ಮೈಸೂರು

ಮೋದಿ ಸರ್ಕಾರಕ್ಕೆ ಮಾತ್ರ ಬಡತನ ನಿರ್ಮೂಲನೆ ಸಾಧ್ಯ

Published On :

ಗುಂಡ್ಲುಪೇಟೆ: ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬಹುತೇಕ ನೆಹರು ಕುಟುಂಬದವರೇ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದರೂ, ಈ ಬಾರಿ ಮತ್ತೊಂದು ಅವಕಾಶ ಕೊಡಿ. ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಸ್ಲೋಗನ್ ಕೇಳಿ ಬರುತ್ತಿದೆ. ಇದು ಸರಿಯಲ್ಲ. ಮತ್ತೆ ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ ಅವರ ಚೇಲಗಳ ಬಡತನ ನಿರ್ಮೂಲನೆಯಾಗಲಿದೆ ಎಂದು ಯುವ ಭಾರತ್ ರಾಜ್ಯಾಧ್ಯಕ್ಷ ನಿಕೇಶ್ರಾಜ್ ವ್ಯಂಗ್ಯವಾಡಿದರು.
ಪಟ್ಟಣದ ಸಿಎಂಎಸ್ ಕಲಾ ಮಂದಿರದಲ್ಲಿ ನಮೋ ಬ್ರಿಗೇಡ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶ ಆಳುವ ಕನಸು ಇರುವ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿರೂಪದಂತಿರುವ ನರೇಂದ್ರ ೆಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ಬಂದರೆ ಬಡತನ ನಿರ್ಮೂಲನೆ ಸಾಧ್ಯ ಎಂದರು.
ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಮೋದಿ ಸರ್ಕಾರದಲ್ಲಿ ಗುಜರಾತ್ ಕೇಸರೀಕರಣವಾಗುತ್ತದೆ ಎಂದು ಬೊಬ್ಬೆ ಹೊಡೆದಿದ್ದವರು ಹಸರೀಕರಣವಾಗಿರುವ ಗುಜರಾತ್ ನೋಡಿ ಎಂದು ಸವಾಲು ಹಾಕಿದರು.
ವಿವೇಕಾನಂದ ಹಾಗೂ ಭಗತ್ಸಿಂಗ್ ಅವರ ಕನಸು ನನಸು ಮಾಡುವ ತಾಕತ್ತು ಇರುವುದು ಮೋದಿಗೆ ಮಾತ್ರ. ದೇಶದ ಆರ್ಥಿಕ ನೀತಿ ಹಾಳಾಗಿದ್ದು, ಇದಕ್ಕೆ ಹಿಂದೂ ದೇವಾಲಯಗಳ ಹಣ ಬೇಕಾಗಿರುವ ಬಗ್ಗೆ ತೀವ್ರ ತರಾಟೆಗೆ ತಗೆದುಕೊಂಡ ಅವರು, ಚರ್ಚ್, ಮಸೀದಿಯ ಹಣವನ್ನೇಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಇಲ್ಲಾ ಸ್ವಾಮಿ: ನಮೋ ಬ್ರಿಗೇಡ್ ಉದ್ಘಾಟನೆ ಮಾಡಿದ ಹಿರಿಯ ವಕೀಲ ಎಚ್.ವಿ.ಎಸ್.ಮೂರ್ತಿ ಮಾತನಾಡಿ, ರಸ್ತೆ, ಮನೆ ಇನ್ನಿತರ ಸಮಸ್ಯೆಗಳು ಬಗೆಹರಿದರೆ ಅಭಿವೃದ್ಧಿಯಲ್ಲ. ಶಾಶ್ವತ ಯೋಜನೆಗಳನ್ನು ತಂದು ರೈತರ ಹಾಗೂ ಜನಸಾಮಾನ್ಯರ ಬದುಕಿನ ಕನ್ನಡಿಯಾಗಿರುವ ಮೋದಿಯ ಕನಸು ಹತ್ತಿರವಾಗುವ ಕಾಲ ಬಂದಿದೆ. ಮತದಾರರು ಅಭಿವೃದ್ಧಿ ಪರ ಒಲವಿರುವ ಮೋದಿಯ ಕೈ ಹಿಡಿಯಿರಿ ಎಂದು ಮನವಿ ಮಾಡಿದರು.
ಬೆಂಗಳೂರು ಜಿಲ್ಲಾ ಯುವ ಭಾರತ್ನ ನಿತ್ಯಾನಂದ ವಿವೇಕವಂಶಿ ವೇದಿಕೆಯಲ್ಲಿದ್ದರು. ಕೆಲ ಕಾಲ ನರೇಂದ್ರ ಮೋದಿಯ ಬಗ್ಗೆ ಕಿರು ಚಿತ್ರ ಪ್ರದರ್ಶನ ನಡೆಯಿತು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ಕೆಜೆಪಿ ಮುಖಂಡ ಸಿ.ಎಸ್.ನಿರಂಜನಕುಮಾರ್, ಬಿಜೆಪಿ ಅಧ್ಯಕ್ಷ ಯು.ಎಂ.ಮಲ್ಲೇಶ್, ಮಾಜಿ ಬಿಜೆಪಿ ಅಧ್ಯಕ್ಷ ಎಚ್.ಜಿ.ಮಲ್ಲಿಕಾರ್ಜುನಸ್ವಾಮಿ, ಯುವ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಜಿ.ಜಿ.ಮಲ್ಲಿಕಾರ್ಜುನ, ಹಿರಿಯ ಮುಖಂಡ ಸಿ.ಹುಚ್ಚೇಗೌಡ ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು ಮಂದಿ ಯುವಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.