ಛಾಯಾಗ್ರಾಹಕರ ಸಂಘದ ಸದಸ್ಯರ ಪ್ರತಿಭಟನೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಅ. 8
ತಾಲೂಕಿನಲ್ಲಿ ಸರ್ಕಾರಿ ನೌಕರರು ಡಿಜಿಟಲ್ ಕ್ಯಾಮೆರಾಗಳನ್ನು ಬಳಸಿ ಫೋಟೋ ತೆಗೆಯುತ್ತಿರುವುದನ್ನು ವಿರೋಧಿಸಿ ತಾಲೂಕು ಛಾಯಾಗ್ರಾಹಕ ಸಂಘದ ಸದಸ್ಯರು ಮಂಗಳವಾರ ತಾಲೂಕಿನ ಪ್ರಮುಖ ಬೀದಿಗಳಲ್ಲಿ ಪ್ರತಿಭಟಿಸಿದರು.
ಛಾಯಾಗ್ರಾಹಕ ಸಂಘದ ಅಧ್ಯಕ್ಷ ನಂದಕುಮಾರ್ ಶೈಲಿ ಮಾತನಾಡಿ, ನಾವು ತೆಗೆದು ಕೊಡುತ್ತಿದ್ದ ಛಾಯಾಚಿತ್ರಗಳನ್ನು ಗ್ರಾಪಂ ನೌಕರರು ಹೆಚ್ಚಿನ ಹಣ ಪಡೆಯುದಲ್ಲದೆ, ಸರ್ಕಾರಿ ಸಂಬಳವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರೀತಿ ಸರ್ಕಾರಿ ನೌಕರರು ತಾವೇ ಫೋಟೋ ತೆಗೆಯುವುದರಿದ ಜೀವನ ಸಾಗಿಸಲು ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರಿ ನೌಕರರ ವಿರುದ್ಧ ಘೋಷಣೆ ಕೂಗಿ, ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಕೆ. ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ತಹಸೀಲ್ದಾರ್ ಮಾತನಾಡಿ, ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನೌಕರರಿಗೆ ತಾಕೀತು ಮಾಡುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಅಧ್ಯಕ್ಷರಾದ ನಾಗೇಶ್, ಮನೋಜ್, ಕಸ್ತೂರಿ ಸತೀಶ್, ರಾಜುಸಾಗರ್, ಕನ್ನಡ ಪ್ರಮೋದ್, ಪ್ರಧಾನ ಕಾರ್ಯದರ್ಶಿ ಸ್ವಾಮಿ, ಖಜಾಂಚಿ ಸುರೇಶ್, ಉಪಾಧ್ಯಕ್ಷ ವನಸಿರಿ ಶಂಕರ್, ಸದಸ್ಯರಾದ ಕೆಂಡಗಣ್ಣಾರಾಧ್ಯ, ನಾಗರಾಜು, ರಾಜೇಶ್, ನೂರಲಕುಪ್ಪೆ ಶಿವಣ್ಣ, ಗುರುಸ್ವಾಮಿ, ಜವರಾಜು, ಚಲುವೇಗೌಡ, ಬಾಲು, ಜಯರಾಮ್, ಕೃಷ್ಣ, ರಘುರಾಮ್, ರಾಜೇಶ್, ರವಿ, ವೆಂಕಿ, ಮಂಜು, ಮಧು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

