ಮೈಸೂರು

ಕ್ರೀಡಾಕೂಟ: ಮೊದಲ ದಿನ ಮೂರು ದಾಖಲೆ

Published On :

ಕ.ಪ್ರ.ವಾರ್ತೆ  ಮೈಸೂರು  ಅ. 6
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಮೈಸೂರಿನ ಆಟಗಾರರು ಮೂರು ನೂತನ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಉದ್ದ ಜಿಗಿತದಲ್ಲಿ ಮೈಸೂರಿನ ಅಮಿನ್ ಕುಮಾರ್ 7.62 ಮೀ. ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಇವರು ಈ ಹಿಂದಿನ ದಾಖಲೆ 7.09ನ್ನು ಮುರಿದಿದ್ದಾರೆ. ಗುಂಡು ಎಸೆತದಲ್ಲಿ ಮೈಸೂರಿನ ಎಂ.ಸಿ. ಮೋಹನ್‌ಕುಮಾರ್ ಈ ಹಿಂದೆ ಇದ್ದ 15.85 ಮೀ. ದಾಖಲೆಯನ್ನು ಅಳಿಸಿ 15.92 ಮೀ. ಎಸೆದು ತಮ್ಮ ಹೆಸರಿನಲ್ಲಿ ದಾಖಲೆ ಮಾಡಿದ್ದಾರೆ. ಅಂತೆಯೆ 4್ಢ400 ಮೀ ರಿಲೇಯಲ್ಲಿ ಮೈಸೂರಿನ ವಿಕಾಸ್ ಪುತ್ರನ್, ಮನೋಹರ್, ಭರತ್‌ಕುಮಾರ್ ಮತ್ತು ಗಣೇಶ್ ಅವರು 3.17.77 ಸೆ.ಗಳಲ್ಲಿ ಕ್ರಮಿಸುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದ್ದು, ಈ ಹಿಂದಿನ ದಾಖಲೆ 3.20.50 ಸೆ. ಹಿಂದಿಕ್ಕಿದ್ದಾರೆ.
ಉಳಿದಂತೆ ಮಹಿಳೆಯರ ವಿಭಾಗದ 100 ಮೀ. ಓಟದಲ್ಲಿ ಬೆಂಗಳೂರು ನಗರದ ಎಚ್.ಎಂ. ಜ್ಯೋತಿ ಪ್ರಥಮ, ಮೈಸೂರಿನ ರೀನಾ ಜಾರ್ಜ್ ದ್ವಿತೀಯ, 800 ಮೀ. ಓಟದಲ್ಲಿ ಬೆಂಗಳೂರು ನಗರದ ಕೆ.ಸಿ. ಶ್ರುತಿ ಪ್ರಥಮ, ಆರ್.ಮಹಾಲಕ್ಷ್ಮಿ ದ್ವಿತೀಯ, ಉದ್ದ ಜಿಗಿತದಲ್ಲಿ ಬೆಂಗಳೂರು ನಗರದ ಜಾವಲೀನ್ ಲೋಬೋ ಪ್ರಥಮ, ಪ್ರಜ್ಞಾ ಪ್ರಕಾಶ್ ದ್ವಿತೀಯ, ಗುಂಡು ಎಸೆತ ಸ್ಪರ್ಧೆಯಲ್ಲಿ ಮೈಸೂರಿನ ಜಿ.ಕೆ. ನಮಿತಾ ಪ್ರಥಮ, ಪಿ.ಎಸ್. ಉಮಾ ದ್ವಿತೀಯ, 4್ಢ400 ಮೀ ರಿಲೇಯಲ್ಲಿ ಮೈಸೂರು ತಂಡ ಪ್ರಥಮ, ಬೆಂಗಳೂರು ನಗರ ತಂಡ ದ್ವಿತೀಯ ಸ್ಥಾನ ಗಳಿಸಿತು.
ಪುರುಷರ ವಿಭಾಗದ 100 ಮೀ. ಓಟದಲ್ಲಿ ಮೈಸೂರಿನ ಸೋನಿತ್ ಮೆಂಡನ್ ಪ್ರಥಮ, ವಿಕಾಸ್ ಪುತ್ರನ್ ದ್ವಿತೀಯ, 800 ಮೀ. ಓಟದಲ್ಲಿ ಬೆಳಗಾವಿಯ ಕೆ.ವಿಶ್ವಂಭರ ಪ್ರಥಮ, ಬೆಂಗಳೂರು ಗ್ರಾಮಾಂತರದ ಎನ್. ವಿನಯ್, ಉದ್ದ ಜಿಗಿತದಲ್ಲಿ ಮೈಸೂರಿನ ಅಮಿನ್‌ಕುಮಾರ್ ಪ್ರಥಮ, ಬೆಂಗಳೂರು ನಗರದ ಸೂರಜ್ ಮೆಂಡಲ್ ದ್ವಿತೀಯ, ಗುಂಡು ಎಸೆತದಲ್ಲಿ ಮೈಸೂರಿನ ಮೋಹನ್‌ಕುಮಾರ್ ಪ್ರಥಮ, ಬೆಂಗಳೂರು ನಗರದ ಶೀತಲ್‌ಕುಮಾರ್ ದ್ವಿತೀಯ, 4್ಢ400 ಮೀ. ರಿಲೇಯಲ್ಲಿ ಮೈಸೂರು ತಂಡ ಪ್ರಥಮ ಮತ್ತು ಬೆಂಗಳೂರು ನಗರ ತಂಡ ದ್ವಿತೀಯ ಸ್ಥಾನ ಗಳಿಸಿತು.
ಪುರುಷರ ಈಜು ಪಂದ್ಯಾವಳಿಯ 400 ಮೀ. ಫ್ರೀ ಸ್ಟೈಲ್‌ನಲ್ಲಿ ಮೈಸೂರಿನ ಹೇಮಂತ್ ಪ್ರಥಮ, ಬೆಂಗಳೂರು ನಗರದ ರೇಣುಕಾಪ್ರಸಾದ್ ದ್ವಿತೀಯ, 200 ಮೀ. ಬೆಸ್ಟ್ ಟ್ರೋಕ್‌ನಲ್ಲಿ ಬೆಂಗಳೂರು ನಗರದ ಜಿ. ಆಕಾಶ್ ರೋಹಿತ್ ಪ್ರಥಮ, ಜಿ.ಆದಿತ್ಯ ರೋಷನ್ ದ್ವಿತೀಯ, 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಂಗಳೂರು ನಗರದ ಜಿ.ಆಕಾಶ್ ರೋಹಿತ್ ಪ್ರಥಮ, ಮೈಸೂರಿನ ವಿ.ಬಿ. ಹೇಮಂತ್ ಜೇನುಕಲ್ ದ್ವಿತೀಯ, 200 ಮೀ. ಫ್ರೀ ಸ್ಟೈಲ್‌ನಲ್ಲಿ ಜಿ.ಬಿ. ಹೇಮಂತ್ ಜೇನುಕಲ್ ಪ್ರಥಮ, ಬೆಂಗಳೂರು ಗ್ರಾಮಾಂತರದ ಚಿನ್ಮಯ್ ಆರ್ ಶೆಟ್ಟಿ ದ್ವಿತೀಯ ಸ್ಥಾನಗಳಿಸಿದ್ದಾರೆ. 200 ಮೀ. ವೈಯಕ್ತಿಕ ಮೆಡ್ಲೇಯಲ್ಲಿ ಬೆಂಗಳೂರಿನ ಜಿ. ಆಕಾಶ್ ರೋಹಿತ್ ಪ್ರಥಮ, ಎಚ್.ಪುಷ್ಪಾನಂದ ದ್ವಿತೀಯ, 100 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಜಿ. ಆಕಾಶ್ ರೋಹಿತ್ ಪ್ರಥಮ, ಜಿ. ಆದಿತ್ಯ ರೋಷನ್ ದ್ವಿತೀಯ, 200 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಎಚ್. ಪುಷ್ಪಾನಂದ ಪ್ರಥಮ, ವಿ.ಬಿ. ಹೇಮಂತ್ ಜೇನುಕಲ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. 100 ಮೀ. ಫ್ರೀ ಸ್ಟೈಲ್‌ನಲ್ಲಿ ಬಿ. ಚೇತನ್ ಆರಾಧ್ಯ ಪ್ರಥಮ, ಎಚ್. ಪುಷ್ಪಾನಂದ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬೆಂಗಳೂರು ಪ್ರಥಮ: 4್ಢ100 ಮೀ ಮಿಡ್ಲೀ ರಿಲೇಯಲ್ಲಿ ಬೆಂಗಳೂರು ನಗರ ತಂಡ ಪ್ರಥಮ, ಮೈಸೂರು ತಂಡ ದ್ವಿತೀಯ, 4್ಢ100 ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಂಗಳೂರು ನಗರ ತಂಡ ಪ್ರಥಮ ಮತ್ತು ಬೆಳಗಾವಿ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ಮಹಿಳೆಯರ ವಿಭಾಗದ 400 ಮೀ. ಫ್ರೀ ಸ್ಟೈಲ್‌ನಲ್ಲಿ ಬೆಂಗಳೂರು ನಗರದ ವಿ. ಮಾಳವಿಕ ಪ್ರಥಮ, ಮೃಣಾಲಿನಿ ಆನಂದ್ ದ್ವಿತೀಯ, 200 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಂಗಳೂರು ನಗರದ ಶ್ರದ್ಧಾ ಸುಧೀರ್ ಪ್ರಥಮ, ರಿಯಾ ಸಿಂಗ್ ದ್ವಿತೀಯ, 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಂಗಳೂರು ಗ್ರಾಮಾಂತರದ ಸೌಂದರ್ಯ ಸುರೇಶ್ ಪ್ರಥಮ, ಎ.ಅರುಂಧತಿ ದ್ವಿತೀಯ, 100 ಮೀ. ಬಟರ್‌ಫ್ಲೇ ಸ್ಟ್ರೋಕ್‌ನಲ್ಲಿ ಬೆಂಗಳೂರು ನಗರದ ಕೆ. ಚಂದನ ಪ್ರಥಮ, ಮೈಸೂರಿನ ಸೋನಿಕ ಎಂ. ರಾಜ್ ದ್ವಿತೀಯ, 200 ಮೀ ಫ್ರೀ ಸ್ಟೈಲ್‌ನಲ್ಲಿ ಬೆಂಗಳೂರು ನಗರದ ವಿ. ಮಾಳವಿಕ ಪ್ರಥಮ, ಕೆ.ಚಂದನ ದ್ವಿತೀಯ, 200 ಮೀ. ವೈಯಕ್ತಿಕ ಮಿಡ್ಲೆಯಲ್ಲಿ ಬೆಂಗಳೂರು ನಗರದ ಶ್ರದ್ಧಾ ಸುಧೀರ್ ಪ್ರಥಮ, ಮೃಣಾಲಿನಿ ಎ.ಆನಂದ್ ದ್ವಿತೀಯ, 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಂಗಳೂರು ನಗರದ ರಿಯಾ ಸಿಂಗ್ ಪ್ರಥಮ, ಮೃಣಾಲಿನಿ ಎ. ಆನಂದ್ ದ್ವಿತೀಯ, 200 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಂಗಳೂರು ನಗರದ ಶ್ರದ್ಧಾ ಸುಧೀರ್ ಪ್ರಥಮ, ಮೈಸೂರಿನ ಎಂ. ಅರುಂಧತಿ ದ್ವಿತೀಯ, 100 ಮೀ. ಫ್ರೀ ಸ್ಟೈಲ್‌ನಲ್ಲಿ ಬೆಂಗಳೂರು ನಗರದ ವಿ. ಮಾಳವಿಕ ಪ್ರಥಮ, ಕೆ. ಚಂದನ ದ್ವಿತೀಯ ಸ್ಥಾನ ಪಡೆದಿದ್ದಾರೆ.
4್ಢ100 ಮೀ ಮಿಡ್ಲೀ ರಿಲೆ ಮತ್ತು 4್ಢ100 ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಕ್ರಮವಾಗಿ ಬೆಂಗಳೂರು ನಗರ ತಂಡ ಪ್ರಥಮ ಮತ್ತು ಮೈಸೂರು ತಂಡ ದ್ವಿತೀಯ ಸ್ಥಾನ ಪಡೆದಿದೆ.

ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.