ಮೈಸೂರು

ಕೆಲಸ ಸ್ಥಗಿತಗೊಂಡಿದ್ದಕ್ಕೆ ಪಿಡಿಒ ವಿರುದ್ಧ ಧರಣಿ

Published On :

ಕ.ಪ್ರ.ವಾರ್ತೆ   ಟಿ.ನರಸೀಪುರ   ಅ. 3
ಪಟ್ಟಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ಸಮರ್ಪಕವಾದ ಸ್ವಚ್ಛತೆ ನಿರ್ವಹಣೆಯಾಗದೆ ಸಾರ್ವಜನಿಕ ಕೆಲಸ ಕಾರ್ಯಗಳು ಕುಂಠಿತಗೊಂಡಿದ್ದರಿಂದ ಪಿಡಿಒ ವಿರುದ್ಧ ಪಂಚಾಯಿತಿ ಎದುರು ಧರಣಿ ಕೂರಬೇಕಾಯಿತು ಎಂದು ಭೈರಾಪುರ ಗ್ರಾಪಂ ಅಧ್ಯಕ್ಷೆ ಪದ್ಮಾ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಪಿಡಿಒ ಪರ ನಿಂತಿರುವ ಸದಸ್ಯರು ಹೇಳುವಂತೆ ಯಾವುದೇ ಸ್ವಾರ್ಥ ಸಾಧನೆಗಾಗಲಿ ಅಥವಾ ಕಾಮಗಾರಿಗಳ ಬಿಲ್ಗಾಗಿ ಒತ್ತಡ ಹೇರಿ ಪಿಡಿಒ ವಿರುದ್ಧ ಮಹಾತ್ಮ ಗಾಂಧೀಜಿ ಜಯಂತಿಯಂದು ಪ್ರತಿಭಟನೆ ನಡೆಸಬೇಕೆಂಬ ದುರುದ್ದೇಶವಿರಲಿಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಮ್ಮ ಮೇಲೆ ಆರೋಪ ಮಾಡುವಾಗ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕು. ದಲಿತ ಮಹಿಳೆ ಅಧ್ಯಕ್ಷೆ ಮೇಲೆ ವೃಥಾ ಆರೋಪ ಮಾಡುವುದರಿಂದ ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದರು. ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾಗಿರುವ ಕರಿಯಪ್ಪ ಮಾತನಾಡಿ, ಅಭಿವೃದ್ಧಿ ಅಧಿಕಾರಿ ಕೆಲಸ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿ, ತಮ್ಮ ಕಪಿಮುಷ್ಟಿಯಲ್ಲಿ ಪಂಚಾಯಿತಿ ನಡೆಯಬೇಕೆಂದು ಬ್ಲಾಕ್ ಮೇಲ್ ಮಾಡುವುದರಿಂದಲೇ ಪಂಚಾಯಿತಿ ಆಡಳಿತ ಹದಗೆಟ್ಟು ಹೋಗಿದೆ ಎಂದು ಆರೋಪಿಸಿದರು. ಬೀದಿ ದೀಪದೀಪಗಳ ನಿರ್ವಹಣೆಗಾಗಿ ಈ ಹಿಂದೆ ಟೆಂಡರ್ ಕರೆಯಲಾಗಿದ್ದ ಹಣದ ಮೊತ್ತಕ್ಕೆ ಮರು ಟೆಂಡರ್ ನೀಡಬೇಕು. ಆದರೆ ಈ ಬಾರಿ ದುಪ್ಪಟ್ಟು ಮೊತ್ತದ ಹಣಕ್ಕೆ ಕರೆಯಲಾಗಿದ್ದ ಟೆಂಡರ್ಗೆ ಒಪ್ಪಿಗೆ ನೀಡದ್ದಕ್ಕೆ ಕರಿಯಪ್ಪ ಹಾಗೂ ಕೆಲ ಸದಸ್ಯರು ಪಿಡಿಒ ವಿರುದ್ಧ ನಡೆದ ನಮ್ಮ ಪ್ರತಿಭಟನೆ ಬಗ್ಗೆ ಸುಳ್ಳು ಆರೋಪ ಹೊರಿಸಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಹಿರಿಯ ಸದಸ್ಯ ಬಿ.ಎಲ್. ಮಹದೇವ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪುಟ್ಟು, ಸದಸ್ಯ ದಿವಾಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.