಗ್ಗೆ 9ಕ್ಕೆ ಚಾಮುಂಡಿಬೆಟ್ಟದಿಂದ ಶ್ರಮದಾನ ಮತ್ತು ಪರಿಸರ ಜಾಗೃತ ಜಾಥಾ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಚಾಲನೆ ನೀಡುವರು. ಪರಿಸರವಾದಿ, ನಟ ಸುರೇಶ್ ಹೆಬ್ಳೀಕರ್, ಶಾಸಕ ಜಿ.ಟಿ. ದೇವೇಗೌಡ ಅತಿಥಿಗಳಾಗಿ ಭಾಗವಹಿಸುವರು. 500 ಮಂದಿ ಮೈಸೂರು ಯುವ ವೇದಿಕೆ ಹಾಗೂ ವಿದ್ಯಾಶ್ರಮ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3ಕ್ಕೆ ನಗರದ ಮಹಾರಾಜ ಕಾಲೇಜು ಶತಮಾನೋತ್ಸವದಲ್ಲಿ ಪರಿಸರ ಮತ್ತು ಯುವ ಸಮುದಾಯ ಸಂವಾದ ಏರ್ಪಡಿಸಿದ್ದು, ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಂ. ರಂಗಪ್ಪ ಉದ್ಘಾಟಿಸುವರು. ನಂತರ ಸುರೇಶ್ ಹೆಬ್ಳೀಕರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.
ಅ.4ರ ಬೆಳಗ್ಗೆ 8.30ಕ್ಕೆ ನಗರದ ದೇವರಾಜ ಮಾರ್ಕೆಟ್ ಮುಂಭಾಗದಲ್ಲಿ ಶ್ರಮದಾನ ಮತ್ತು ಶುಚಿತ್ವ ಜಾಗೃತಿ ಭಿತ್ತಿಪತ್ರ ಬಿಡುಗಡೆ ಹಮ್ಮಿಕೊಳ್ಳಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಚಾಲನೆ ನೀಡುವರು. ಶಾಸಕ ವಾಸು, ಮೇಯರ್ ಎನ್.ಎಂ. ರಾಜೇಶ್ವರಿ, ಉಪಮೇಯರ್ ವಿ. ಶೈಲೇಂದ್ರ, ಜಿಲ್ಲಾಧಿಕಾರಿ ಸಿ. ಶಿಖಾ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಭಾಗವಹಿಸುವರು. ಅಂದು ರಾತ್ರಿ 9ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ಟಾಸ್ಕ್ಫೋರ್ಸ್ಗೆ ಶಾಸಕ ತನ್ವೀರ್ ಸೇಠ್ ಚಾಲನೆ ನೀಡುವರು. ಸುಮಾರು 280 ಮಂದಿ ದಿನದ 24 ಗಂಟೆ ಶುಚಿತ್ವದಲ್ಲಿ ಪಾಲ್ಗೊಳ್ಳುವರು.
ಧರ್ಮಗುರು ಸಂಗಮ ರ್ಯಾಲಿ
7ರ ಬೆಳಗ್ಗೆ 9 ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಧರ್ಮಗುರು ಸಂಗಮ ರ್ಯಾಲಿಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು. ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ. ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ಸಂಸದರಾದ ಎಚ್. ವಿಶ್ವನಾಥ್, ಆರ್. ಧ್ರುವನಾರಾಯಣ್, ಧರ್ಮಗುರುಗಳಾದ ಮೌಲಾನಾ ಸೈಯದ್ ಹುಸ್ಮಾನ್ ಷರೀಫ್ ಸರ್ಕಾಜಿ, ರೆವಂಡರ್ ಥಾಮ್ ಅಂಥೋಣಿ ವಾಳಪಿಳ್ಳೈ, ಸೋಮೇಶ್ವರನಾಥ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಪ್ರಸನ್ನಾನಂದಪುರಿ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಭಾಗವಹಿಸುವರು. ಉಪ ಸಮಿತಿ ಪದಾಧಿಕಾರಿಗಳಾದ ಪಿ.ಜಿ. ರಮೇಶ್, ಆರ್. ಲೋಕನಾಥ್, ಜೆ.ಎನ್. ಲಕ್ಷ್ಮಣ್, ಡಾ. ಡಿ.ಜಿ. ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

