'ವಿದ್ಯಾರ್ಥಿಗಳಿಗೆ ಉನ್ನತಿ ಸಾಧಿಸುವ ಗುರಿಯಿರಲಿ'
ಕ.ಪ್ರ.ವಾರ್ತೆ ಮೈಸೂರು ಅ. 7
ವಿದ್ಯಾರ್ಥಿಗಳು ಉನ್ನತಿ ಸಾಧಿಸುವ ಗುರಿ ಹೊಂದಿರಬೇಕು ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಡಿ. ಶ್ರೀಜಯದೇವರಾಜೇ ಅರಸ್ ಹೇಳಿದರು.
ಶಾರದಾ ವಿಲಾಸ ಕಾಲೇಜು ಹಾಗೂ ಮೈಸೂರು ವಿವಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವೃತ್ತಿ ಸಮ್ಮೇಳನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಯನ ಮಾಡುತ್ತಿರುವ ವಿಷಯದಲ್ಲಿ ಅಥವಾ ಬದುಕಿನಲ್ಲಿ ಉನ್ನತಿ ಸಾಧಿಸುವ ಗುರಿಯನ್ನು ವಿದ್ಯಾರ್ಥಿಗಳು ಹೊಂದುವ ಅಗತ್ಯವಿದೆ. ತಮಗೆ ದೊರಕುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಇಂತಹ ಸಾಧನೆ ಸಾಧ್ಯ ಎಂದರು.
ಹಿಂದಿನ ವಿದ್ಯಾರ್ಥಿಗಳಿಗೆ ಸೌಲಭ್ಯ ಹಾಗೂ ಮಾರ್ಗದರ್ಶನದ ಕೊರತೆಯಿತ್ತು. ಆದರೆ ಇಂದು ಅವುಗಳು ಲಭ್ಯವಿದೆ. ಸೃಜನಶೀಲತೆ ಬಳಸಿಕೊಂಡು ಕ್ರಿಯಾಶೀಲರಾಗುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಅಗತ್ಯಕ್ಕೆ ತಕ್ಕೆ ತರಬೇತಿ: ಮುಖ್ಯ ಅತಿಥಿಯಾಗಿ ಮಾತನಾಡಿದ ಮೈಸೂರು ವಿವಿ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರದ ಮುಖ್ಯಸ್ಧ ಪ್ರೊ.ಎನ್. ನಿಂಗಯ್ಯ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷರಷ್ಟೇ ಸಮ ಪ್ರಮಾಣದಲ್ಲಿ ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ. ಅವರ ಅಗತ್ಯಕ್ಕೆ ತಕ್ಕಂತೆ ಮಾರ್ಗದರ್ಶನವನ್ನು ತಮ್ಮ ಕೇಂದ್ರ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎ.ಆರ್. ನಾಗಭೂಷಣ, ಅಧ್ಯಯನ ವಿಷಯ ಹಾಗೂ ವೃತ್ತಿಯ ಆಯ್ಕೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲವಿದೆ. ಇದನ್ನು ಪರಿಹರಿಸಿ ಅವರಿಗೆ ಸ್ಪಷ್ಟ ದಾರಿಯನ್ನು ತೋರಿಸುವಲ್ಲಿ ಈ ಕಾಲೇಜು ಸಕ್ರಿಯವಾಗಿದೆ ಎಂದು ಅವರು ತಿಳಿಸಿದರು. ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ಸಂಚಾಲಕ ಡಾ.ಆರ್. ಗುರುರಾಜ್ ಇದ್ದರು. ಕಿರಣ್ ಸ್ವಾಗತಿಸಿದರು. ಎಸ್. ವಿಮಲ ನಿರೂಪಿಸಿದರು. ಸುಪ್ರಿಯಾ ಸ್ವಾಗತಿಸಿದರು. ನಂತರ ಪದವಿ ನಂತರ ಮುಂದೇನು ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿ ಎ. ವೆಂಕಟೇಶಪ್ಪ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

