ಪ್ರಜ್ವಲ ಕಣ್ಣಿನ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ
ಕ.ಪ್ರ. ವಾರ್ತೆ, ಮೈಸೂರು, ಅ.9
ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿದ್ದಾರ್ಥನಗರದಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯೋಜನಾ ಪ್ರಜ್ವಲ ಕಣ್ಣಿನ ಆಸ್ಪತ್ರೆಯ 3ನೇ ಹಂತದ ಕಟ್ಟಡ ನಿರ್ಮಾಣಕ್ಕೆ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಇಟ್ಟುಕೊಂಡು ಸಮಾನ ಮನಸ್ಕರರೆಲ್ಲಾ ಸೇರಿ ರಚಿಸಿಕೊಂಡಿರುವ ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂದಿನ ಒತ್ತಡ ಜೀವನದಲ್ಲಿ ಮನುಷ್ಯ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಅದರಲ್ಲಿ ಕಣ್ಣಿನ ರೋಗಗಳಿಂದ ಹೊರತಾಗಿಲ್ಲ. ಹೀಗಿರುವಾಗ ಕಣ್ಣಿನ ವಿಭಾಗ ಸೂಕ್ಷ್ಮತೆಯ ವಿಭಾಗವಾಗಿದ್ದು, ಇದಕ್ಕೆ ಚಿಕಿತ್ಸೆ ನೀಡುವುದು, ಅಂಧತ್ವ ಹೋಗಲಾಡಿಸಲು ಕೈಗೊಂಡ ಕ್ರಮ ಪ್ರಶಂಸನೀಯ ಎಂದರು.
ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಎಂಆರ್ಸಿ ಕಣ್ಣಿನ ಆಸ್ಪತ್ರೆಗೆ ಐ- ಬ್ಯಾಂಕ್ ಮಂಜೂರು ಮಾಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಮೈಸೂರು ರೇಸ್ ಕ್ಲಬ್ ಸದಸ್ಯ, ಉದ್ಯಮಿ ಆರ್. ಗುರು ಎಂಆರ್ಸಿ ಕಣ್ಣಿನ ಆಸ್ಪತ್ರೆಯ ವೆಬ್ಸೈಟ್ ಬಿಡುಗಡೆ ಮಾಡಿದರು. ಆಸ್ಪತ್ರೆಯ ಅಭಿವೃದ್ಧಿಗೆ ಕ್ಲಬ್ನ ಸದಸ್ಯ ವಿಶ್ವನಾಥ್ ಅಯ್ಯರ್ 15 ಲಕ್ಷ, ಗುರು ಅವರು 10 ಲಕ್ಷ ದೇಣಿಗೆ ನೀಡಿದರು.
ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಡಾ. ಸತ್ಯನಾರಾಯಣ, ಮಾಜಿ ಅಧ್ಯಕ್ಷರಾದ ಕೆ.ಎ. ಮುದ್ದಪ್ಪ, ಬಿ.ಜಿ. ಮುತ್ತಪ್ಪ, ಎನ್.ಎಂ. ಶ್ರೀನಿವಾಸ, ಮೈಸೂರು ರೇಸ್ ಕ್ಲಬ್ ಆಸ್ಪತ್ರೆಯ ಸಮಿತಿ ಅಧ್ಯಕ್ಷ ಡಾ. ಸಿ.ಡಿ. ನಿವಾಸಮೂರ್ತಿ, ಡಾ. ಎನ್. ನಿತ್ಯಾನಂದ ರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

