ಅಗ್ನಿ ಮತ್ತು ಮಳೆ ನಾಟಕ ಪ್ರದರ್ಶನ
ಕ.ಪ್ರ.ವಾರ್ತೆ ಮೈಸೂರು ಅ. 7
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಟನ ತಂಡವು ಏರ್ಪಡಿಸಿರುವ ದ್ವಾದಶ ರಂಗೋತ್ಸವದ ಪ್ರಯುಕ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ್ ವಿರಚಿತ ಅಗ್ನಿ ಮತ್ತು ಮಳೆ ನಾಟಕವನ್ನು ಯಶಸ್ವಿಯಾಗಿ ಪ್ರಸ್ತುತಪಡಿಸಿತು.
ಪುರಾಣದಿಂದ ಆಯ್ದುಕೊಂಡ ವಸ್ತುವಾದರೂ, ಅತ್ಯಂತ ಆಧುನಿಕ ಪ್ರಜ್ಞೆಯಿಂದ ವಿವೇಚಿಸಲಾದ ನಾಟಕ, ಮಹಾಭಾರತದ ವನ ಪರ್ವದಿಂದ ಆಯ್ದುಕೊಂಡ ಪ್ರಸ್ತುತ ಪ್ರಯೋಗ ಬೌದ್ಧಿಕ ದುರಹಂಕಾರ ಮತ್ತು ಮನುಷ್ಯ ಪ್ರೀತಿ ನಡುವಿನ ಸಂಘರ್ಷ ಸಮರ್ಥ ಪ್ರಯೋಗವಾಗಿ ಮೂಡಿಬಂತು. ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.
ಸಂಗೀತ ಪ್ರಶಾಂತ್ ಹಿರೇಮಠ್ ನೀಡಿದ್ದಾರೆ. ನಟ, ರಂಗಕರ್ಮಿ ಮಂಡ್ಯ ರಮೇಶ್ ನಾಟಕ ನಿರ್ದೇಶಿಸಿದ್ದಾರೆ. ದ್ವಾದಶ ರಂಗೋತ್ಸವದಲ್ಲಿನ ನಾಳಿನ ನಾಟಕ ಗಾಂಧಿ ಅಂಬೇಡ್ಕರ್. ಮೂಲ ಮರಾಠಿ ಕೃತಿ ಪ್ರೇಮಾನಂದ ಗಜವಿ, ಕನ್ನಡಕ್ಕೆ ಡಿ.ಎಸ್. ಚೌಗಲೆ, ಸಂಗೀತ ವಿದ್ವಾನ್ ಆರ್.ಎಸ್. ನಂದಕುಮಾರ್ ಹಾಗೂ ನಿರ್ದೇಶನ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಅವರದು.
ತರಬೇತಿಗಾಗಿ ನೇರ ಸಂದರ್ಶನ
ಮೈಸೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ನಗರ ಸಾರಿಗೆ ವಿಭಾಗದ ಶಿಶಿಕ್ಷು ಅಧಿನಿಯಮದ ತಾಂತ್ರಿಕ ಮತ್ತು ಇತರೆ ವೃತ್ತಿಯಲ್ಲಿ ಪೂರ್ಣ ಅವಧಿಯ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು, ಆಯಾ ವೃತ್ತಿಗಳಿಗೆ ನಿಗದಿಪಡಿಸಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ ತಾಂತ್ರಿಕ ವೃತ್ತಿಗಳಿಗೆ ಸಲ್ಲಿಸಲು ಭರ್ತಿ ಮಾಡಿದ ನಿಗದಿತ ಅರ್ಜಿ ಮತ್ತು ಮೂಲ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಅ.11ರ ಬೆಳಗ್ಗೆ 9.30ಕ್ಕೆ ಶಿಶಿಕ್ಷು ಸಂದರ್ಶನ ರಾಜ್ಯ ರಸ್ತೆ ಸಾರಿಗೆ ನಿಗಮ, ನಗರ ಸಾರಿಗೆ ವಿಭಾಗ, ನೆಲ್ಸನ್ ಮಂಡೇಲಾ ರಸ್ತೆ, ಬನ್ನಿಮಂಟಪ, ಮೈಸೂರು ಇಲ್ಲಿ ಆಯ್ಕೆ ಸಮಿತಿ ಮುಂದೆ ಹಾಜರಾಗಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ನಿಯಂತ್ರಣಾಧಿಕಾರಿ, ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ನಗರ ಸಾರಿಗೆ ವಿಭಾಗ ಇವರನ್ನು ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ
ಮೈಸೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಹಾಗೂ ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಇವುಗಳಲ್ಲಿ ಒಬ್ಬ ವಿದ್ಯಾರ್ಥಿ ಯಾವುದಾದರೂ ಒಂದು ಸೌಲಭ್ಯಕ್ಕೆ ಮಾತ್ರ ಅರ್ಹರು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ವರ್ಷದಲ್ಲಿ ಉತ್ತೀರ್ಣರಾದ ಮೂಲ ಅಂಕಪಟ್ಟಿ, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಡಿಯಲ್ಲಿ ಇರುವ ಯಾವುದಾದರೂ ಬ್ಯಾಂಕಿನಲ್ಲಿ ವಿದ್ಯಾರ್ಥಿಯ ಹೆಸರಿನಲ್ಲಿ ಉಳಿತಾಯ ಖಾತೆ ತೆರೆದಿರಬೇಕು. (ಹೆಸರು, ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ಇರುವ ರೀತಿಯಲ್ಲಿ ಇರಬೇಕು) ಪಾಸ್ಬುಕ್ ಹೊಂದಿರಬೇಕು. ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್ಎಸ್ಸಿ ಕೋಡ್ ಇರುವ ಮೊದಲ ಪುಟದ ಭಾಗದ ಪ್ರತಿ, ಆಧಾರ್ ಸಂಖ್ಯೆ ಹೊಂದಿರುವುದು ಸೂಕ್ತ. ಇವು ಇದ್ದಲ್ಲಿ ಅದರ ಪ್ರತಿ ಅಥವಾ ಇಐಡಿ ದಾಖಲೆಯ ಪ್ರತಿ, ಪಡಿತರ ಚೀಟಿ ಇದ್ದಲ್ಲಿ ಅದರ ಪ್ರತಿ. ಯಾವ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆಯಲಾಗಿದೆ ಎಂಬ ಬಗ್ಗೆ ದಾಖಲಾತಿ ಇರಬೇಕು. ಮೂಲ ದಾಖಲೆಗಳನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿಟ್ಟುಕೊಂಡಿದ್ದು, ಅರ್ಜಿ ಸಲ್ಲಿಸುವಾಗ ಇವುಗಳನ್ನು ಅಪ್ಲೋಡ್ ಮಾಡಬೇಕು. ಅ.15 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಗಳ ಕಲ್ಯಾಣ ಅಧಿಕಾರಿ, ಮೈಸೂರು, ದೂ.2342917 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

