ದುರಸ್ತಿಯಾಗದ ಹಿನಕಲ್ ಬಸ್ ನಿಲ್ದಾಣ
ಕ.ಪ್ರ.ವಾರ್ತೆ ಮೈಸೂರು ಅ. 1
ನಗರದಿಂದ ಹೊರವಲಯದ ಹಿನಕಲ್ ಇತ್ತ ನಗರ ಪ್ರದೇಶಕ್ಕೂ ಒಳಪಡದೆ, ಅತ್ತ ಗ್ರಾಮಾಂತರ ಪ್ರದೇಶಕ್ಕೂ ಒಳಪಡದೆ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದೆ ಎಂದು ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಹಿನಕಲ್ ಗಣೇಶ್ ದೂರಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾದ ಬಸ್ ನಿಲ್ದಾಣ ಶಿಥಿಲವಾಗಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ಸುಸಜ್ಜಿತವಾದ ತಂಗುದಾಣವಿಲ್ಲದೆ ಪ್ರಯಾಣಿಕರ ಪಾಡು ಹೇಳತೀರದಾಗಿದೆ. ಮಳೆ ಬಂತೆಂದರೆ ಶಿಥಿಲಗೊಂಡಿರುವ ಛಾವಣಿಯ ಸೋರುವಿಕೆ, ಬೇಸಿಗೆಯಲ್ಲಿ ನೆರಳಿಲ್ಲದೆ ಇರುವ ಛಾವಣಿಯ ಸ್ಥಿತಿ ಎಲ್ಲೋ ಬಿದ್ದು ಹೋಗುತ್ತದೆ ಎಂಬ ಭಯದಿಂದ ದಿನದೂಡುವ ಸ್ಥಿತಿ ಬಂದೊದಗಿದೆ.
ವಿಜಯನಗರ 2ನೇ ಹಂತದಲ್ಲಿರುವ ಕೆಆರ್ಎಸ್ ನೀರಿನ ಟ್ಯಾಂಕ್ ಇದ್ದರೂ ಸಹ ಈ ಗ್ರಾಮಕ್ಕೆ ಕೆಆರ್ಎಸ್ ನೀರನ್ನು ಕುಡಿಯುವ ಯೋಗ ಇಲ್ಲದಂತಾಗಿದೆ. ಈ ವಿಷಯವಾಗಿ ಹಲವಾರು ಸಾರಿ ವಾರ್ಡ್ ಸಭೆಗಳಲ್ಲಿ ಹಾಗೂ ಗ್ರಾಮಸಭೆಗಳಲ್ಲಿ ಎಷ್ಟೇ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದ ಎಚ್. ವಿಶ್ವನಾಥ್ ಕೂಡ ಭೇಟಿ ನೀಡಿ ಪರಿಶೀಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈಗಲಾದರೂ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಂಡು ಇಲ್ಲಿನ ಜನರ ಸಂಕಷ್ಟವನ್ನು ನಿವಾರಿಸುವಂತೆ ಅವರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

