ಅಭಿವೃದ್ಧಿ ಕಾರ್ಯಗಳಿಗೆ ಶೀಘ್ರ ಚಾಲನೆ: ಶಾಸಕ ವೆಂಕಟೇಶ್
ಪಿರಿಯಾಪಟ್ಟಣ: ಹಂತ ಹಂತವಾಗಿ ಪಿರಿಯಾಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ಮಸಣೀಕಮ್ಮ ದೇವಾಲಯದ ಸುತ್ತ ಸಣ್ಣ ನೀರಾವರಿ ಇಲಾಖೆ ವತಿಯಿಂದ 1.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇವಸ್ಥಾನದ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹೆಚ್ಚು ಅನಕೂಲ ಕಲ್ಪಿಸುವ ದೃಷ್ಟಿಯಿಂದ ದೇವಾಲಯದ ಸುತ್ತ ಬಾಕ್ಸ್ ಕವರ್ ಡಕ್ ನಿರ್ಮಾಣ, ಸೈಡ್ವಾಲ್ ನಿರ್ಮಾಣ ಹಾಗೂ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಮುಜರಾಯಿ ಇಲಾಖೆ ವತಿಯಿಂದ ದೇವಾಲಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನೂ ಮಾಡಿಸಲಾವುದು ಎಂದು ತಿಳಿಸಿದರು.
ತಾಪಂ ಸದಸ್ಯ ಮಹದೇವ್, ಪಪಂ ಸದಸ್ಯರಾದ ಅನಿತಾ ಶೇಖರ್, ಸೌಭಾಗ್ಯ, ಅಬ್ದುಲ್ ಅಜೀಜ್, ಮಂಜು, ಮಾಜಿ ಸದಸ್ಯ ಪಿ.ಎಂ. ರಾಜು, ಟಿಎಪಿಸಿಎಂಎಸ್ ನಿರ್ದೇಶಕ ಪಿ.ಎನ್. ಚಂದ್ರಶೇಖರ್, ದೇವಾಲಯದ ಮಾಜಿ ಧರ್ಮದರ್ಶಿ ವೆಂಕಟಸುಬ್ಬಯ್ಯ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ಗಳಾದ ಕಾಂತರಾಜು, ಭಾಸ್ಕರ್, ಗುತ್ತಿಗೆದಾರ ಶ್ರೀನಿವಾಸಲುರೆಡ್ಡಿ, ಮುಖಂಡರಾದ ಪಿ.ಎಂ. ಶಾಂತಪ್ಪ, ಪಿ.ಆರ್. ಶಿವಾನಂದ್, ವಿಷಕಂಠಯ್ಯ, ಸುರೇಶ್, ಪಿ. ಮಹದೇವ್, ಪಿ.ಎಸ್. ಹರೀಶ್, ಎಸ್. ರಾಮು, ಅಣ್ಣಯ್ಯ, ಲವಕುಮಾರ್, ಅರ್ಚಕರಾದ ಗಿರೀಶ್, ಬಾಲಾಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

